ಏಕನಾಥ ಮೆದಿಕೇರಿ ಹನುಮಸಾಗರ
971 ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ್ದಾರೆ. ಆದರೆ ಸಿಲಿಂಡರ್ ವಿತರಣಾ ವಾಹನ ಗ್ರಾಮಗಳಿಗೆ ತಲುಪಿದಾಗ ಬುಕ್ ಮಾಡಿದವರ ಪೈಕಿ 400 ರಿಂದ 500 ಜನರ ಬಳಿ ಖಾಲಿ ಸಿಲಿಂಡರ್ ಇರುವುದಿಲ್ಲ. ಸಿಲಿಂಡರ್ ಖಾಲಿಯಾಗುವ ಮೊದಲೇ ಬುಕ್ ಮಾಡುವುದರಿಂದ ಈ ಸಮಸ್ಯೆ ಆಗಿದೆ. ಇದರಿಂದ ಅವಶ್ಯಕತೆ ಇರುವವರಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.
ಈ ಗ್ಯಾಸ್ ವಿತರಣಾ ಕೇಂದ್ರವು ಹನುಮಸಾಗರ ಸುತ್ತಮುತ್ತಲಿನ 68 ಗ್ರಾಮಗಳ ಜವಾಬ್ದಾರಿ ಹೊತ್ತಿದೆ. ಪ್ರತಿದಿನ ಎರಡರಿಂದ ಮೂರು ವಾಹನ ನಿರಂತರವಾಗಿ ವಿತರಣೆ ಮಾಡುತ್ತಿದ್ದರೂ ಬುಕ್ಕಿಂಗ್ ಸಂಖ್ಯೆ ಏರುತ್ತಲೆ ಇದೆ.ಹೊಸ ನಿಯಮ: ಫೋನ್ ಮೂಲಕ ಬುಕ್ ಮಾಡಿದವರಿಗೆ ತಕ್ಷಣ ಡಿಎಸಿ ಸಂಖ್ಯೆ ಬರದಿದ್ದರೆ ಆತಂಕ ಪಡಬೇಕಿಲ್ಲ. ಬುಕ್ಕಿಂಗ್ ಮಾಡಿದ 4 ದಿನಗಳ ನಂತರ ಕಚೇರಿಗೆ ಬಂದು ಮೊಬೈಲ್ ಮೇಸೆಜ್ ಅಪ್‌ಡೆಟ್ ಮಾಡಿಸಿಕೊಳ್ಳಬಹುದು.
ಹೋಟೆಲ್, ಖಾನಾವಳಿ ಸ್ಥಿತಿ ಗಂಭೀರ: ವಾಣಿಜ್ಯ ಸಿಲಿಂಡರ್ ಅಭಾವ ತೀವ್ರವಾಗಿದ್ದು, ಹೋಟೆಲ್, ಖಾನಾವಳಿ ಹಾಗೂ ಡಾಬಾ ನಡೆಸುವವರಿಗೆ ಸಂಕಷ್ಟ ಎದುರಾಗಿದೆ. ತಿಂಗಳಿಗೆ 10 ಸಿಲಿಂಡರ್ ಬಳಸುತ್ತಿದ್ದವರಿಗೆ ಈಗ ಕೇವಲ 3 ಸಿಲಿಂಡರ್ ಮಾತ್ರ ನೀಡಲಾಗುತ್ತಿದೆ. ಪೂರೈಕೆಯಲ್ಲಿ ಶೇ. 70ರಷ್ಟು ಕಡಿತ ಮಾಡಿದ್ದರಿಂದ ವ್ಯಾಪಾರಸ್ಥರು ಅನಿವಾರ್ಯವಾಗಿ ಕಟ್ಟಿಗೆ, ಕರೆಂಟ್ ಒಲೆಗಳ ಮೊರೆ ಹೋಗುತ್ತಿದ್ದಾರೆ.