ಕನ್ನಡಪ್ರಭ ವಾರ್ತೆ ಜಗಳೂರು
ಕಾರ್ಯಕ್ರಮಕ್ಕೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಶಿವಮೊಗ್ಗ, ಆಂದ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥೋತ್ಸವಕ್ಕೆ ಹಣ್ಣು ಎಸೆದು, ಕಾಯಿ ಹೊಡೆದು ಸಮರ್ಪಣೆ ಮಾಡಿದರು. ಗವಿ ಶಾಂತಲಿಂಗೇಶ್ವರ ಸ್ವಾಮಿಯ ಭಾವುಟ ಗುಂಡುಮುಣಗು ತಿಪ್ಪೇಸ್ವಾಮಿ ಎಂಬವರು 1.50 ಲಕ್ಷ ರು.ಗೆ ಸ್ವಾಮಿಯ ಬಾವುಟ ಹರಾಜು ಮಾಡುತ್ತಿದ್ದಂತೆ ಭಕ್ತರ ಜಯಘೋಷಣೆಗಳೊಂದಿಗೆ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಕಣ್ವಕುಪ್ಪೆ ಗವಿಮಠದಲ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮುಂದಿನ ವರ್ಷ ಅತಿವೃಷ್ಟಿ, ಅನಾವೃಷ್ಟಿ ಆಗುವ ಸಾಧ್ಯತೆ ಇದ್ದು, ಕೆಲವು ಕಡೆ ಉತ್ತಮ ಮಳೆ, ಕೆಲವು ಕಡೆ ಕಡಿಮೆಮಳೆಯಾಗುವ ಸಾಧ್ಯತೆ ಇದ್ದರೂ ರೈತರಿಗೆ ಏನು ತೊಂದರೆಯಾಗುವುದಿಲ್ಲ ಎಂದು ಈ ವರ್ಷವೂ ಭವಿಷ್ಯ ನುಡಿದರು.ಮನೆಯ ಪರಿವಾರದಲ್ಲಿ ಯಾರು ಏನು ಹೇಳಿದ ತಕ್ಷಣ ಒಪ್ಪಿದರೆ ಕೆಡಿಸಲು ಕೆಲವು ಸಂಚು ಮೂಡಿಸುವ ಸಾಧ್ಯತೆ ಇದ್ದು , ಒಳ್ಳೆಯದನ್ನು ಅಳವಡಿಸಿಕೊಳ್ಳಿರಿ. ಸಾರ್ಥಕ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಉತ್ತರಾಯಣ ಪುಣ್ಯ ಕಾಲದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಿ. ಧರ್ಮವನ್ನು ಬಿಡಬಾರದು. ದುಚ್ಚಟಗಳಿಗೆ ಒಳಗಾದವರು ಇಂದಿಗೆ ದುಶ್ಚಟಗಳಿಂದ ಮಕ್ತರಾಗಿ ಶುದ್ದ ಮನುಷುರಾಗಿ ಬಾಳಬೇಕು ಎಂದರು.
ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಆರ್.ಎಸ್.ಎಸ್.ಪ್ರಮುಖ್ ಮುನಿಯಪ್ಪ, ಕಾಂಗ್ರೆಸ್ ಮುಖಂಡರು ಮಾಜಿ ಜಿ.ಪಂ.ಸದಸ್ಯ ಕೆ.ಪಿ.ಪಾಲಯ್ಯ ಕೇದಾರನಾಥದ ಪ್ರಧಾನ ಅರ್ಚಕರಾದ ಗಂಗಾಧರ ಲಿಂಗರು ಮುಖಂಡರು ಇದ್ದರು.