ರಾಮನಗರ: ಯುವಕರಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶದಿಂದ ಗೌತಮ್ ಡೆವಲಪರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದ್ದೇವೆ ಎಂದು ಪಂದ್ಯಾವಳಿ ಆಯೋಜಕರಾದ ಹರ್ಷ ಹೇಳಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಗೌತಮ್ ಡೆವಲಪರ್ಸ್ ಮಹೇಶ್, ಭವಾನಿ ಪೈನಾನ್ಸ್ ಕೆ.ಸುರೇಶ್, ಕ್ರಿಕೆಟ್ ಪಂದ್ಯಾವಳಿ ಆಯೋಜಕರಾದ ಎ.ಟಿ.ಕಾರ್ತಿಕ್, ರಂಜಿತ್, ಪುರುಷೋತ್ತಮ್, ಮುಖಂಡ ಖಾಸಿಫ್ ಮತ್ತಿತರರು ಶುಭ ಕೋರಿದರು. ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು.
ಸೀಸನ್-2 ಪಂದ್ಯಾವಳಿ ವಿಜೇತರು:ಪ್ರಥಮ ಬಹುಮಾನ ಭಾಗ್ಯವಂತರು ತಂಡ1,11,111 ರು. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಇಮ್ಮಡಿ ಪುಲಕೇಶಿ ತಂಡ 55,555 ರು. ನಗದು ಮತ್ತು ಆಕರ್ಷಕ ಟ್ರೋಪಿ, ತೃತೀಯ ಬಹುಮಾನ ಆಕಸ್ಮಿಕ ತಂಡ 33,333 ರು. ನಗದು ಮತ್ತು ಆಕರ್ಷಕ ಟ್ರೋಫಿ, ನಾಲ್ಕನೇ ಬಹುಮಾನ ಧ್ರುವತಾರೆ ತಂಡ 22,222 ರು. ನಗದು ಮತ್ತು ಆಕರ್ಷಕ ಟ್ರೋಫಿ ಪಡೆದುಕೊಂಡರು.
ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಭಾಗ್ಯವಂತರು, ಇಮ್ಮಡಿಪುಲಕೇಶಿ, ಆಕಸ್ಮಿಕ, ಧ್ರುವತಾರೆ, ಬಂಗಾರದ ಮನುಷ್ಯ, ಗುರಿ, ಕೆರಳಿದಸಿಂಹ, ಬಬ್ರುವಾಹನ, ನಂದಗೋಕುಲ, ವೀರಕೇಸರಿ, ಗಂಧದಗುಡಿ, ಸಿಪಾಯಿರಾಮು, ರಾಮಾಂಜನೇಯ, ಹೊಸಬೆಳಕು, ಪರಶುರಾಮ, ಧರ್ಮವಿಜಯ ತಂಡಗಳು ಭಾಗವಹಿಸಿದ್ದವು.
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗೌತಮ್ ಪ್ರೀಮಿಯರ ಲೀಗ್ ಸೀಸನ್-2ರ ಡಾ.ರಾಜ್ ಕಪ್ 2026 ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಭಾಗ್ಯವಂತರು ತಂಡಕ್ಕೆ ಟ್ರೋಫಿ ವಿತರಿಸಲಾಯಿತು.