ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಬ್ರಹ್ಮೋತ್ಸವದ 1ನೇ ತಿರುನಾಳ್ ಅಂಗವಾಗಿ ದ್ವಜಾರೋಹಣದ ನಿಮಿತ್ತ ಬೆಳಗ್ಗೆ 9.30ಕ್ಕೆ ಗರುಡದೇವನನ್ನು ಪಟದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಹೋಮ ಹವನಾದಿ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. 3ನೇ ಸ್ಥಾನೀಕರಿಂದ ಗರುಡಸಾಮ ಮಂತ್ರಪಠಣ ನೆರವೇರಿದ ನಂತರ ಚಿನ್ನದ ದ್ವಜಸ್ಥಂಭದ ಮೇಲೆ ಗರುಡ ದ್ವಜಾರೋಹಣ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಪುತ್ರ ಸಚಿನ್ ದಂಪತಿ ಸಮೇತ ದ್ವಜಾರೋಹಣದಲ್ಲಿ ಭಾಗಿಯಾಗಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಚೆಲುವನಾರಾಯಣಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದರು.ಆರಿದ್ರಾ ಮಾಸ ತಿರುನಕ್ಷತ್ರದ ಅಂಗವಾಗಿ ಭಗವದ್ರಾಮಾನುಜಾಚಾರ್ಯರಿಗೆ ಬೆಳಗ್ಗೆ ಅಭಿಷೇಕ ನೆರವೇರಿತು. ನಂತರ ಶಾತ್ತುಮೊರೈ ಸಹಿತವಾದ ಮಹಾಮಂಗಳಾರತಿ ನೆರವೇರಿಸಲಾಯಿತು. ಭೇರಿತಾಡನ ತಿರುಪ್ಪೊರೈ ನಡೆಜು ಚೆಲುವನಾರಾಯಣಸ್ವಾಮಿಗೆ ರಾತ್ರಿ ಹಂಸವಾಹನ ಕಾರ್ಯಕ್ರಮಗಳು ನಡೆದವು. ಎರಡನೇ ತಿರುನಾಳ್ ನಿಮಿತ್ತ ಶನಿವಾರ ರಾತ್ರಿ 7 ಗಂಟೆಗೆ ಶೇಷವಾಹನೋತ್ಸವ ವೈಭವದಿಂದ ನೆರವೇರಲಿದೆ.