ವಿವಿಧೆಡೆ ಬೃಹತ್ ಆಕರ್ಷಕ ಮೂರ್ತಿಗಳ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ವಿವಿಧೆಡೆ ಗೌರಿ-ಗಣೇಶ ಹಬ್ಬ ಆಚರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರತಿಷ್ಠಿತ ವಿನಾಯಕ ಸೇವಾ ಸಮಿತಿಗಳಿಂದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಹೊಸಮನೆ ಭಾಗದಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೫೪ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಬೃಹತ್ ಸ್ವಾಗತ ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿದ್ಯುತ್ ದೀಪಗಳ ಆಲಂಕಾರ ಕೈಗೊಳ್ಳಲಾಗಿದೆ. ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೪೨ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ಆಕರ್ಷಕ ವೇದಿಕೆಯಲ್ಲಿ ಬೃಹತ್ ವಿನಾಯಕ ಮೂರ್ತಿ ರಾರಾಜಿಸುತ್ತಿದೆ. ಭಕ್ತರ ಕಣ್ಮನ ಸೆಳೆಯುತ್ತಿದ್ದು, ಸೆ.೨೪ರಂದು ವಿಸರ್ಜನೆ ನಡೆಯಲಿದೆ.
ನ್ಯೂಟೌನ್ ಭಾಗದಲ್ಲಿ ಪ್ರತಿಷ್ಠಿತ ವಿನಾಯಕ ಸೇವಾ ಸಮಿತಿಗಳಲ್ಲಿ ಶ್ರೀ ರಾಮರಾಜ್ಯ ಸಂಘಟನೆಯಿಂದ ಈ ಬಾರಿ ಸಹ ಬೃಹತ್ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜಯಶ್ರೀ ವೃತ್ತದಲ್ಲಿ ೨ನೇ ವರ್ಷದ ಸಂಭ್ರಮಾಚರಣೆ ಜಯಶ್ರೀ ಬಾಯ್ಸ್ ವಿನಾಯಕ ಸೇವಾ ಸಮಿತಿಯಿಂದ ನಡೆಯುತ್ತಿದ್ದು, ಸುಮಾರು ೧೨ ಅಡಿ ಎತ್ತರದ ಗರುಡ ವಾಹನ ವಿನಾಯಕ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದ್ದು, ಈ ಮೂರ್ತಿಯನ್ನು ದಾವಣಗೆರೆಯಲ್ಲಿ ಸಿದ್ದಪಡಿಸಲಾಗಿದೆ. ಎಸ್‌ಎವಿ ವೃತ್ತದಲ್ಲಿ ಈ ಬಾರಿ ಸಹ ವಿನಾಯಕ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಶಿಲಾಮಯವಾದ ದೇವಸ್ಥಾನದ ಮಂಟಪದಲ್ಲಿ ಶಿಲಾ ವಿನಾಯಕ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದೆ. ಕೂಲಿಬ್ಲಾಕ್ ಶೆಡ್‌ನಲ್ಲಿ ಶ್ರೀರಾಮ ದೇವಸ್ಥಾನದ ಸಮೀಪ ಈ ಬಾರಿ ಸಹ ಆಕರ್ಷಕ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಭದ್ರಾವತಿ ಭೋವಿ ಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೪೨ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ಆಕರ್ಷಕ ವೇದಿಕೆಯಲ್ಲಿ ಬೃಹತ್ ವಿನಾಯಕ ಮೂರ್ತಿ ರಾರಾಜಿಸುತ್ತಿದೆ.
ಭದ್ರಾವತಿ ಹೊಸಮನೆ ಭಾಗದಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೫೪ನೇ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಬೃಹತ್ ಸ್ವಾಗತ ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ.
ಭದ್ರಾವತಿ ಜಯಶ್ರೀ ವೃತ್ತದಲ್ಲಿ ೨ನೇ ವರ್ಷದ ಸಂಭ್ರಮಾಚರಣೆ ಜಯಶ್ರೀ ಬಾಯ್ಸ್ ವಿನಾಯಕ ಸೇವಾ ಸಮಿತಿಯಿಂದ ನಡೆಯುತ್ತಿದ್ದು, ಸುಮಾರು ೧೨ ಅಡಿ ಎತ್ತರದ ಗರುಡ ವಾಹನ ವಿನಾಯಕ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದೆ.
ಭದ್ರಾವತಿ ನ್ಯೂಕಾಲೋನಿ ಎಸ್‌ಎವಿ ವೃತ್ತದಲ್ಲಿ ಈ ಬಾರಿ ಸಹ ವಿನಾಯಕ ಸೇವಾ ಸಮಿತಿಯಿಂದ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಶಿಲಾಮಯವಾದ ದೇವಸ್ಥಾನದ ಮಂಟಪದಲ್ಲಿ ಶಿಲಾ ವಿನಾಯಕ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದೆ