ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ-ಮಗನ ಜೋಡಿಯೇ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಪಾವಗಡ ಬಡತನ ಎಂಬುದು ಸಾಧನೆಗೆ ಅಡ್ಡಿಯಲ್ಲ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಪಾವಗಡ ತಾಲೂಕಿನ ಈ ತಂದೆ-ಮಗನ ಜೋಡಿಯೇ ಸಾಕ್ಷಿಯಾಗಿದೆ. ಇದೇ ತಾಲೂಕಿನ ನ್ಯಾಯದಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಜ್ಜಾರಹಳ್ಳಿ ಗ್ರಾಮದ ಬಡ ಕುಟುಂಬವೊಂದರ ನಿವಾಸಿಯಾದ ಗಂಗಾಧರಯ್ಯ ಅವರು ಪುತ್ರ ಡಾ.ಹರ್ಷವರ್ಧನ್ ಎಂಬಿಬಿಎಸ್ ಮಾಡುವ ಮೂಲಕ ಇಡೀ ತಾಲೂಕು ಹೆಮ್ಮೆಪಡುವಂತಹ ಕೆಲಸ ಮಾಡಿದ್ದು, ತಂದೆ ಗಂಗಾಧರಯ್ಯ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಾ, ಅಹೋರಾತ್ರಿ ಕಷ್ಟಪಟ್ಟು ತಮ್ಮ ಮಗನನ್ನು ಎಂಬಿಬಿಎಸ್ ವ್ಯಾಸಂಗ ಮಾಡಿಸಿದ್ದ ಹಿನ್ನಲೆಯಲ್ಲಿ ಇಂದು ಅವರ ಪುತ್ರ ಡಾ.ಹರ್ಷವರ್ಧನ್ ವೈದ್ಯನಾಗಿ ರೂಪಗೊಂಡಿದ್ದಾರೆ.
ಹಸಿವಿನ ನಡುವೆ ಕಂಡ ದೊಡ್ಡ ಕನಸು: ಗ್ರಾಮೀಣ ಭಾಗದ ಸಾಮಾನ್ಯ ಕುಟುಂಬದಿಂದ ಬಂದ ಗಂಗಾಧರಯ್ಯ ಅವರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ತಿಳಿದಿತ್ತು.ಕಳೆದ 10ವರ್ಷದ ಹಿಂದೆ ಕೂಲಿ ಕೆಲಸ ಹಾಗೂ, ಸಣ್ಣಪುಟ್ಟ ಉದ್ಯೋಗವೋ ಯಾವುದನ್ನೂ ಲೆಕ್ಕಿಸದೆ ಮಗನ ಭವಿಷ್ಯಕ್ಕಾಗಿ ಬೆಂಗಳೂರಿಗೆ ಪಯಣ ಬೆಳೆಸಿದರು. ಅಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿ ಕೆಲಸಕ್ಕೆ ಸೇರಿದ ಅವರು, ಬರುವ ಅಲ್ಪ ಆದಾಯದಲ್ಲೇ ಮಗನ ದುಬಾರಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಸರಿದೂಗಿಸಿದರು.ಗ್ರಾಮಸ್ಥರ ಮೆಚ್ಚುಗೆ: ತಂದೆ ಗಂಗಾಧರಯ್ಯ ಅವರ ಈ ಸಾಧನೆಯನ್ನು ಕಂಡು ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ವಂತ ಊರು ಬಿಟ್ಟು ಪರವೂರಿನಲ್ಲಿ ಕಷ್ಟಪಟ್ಟು ಮಗನನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ ಗಂಗಾಧರಯ್ಯ ಅವರು ಎಲ್ಲರಿಗೂ ಮಾದರಿ ಎಂದು ಗ್ರಾಮಸ್ಥರು ಸಂತಸ ಹಂಚಿಕೊಂಡಿದ್ದಾರೆ. ಬಡ ಕುಟುಂಬದ ಹಿನ್ನಲೆಯಲ್ಲಿ ಬೆಳೆದು ತಮ್ಮ ಮಗ ಡಾ.ಹರ್ಷವರ್ಧರನ್ನು ಈ ಉನ್ನತ ವ್ಯಾಸಂಗ ಮಾಡಿಸುವ ಮೂಲಕ ಎಂಬಿಬಿಎಸ್ ಮಟ್ಟಕ್ಕೆ ಬೆಳೆಸಿದ ತಂದೆ ಗಂಗಾಧರಯ್ಯ ಹಾಗೂ ಪುತ್ರ ಡಾ.ಹರ್ಷವರ್ಧನ್ ಅವರಿಗೆ ಪಾವಗಡಯ ಠಾಣೆ ಪೊಲೀಸ್ ಗೋವಿಂದರಾಜು, ಪರಮೇಶ್ವರಪ್ಪ,ನಾಗರಾಜ್ ಓಬಳಾಪುರ ತಿಪ್ಪೇಸ್ವಾಮಿ ಇತರೆ ಅನೇಕ ಮಂದಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಬಾಕ್ಸ್....
ತಂದೆಯ ಶ್ರಮಕ್ಕೆ ಮಗನ ಪ್ರತಿಫಲ ಮಗ ಕೂಡ ತಂದೆಯ ಕಷ್ಟವನ್ನು ಅರ್ಥಮಾಡಿಕೊಂಡು ರಾತ್ರಿ-ಹಗಲು ಓದುವ ಅಭ್ಯಾಸ ಮಾಡಿ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಒಬ್ಬ ಸಾಮಾನ್ಯ ಸೆಕ್ಯೂರಿಟಿ ಸೂಪರ್ವೈಸರ್ ಮಗ ಇಂದು ಡಾಕ್ಟರ್ ಆಗಿ ಹೊರಬಂದಿರುವುದು ಗುಜ್ಜಾರಹಳ್ಳಿ ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ಪಾವಗಡ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.