ಗವಿಮಠ 8 ಲಕ್ಷ ಭಕ್ತರು ಸೇರಿದರೂ ಕಾಲ್ತುಳಿತ ಆಗದ ಶಕ್ತಿ ಕಂಪನ

KannadaprabhaNewsNetwork |  
Published : Jan 08, 2026, 02:30 AM IST
7ಕೆಪಿಎಲ್18:ಕೊಪ್ಪಳ ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಯೋಗಾ ಯೋಗಾ ತಂಡದಿಂದ ಯೋಗ ಪ್ರದರ್ಶನ ಜರುಗಿತು.   | Kannada Prabha

ಸಾರಾಂಶ

ಶಿವಯೋಗ ಎಂಬುದು ಹೇಳಲಿಕ್ಕೆ ಆಗುವುದಿಲ್ಲ. ಅದನ್ನು ಅನುಭವಿಸಬೇಕು. ಮಕ್ಕಳಲ್ಲಿ ಸದಾಚಾರ ಗುಣ ಕಲಿಸಬೇಕು

ಕೊಪ್ಪಳ: 7 ರಿಂದ 8 ಲಕ್ಷ ಜನ ಸೇರಿದರೂ ಕಾಲ್ತುಳಿತ ಆಗದ ಶಕ್ತಿಯ ಕಂಪನ ಗವಿಮಠದ ಗವಿಸಿದ್ದೇಶ್ವರ ಜಾತ್ರಾಮಹೋತ್ಸವದ್ದಾಗಿದೆ ಎಂದು ಶೇಗುಣಶಿ ವಿರಕ್ತಮಠದ ಶ್ರೀ ಮಹಾಂತಪ್ರಭು ಸ್ವಾಮೀಜಿ ಹೇಳಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಬುಧವಾರ ಜರುಗಿದ ಗವಿಸಿದ್ದೇಶ್ವರ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆತ್ಮ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಸಾಧಿಸಬೇಕು. ಲಿಂಗಪೂಜೆ ಹಾಗು ಜಂಗಮ ಆರಾಧನೆಯಿಂದ ಸತ್ ಚಿಂತನೆ ಪ್ರಾಪ್ತಿ ಆಗುತ್ತದೆ. ದೇವರ ಆರಾಧನೆಯಲ್ಲಿ ಜ್ಞಾನದ ಶಕ್ತಿ ಹುಟ್ಟುತ್ತದೆ. ಆಧ್ಯಾತ್ಮಿಕ ಶಕ್ತಿಯೆಂಬ ಎಐ ಮೂಲಕ ಗವಿಶ್ರೀಗಳು ಭಕ್ತರ ಪಾಲಿನ ದೈವರಾಗಿದ್ದಾರೆ. ಅಜ್ಜನ ಜಾತ್ರೆ ಎಂಬುದು ಇಲ್ಲಿಯ ಪ್ರಚಲಿತ ಟ್ರೇಂಡ್. ಆ ಅಜ್ಜನ ಆಧ್ಯಾತ್ಮಿಕ ಎಐ ಶಕ್ತಿಯ ಬಹುದೊಡ್ಡ ಕಾರ್ಯಕ್ರಮ ನೀಡುತ್ತಿದೆ. ದೊಡ್ಡ ಭಾರತ ನೋಡಲು ಕೊಪ್ಪಳದ ಜಾತ್ರೆಗೆ ಬಂದರೆ ಸಾಕು ಎಂದರು.

ಈಗ ಜಂಜಿ ಎಂಬ ಟ್ರೇಂಡ್ ಎಬ್ಬಿದೆ. ದಂಗೆ, ದೊಂಬೆ ಏಳುವುದು ಜಂಜಿ ಆಗಿದೆ. ಈ ಮಧ್ಯೆ ಲಕ್ಷ ಲಕ್ಷ ಜನರಿಗೆ ಜಾತ್ರೋತ್ಸವ ಮೂಲಕ ಜಂಜಿ ಅಂದರೆ ದಂಗೆ, ದೊಂಬೆ ಏಳುವುದು ಅಲ್ಲ, ಸಂಸ್ಕಾರ ನೀಡುವುದು ಎಂದು ಗವಿಶ್ರೀಗಳು ಕಾರ್ಯ ಮಾಡುತ್ತಿದ್ದಾರೆ. ಗವಿಮಠ ಇಲ್ಲಿ 7 ರಿಂದ 8 ಲಕ್ಷ ಜನರಿಗೆ ಸ್ಪೀರಿಚುವಲ್ ಸೆಂಟರ್ ಇದಾಗಿದೆ. ಆರ್.ಸಿ.ಬಿಯಲ್ಲಿ ಕಾಲ್ತುಳಿತ ಆಯಿತು. ಇಲ್ಲಿ 7 ರಿಂದ 8 ಲಕ್ಷ ಜನ ಬಂದರೂ ಏನು ಆಗುವದು ಇಲ್ಲ. ಇದು ಗವಿಸಿದ್ದಪ್ಪಜ್ಜನ ಆಶೀರ್ವಾದ. ಅದುವೇ ಇಲ್ಲಿಯ ಕಂಪನ ಎಂದರು. ಜಗತ್ತಿನಲ್ಲಿ ಮೊಬೈಲ್ ಮಿನಿಯಾ ನಡಿದಿದೆ. ಮೊಬೈಲ್ ಪೋನ್ ಒಮ್ಮೆ ಬಂದಾದರೇ ಏನಾಗುತ್ತದೆ ಅಂದರೆ ನೂರಕ್ಕೆ 70% ಜನರಿಗೆ ಹುಚ್ಚು ಹಿಡಿಯುತ್ತದೆ. ಪ್ರವಚನ ಕೇಳುವ ಜನರಿಗೆ ಹುಚ್ಚು ಹಿಡಿಯುವುದಿಲ್ಲ ಎಂದರು.

ಶಿವಯೋಗ ಎಂಬುದು ಹೇಳಲಿಕ್ಕೆ ಆಗುವುದಿಲ್ಲ. ಅದನ್ನು ಅನುಭವಿಸಬೇಕು. ಮಕ್ಕಳಲ್ಲಿ ಸದಾಚಾರ ಗುಣ ಕಲಿಸಬೇಕು. ಪ್ರೀತಿಯಿಂದ ಕೊಡಬೇಕು, ಪ್ರೀತಿಯಿಂದ ನೀಡಬೇಕು, ಪ್ರೀತಿಯಿಂದ ಸ್ವಯಂ ಮನೋನಿಗ್ರಹ ಮಾಡಿಕೊಂಡಿದ್ದರೇ ಅದುವೇ ಸಾರ್ಥಕ. ಅದನ್ನು ನೋಡಬೇಕು ಅಂದರೆ ಗವಿಮಠಕ್ಕೆ ಬರಬೇಕು ಎಂದರು. ಅದಕ್ಕೆ ಗವಿಶ್ರೀಗಳು ದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಗವಿಮಠವೇ ಸ್ವರ್ಗದ ಬಾಗಿಲು ಆಗಿದ ಎಂದರು.

ಗ್ಯಾರಂಟಿ ಯೋಜನೆ ಬಂದು ಜನರಿಗೆ ಅನುಕೂಲವಾಯಿತು, ಅನಾನುಕೂಲ ಆಯಿತು. ಎಷ್ಟು ಹುಚ್ಚು ಹಿಡಿಸಿದೆ ಅಂದರೆ ಕಾರ್ಯಕ್ರಮವೊಂದರಲ್ಲಿ ಏನಾದರೂ ಅನುಮಾನಗಳಿದ್ದರೇ ಕೇಳಿ ಅಂದಾಗ ಅಜ್ಜಿಯೊಬ್ಬರು ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಕೇಳಿದಳು ಎಂದು ನಗೆ ಚಟಾಕೆ ಹಾರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ