ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾದ ಸಿದ್ದಾಪುರ - ವಿರಾಜಪೇಟೆ ರಸ್ತೆ ಮಧ್ಯೆ ಜಯಲಕ್ಷ್ಮಿ ಬೇಕರಿ ಎದುರು ಚರಂಡಿ ಹೂಳೆತ್ತಲಾಗಿದ್ದು, ತ್ಯಾಜ್ಯ ಮಿಶ್ರಿತ ಮಣ್ಣು ಗುಡ್ಡೆಯನ್ನು ಅಲ್ಲೇ ಹಾಕಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಪಿಕ್ ಜಾಮ್ ಸಮಸ್ಯೆ ಏರ್ಪಟ್ಟಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ.
ಸಿದ್ದಾಪುರ: ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾದ ಸಿದ್ದಾಪುರ - ವಿರಾಜಪೇಟೆ ರಸ್ತೆ ಮಧ್ಯೆ ಜಯಲಕ್ಷ್ಮಿ ಬೇಕರಿ ಎದುರು ಚರಂಡಿ ಹೂಳೆತ್ತಲಾಗಿದ್ದು, ತ್ಯಾಜ್ಯ ಮಿಶ್ರಿತ ಮಣ್ಣು ಗುಡ್ಡೆಯನ್ನು ಅಲ್ಲೇ ಹಾಕಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಪಿಕ್ ಜಾಮ್ ಸಮಸ್ಯೆ ಏರ್ಪಟ್ಟಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಆಗಿದೆ.
ಮೊದಲೇ ಕಿರಿದಾಗಿರುವ ಈ ರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಣ್ಣು ರಾಶಿ ಹಾಗೆಯೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಸ್ಥಳೀಯ ಪಂಚಾಯಿತಿ ನಿರ್ಲಕ್ಯವೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಹಾಗೂ ವಾಹನ ಸವಾರರು ಕೂಡಲೇ ಈ ಗುಡ್ಡೆಯನ್ನು ತೆರವು ಗೊಳಿಸುವ ಮೂಲಕ ಸ್ಥಳೀಯ ಆಡಳಿತ ಸುಗಮ ಸಂಚಾರಕ್ಕೆ ಅನುವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.