ಗೌಡೇಟಿ ಪ್ರಭಾಕರ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ

KannadaprabhaNewsNetwork |  
Published : May 07, 2026, 01:30 AM IST
ಫೋಟೋ 6ಪಿವಿಡಿ2ಪಾವಗಡ,ಜಮೀನು ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಸಮಾಜ ಸೇವಕ ಪ್ರಭಾಕರ್‌ ವಿರುದ್ದ ಪತ್ರಿಕಾಗೋಷ್ಟಿಯಲ್ಲಿ ಸತ್ಯನಾರಾಯಣ ಶಾಸ್ತ್ರಿ ಹಾಗೂ ಕೃಷ್ಣಮೂರ್ತಿ ಆರೋಪ ಮಾಡಿದರು. | Kannada Prabha

ಸಾರಾಂಶ

ಇತ್ತೀಚೆಗೆ ಜಮೀನು ಖಾತೆಗಳ ಪರಬಾರೆ ವಿಚಾರಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಹಾಗೂ ಗ್ರಾಮ ಆಡಳಿತಾಧಿಕಾರಿಯ ವಿರುದ್ಧ ತಾಲೂಕಿನ ಗೌಡೇಟಿ ಪ್ರಭಾಕರ್ ಮಾಡಿರುವ ಆರೋಪ ಸತ್ಯಕ್ಕೆ ದೂರ

ಕನ್ನಡಪ್ರಭ ವಾರ್ತೆ ಪಾವಗಡ ಇತ್ತೀಚೆಗೆ ಜಮೀನು ಖಾತೆಗಳ ಪರಬಾರೆ ವಿಚಾರಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಹಾಗೂ ಗ್ರಾಮ ಆಡಳಿತಾಧಿಕಾರಿಯ ವಿರುದ್ಧ ತಾಲೂಕಿನ ಗೌಡೇಟಿ ಪ್ರಭಾಕರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಅವರ ಆರೋಪಕ್ಕೂ ನಮ್ಮ ಜಮೀನಿಗೂ ಸಂಬಂಧವೇ ಇಲ್ಲ ಎಂದು ರೈತ ಸತ್ಯನಾರಾಯಣಶಾಸ್ತ್ರಿ ಹಾಗೂ ಮಹಾ ಆದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣಶಾಸ್ತ್ರಿ ತಹಸೀಲ್ದಾರ್‌ ಹಾಗೂ ಇತರೆ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಮಾದ್ಯಮಗಳ ಮೂಲಕ ಏಕವಚನದಲ್ಲಿ ಪ್ರಭಾಕರ್ ಮಾತನಾಡಿದ್ದು ಅವರ ನಡೆ ಸೂಕ್ತವಲ್ಲ ಎಂದು ಆಕ್ರೋಶ ಹೊರಹಾಕಿದರು.

ತಾಲೂಕಿನ ಕನಕಪುರ ಗ್ರಾಮದ ಸರ್ವೆ ನಂಬರ್ 11/1ರಲ್ಲಿನ ಇನಾಂತಿ ಜಮೀನು ಪುರೋಹಿತರಿಗೆ ಸರ್ಕಾರದಿಂದ ಮಂಜೂರಾಗಿತ್ತು. ಈ ಜಮೀನನ್ನು ಪ್ರಭಾಕರ್ ಅವರು ತಮ್ಮ ಅಳಿಯನಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದು, ಲೋಕಅದಾಲತ್ ಮೂಲಕ ವ್ಯವಹಾರ ನಡೆಸಿದ್ದಾರೆ. ನಂತರ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ತಕರಾರು ಬಂದಿದೆ. ಈ ತಕರಾರು ಅರ್ಜಿಯು ಪ್ರಸ್ತುತ ತಹಸೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಹೀಗಿರುವಾಗ ಪ್ರಭಾಕರ್ ಅವರು ಪತ್ರಿಕಾಗೋಷ್ಠಿ ಕರೆದು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸುವುದು ಮತ್ತು ಅವರನ್ನು ಏಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ ಎಂದರು.

ದೂರುದಾರರು ಮಾಡುತ್ತಿರುವ ಆರೋಪಗಳಲ್ಲಿ ನೈಜತೆಯಿಲ್ಲ, ನಮ್ಮ ಹೆಸರನ್ನು ಅಥವಾ ಕುಟುಂಬದ ಹೆಸರನ್ನು ಬಳಸಿಕೊಂಡು ಜಮೀನಿನ ವಿಚಾರದಲ್ಲಿ ಇಲ್ಲಸಲ್ಲದ ವಿವಾದ ಸೃಷ್ಟಿಸಿದ್ದು ಅಧಿಕಾರಿಗಳ ಮೇಲೆ ಆರೋಪ ಮಾಡುವ ಉದ್ದೇಶದಿಂದ ನಮ್ಮನ್ನು ಎಳೆದು ತಂದಿದ್ದಾರೆ. ವಂಶವೃಕ್ಷವೇ ಸುಳ್ಳಿನಿಂದ ಕೂಡಿದೆ.ಆ ವಂಶವೃಕ್ಷದಲ್ಲಿರುವ ಹೆಸರುಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ನಕಲಿ ವಂಶವೃಕ್ಷ ಸೃಷ್ಟಿಸಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಮಹಾ ಅದಿಗ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಗೌಡೇಟಿ ಪ್ರಭಾಕರ್ ರವರೇ ಸ್ವತಃ ಪ್ರಭಾಕರ್ ಅವರೇ ಭೂ ಕಬಳಿಕೆ ಮಾಡಿದ್ದು, ಕನಕಪುರ ಸರ್ವೆ ನಂಬರ್ 20 ರಲ್ಲಿ ಸರ್ಕಾರದಿಂದ 4 ಎಕರೆ ಮಂಜೂರಾಗಿದೆ. ಮತ್ತೊಂದು 4 ಎಕರೆ ಜಮೀನನ್ನು ಇವರು ಅಕ್ರಮವಾಗಿ ಕಬಳಿಸಿದ್ದಾರೆ. ಇವರು ಕನಕಪುರ ಗ್ರಾಮದಲ್ಲಿ ಪ್ರಾರಂಭಿಸಿರುವ ಬಾರ್ ಅಂಡ್ ರೆಸ್ಟೋರೆಂಟ್ ನಿವೇಶನವು ಭೂ ಪರಿವರ್ತನೆ ಆಗಿಲ್ಲ. ದಲಿತ ಸಮುದಾಯದಿಂದ ಬಂದ ಅಧಿಕಾರಿಗಳನ್ನು ಅವಹೇಳನಕಾರಿಯಾಗಿ ಮಾತನಾಡಿಸುವುದು ಸಮಂಜಸವಲ್ಲ. ಪ್ರಭಾಕರ್ ತಮ್ಮ ಹಿತಾಸಕ್ತಿಗೆ ತಕ್ಕಂತೆ ದಾಖಲೆಗಳನ್ನು ವಿಶ್ಲೇಷಿಸುತ್ತಿದ್ದು,ಇದೇ ರೀತಿ ಸುಳ್ಳು ಆರೋಪಗಳನ್ನು ಮುಂದುವರೆಸಿದರೆ, ದಲಿತಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಸಜ್ಜಾಗುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಿತಾಂಶ ರದ್ದು ಪಡಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲಿ: ಎಂ.ಆರ್.ರವಿಶಂಕರ್ ಆಗ್ರಹ
ವೀರ ಯೋಧರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು