ದುಃಖಕ್ಕೆ ಮದ್ದು ಕಂಡುಹಿಡಿದ ಮೊದಲ ವೈದ್ಯ ಗೌತಮ

KannadaprabhaNewsNetwork | Published : May 13, 2025 1:07 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಬುದ್ಧನು ಅಹಿಂಸೆಯ ಪ್ರತಿಪಾದಕನಾಗಿದ್ದು, ಆತನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಸೊನಕನಳ್ಳಿ ಗ್ರಾಮದಲ್ಲಿ ಬುದ್ದ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಯುವಕ ಸಿದ್ದಾರ್ಥ ಗೌತಮರು ಸಮಾಜದಲ್ಲಿನ ತಾರತಮ್ಯ, ಅಸಮಾನತೆ, ಮೇಲುಕೀಳು, ಮೌಢ್ಯಗಳ ನಿವಾರಣೆಗಾಗಿ 29ನೇ ವಯಸ್ಸಿನಲ್ಲಿ ತನ್ನ ಸಂಸಾರಿಕ ಜೀವನ, ಸಂಪತ್ತು, ರಾಜ್ಯಾಧಿಕಾರ ತೊರೆದು ಸುಮಾರು 6 ವರ್ಷಗಳ ಸತತ ಧ್ಯಾನದ ಮೂಲಕ ತನ್ನ 35ನೇ ವಯಸ್ಸಿನಲ್ಲಿ ಪ್ರಾಕೃತಿಕ ಜ್ಞಾನೋದಯ ಪಡೆಯುತ್ತಾರೆ.

ಕನ್ನಡಪ್ರಭ ವಾರ್ತೆ ಇಂಡಿ

ಬುದ್ಧನು ಅಹಿಂಸೆಯ ಪ್ರತಿಪಾದಕನಾಗಿದ್ದು, ಆತನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಸೊನಕನಳ್ಳಿ ಗ್ರಾಮದಲ್ಲಿ ಬುದ್ದ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಯುವಕ ಸಿದ್ದಾರ್ಥ ಗೌತಮರು ಸಮಾಜದಲ್ಲಿನ ತಾರತಮ್ಯ, ಅಸಮಾನತೆ, ಮೇಲುಕೀಳು, ಮೌಢ್ಯಗಳ ನಿವಾರಣೆಗಾಗಿ 29ನೇ ವಯಸ್ಸಿನಲ್ಲಿ ತನ್ನ ಸಂಸಾರಿಕ ಜೀವನ, ಸಂಪತ್ತು, ರಾಜ್ಯಾಧಿಕಾರ ತೊರೆದು ಸುಮಾರು 6 ವರ್ಷಗಳ ಸತತ ಧ್ಯಾನದ ಮೂಲಕ ತನ್ನ 35ನೇ ವಯಸ್ಸಿನಲ್ಲಿ ಪ್ರಾಕೃತಿಕ ಜ್ಞಾನೋದಯ ಪಡೆಯುತ್ತಾರೆ. ಮನುಷ್ಯನ ದುಃಖ ವಿನಾಶಕ್ಕೆ ಪಂಚಶೀಲ, ಅಷ್ಟಾಂಗ ಮಾರ್ಗಗಳನ್ನು ಬೋಧಿಸಿ ಸಂತೋಷಮಯ ಜೀವನ ನಡೆಸಲು ದಾರಿ ತೋರಿದ್ದಾರೆ. ಜಗತ್ತಿನಲ್ಲಿ ಮನುಷ್ಯನ ದುಃಖಕ್ಕೆ ಮದ್ದು ಕಂಡು ಹಿಡಿದ ಮೊದಲ ವೈದ್ಯ ಗೌತಮ ಬುದ್ಧ. ಎಂದರು. ಬುದ್ಧದ ಬುದ್ಧನ ಹುಟ್ಟು, ಜ್ಞಾನೋದಯ ದಿನ ವೈಖಾಖ ಹುಣ್ಣಿಮೆಯಾಗಿತ್ತು. ಬುದ್ಧರು ತನ್ನ 80ನೇ ವಯಸ್ಸಿನಲ್ಲಿ ಮಹಾಪರಿ ನಿಬ್ಬಾಣ ಹೊಂದುತ್ತಾರೆ. ಅಂದು ಸಹ ವೈಶಾಖ ಹುಣ್ಣಿಮೆಯಾಗಿತ್ತು ಎಂದರು.ಇದು ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಗುರುತಿಸುತ್ತದೆ. ಇದು ಪ್ರಪಂಚದಾದ್ಯಂತದ ಬೌದ್ಧರಿಗೆ ಅತ್ಯಂತ ಭಕ್ತಿಯ ದಿನವಾಗಿದೆ.

ಬುದ್ಧನ ಬೋಧನೆಗಳನ್ನು ಹರಡಲು ಮತ್ತು ಅವರ ಜೀವನ ಮತ್ತು ತತ್ತ್ವಶಾಸ್ತ್ರವನ್ನು ಪ್ರತಿಬಿಂಬಿಸಲು ಸಾರ್ವಜನಿಕ ಭಾಷಣಗಳು, ವಿಚಾರ ಸಂಕಿರಣಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಹೆಚ್ಚಾಗಿ ನಡೆಯಬೇಕು. ಈ ಕಾರ್ಯಕ್ರಮಗಳು ಜನರಲ್ಲಿ ಶಾಂತಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂದರು.ಅಸಹಿಷ್ಣುತೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಬುದ್ಧ ಗುರುವಿನ ಕರುಣೆ ಮತ್ತು ಮೈತ್ರಿ ಎನ್ನುವ ಅಮೂಲ್ಯ ತತ್ವಗಳು ಹೆಚ್ಚು ಪ್ರಸ್ತುತವಾಗುತ್ತವೆ. ಪರಸ್ಪರ ಪ್ರೀತಿ, ದಯೆ, ಕರುಣೆ, ಸ್ನೇಹಪರತೆ ಮುಂತಾದ ಅನುಸರಿಸಬಹುದಾದ ಸರಳ ಗುಣಗಳನ್ನು ಬೋಧಿಸುವುದಲ್ಲದೆ, ದಯೆ ಇಲ್ಲದ ಧರ್ಮ ಮತ್ತು ಸ್ನೇಹಶೀಲತೆ ಇಲ್ಲದ ಮನುಷ್ಯನಿಂದ ಏನೂ ಪ್ರಯೋಜನವಾಗಲಾರದು ಎಂಬುದನ್ನು ಬುದ್ಧಗುರು ಪ್ರತಿಪಾದಿಸಿದನು. ಬಡತನ, ಸಾವು, ಮುಪ್ಪು, ಅನಾರೋಗ್ಯ ಇತ್ಯಾದಿ ಕೆಡುಕುಗಳಿಗೆ ಗುರಿಯಾಗುವ ಮನುಷ್ಯನಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಹೇಳಿದ್ದಾನೆ ಬುದ್ದ. ಅಧರ್ಮದ ಕೂಪಕ್ಕೆ ಬಲಿಯಾಗುವ ಮನುಷ್ಯನನ್ನು ಜೀವಪರವಾಗಿ ಮಿಡಿಯುವಂತೆ ಮಾಡುವುದೇ ನಿಜವಾದ ಧರ್ಮ ಎಂಬುದನ್ನು ಗೌತಮನು ಉದ್ದಕ್ಕೂ ಸಾರಿದ್ದಾನೆ ಎಂದರು.ತಾಪಂ ಮಾಜಿ ಅಧ್ಯಕ್ಷ ಶೇಖರ ನಾಯಕ, ಕಾಂತು ರಿಸಲ್ದಾರ, ಗಣೇಶ ರಾಠೋಡ, ಹಣಮಂತ್ರಾಯ ಪೂಜಾರಿ, ಪರಮೇಶ್ವರ ಕನ್ನೋಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಭೀಮಶಾ ಹರಿಜನ, ಬಸವರಾಜ ದೇಗಿನಾಳ, ಭೀಮರಾಯ ಚಡಚಣ, ಸುಭಾಷ್ ಕೋಳಿ, ಮುತ್ತಪ್ಪಗೌಡ ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.