ಕೊಪ್ಪಳ: ನಾನೊಬ್ಬ ಸೇವಕ. ನಾನು ಇಲ್ಲಿ ಸಹ ಸಾಮಾನ್ಯ. ಎಲ್ಲ ಮಹಾಮಹಿಮೆ ಗವಿಸಿದ್ದಪ್ಪಜ್ಜನದು. ಆತನ ಭಕ್ತರದ್ದು ಎಂದು ಸದಾ ತಮ್ಮ ಆಶೀರ್ವಚನದಲ್ಲಿ ಹೇಳುವ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಮಾತುಗಳು ಗವಿಶ್ರೀಗಳು ಸಾಮಾನ್ಯರಂತೆ ತಾವು ಸಹ ಕಾರ್ಯ ಮಾಡುವುದು ಸಾಕ್ಷೀಕರಿಸುವಂತಿದೆ.
ನಗರದ ಗವಿಮಠದ ಇಂತಹ ಮಹಾದಾಸೋಹದಲ್ಲಿ ನಾನಾ ಕೆಲಸ ಮಧ್ಯೆಯೂ ಗವಿಶ್ರೀಗಳು ಕಳೆದ ಎರಡು ದಿನದ ಹಿಂದೆ ತಾವೇ ಕಸಗುಡಿಸಿ,ದಾಸೋಹದ ಟೇಬಲ್ ಶುಚಿಗೊಳಿಸಿ ಸಾಮಾನ್ಯರಂತೆ ಸೇವಾ ಕಾರ್ಯ ಮಾಡಿದ್ದರು. ಶನಿವಾರ ಮಹಾದಾಸೋಹದಲ್ಲಿ ಅಕ್ಕಿ ಚೀಲ (ಪಾಕೆಟ)ವನ್ನು ತಾವೇ ಸ್ವತಃ ಭಕ್ತರೊಡಗೂಡಿ ಹೊತ್ತು ಇಡುತ್ತಿದ್ದರು. ಇದು ಗವಿಶ್ರೀಗಳು ತಾವೊಬ್ಬ ಮಠಾಧೀಶರು ಎಂಬ ಭಾವ ಅವರಿಲ್ಲದೇ, ತಾವು ಗವಿಸಿದ್ದಪ್ಪಜ್ಜನ ಸಾಮಾನ್ಯ ಸೇವಕರು ಎಂಬ ಅವರ ಮಾತನ್ನು ಅವರು ಅಕ್ಕಿ ಪಾಕೆಟ್ ಹೊತ್ತು ಇಡುವ ಕಾರ್ಯದ ಮೂಲಕ ಸಾಬೀತುಪಡಿಸಿದರು.
ದಾಸೋಹಕ್ಕೆ ಅಕ್ಕಿ ಪಾಕೆಟಗಳನ್ನು ತಾವು ಹೊತ್ತು ಹಾಕಿದರು. ನಂತರ ಮಕ್ಕಳ ಒಡಗೂಡಿ ಭಾವನಾತ್ಮಕವಾಗಿ ಬೆರೆತು ಸೇವಾ ಮಕ್ಕಳನ್ನು ಅಪ್ಪಿಕೊಂಡರು.ಸಾಂಬಾರ್ ಹದಗೊಳಿಸಿದ ಗವಿಶ್ರೀ: ಮಹಾದಾಸೋಹದಲ್ಲಿ ಬರುವ ಭಕ್ತರ ಪ್ರಸಾದಕ್ಕೆ ಅಡುಗೆ ತಯಾರಿ ಬಗ್ಗೆ ಸ್ವತಃ ಕಣ್ಣು ಹಾಯಿಸಿ ಖುದ್ದಾಗಿ ಪರಿಶೀಲಿಸುವ ಗವಿಶ್ರೀಗಳು ಸಾಂಬಾರನ್ನು ಹದಗೊಳಿಸುವ ಕಾರ್ಯ ಮಾಡಿದರು. ದಾಸೋಹ ಸೇವೆಯಲ್ಲಿ ಭಕ್ತರೊಡಗೂಡಿ ತಾವು ಬೆರೆತು ಪ್ರಸಾದ ತಯಾರಿ ಸೇವೆ ಮಾಡಿದರು.