1 ಎಕರೆ ಭೂಮಿಯಲ್ಲಿ ಹಿಪ್ಪು ನೇರಳೆ ಬೆಳೆದುಕೊಂಡರೆ 75 ದಿನಕ್ಕೆ ಒಂದು ರೇಷ್ಮೆ ಬೆಳೆ ಬರುತ್ತದೆ. ವರ್ಷಕ್ಕೆ 5 ಬೆಳೆ ಬೆಳೆಯಬಹುದು. ರೇಷ್ಮೆ ಆರ್ಥಿಕ ಬೆಳೆಯಾಗಿದೆ. ಕೆಜಿಗೆ 500 ರು. ಕನಿಷ್ಠ ಬೆಲೆ ಇರುತ್ತದೆ. ಕೋಲಾರದ ರೈತರು ಸಾವಿರ ಅಡಿ ಕೊಳವೆ ಬಾವಿಯಿಂದ ನೀರು ತೆಗೆದು ಹಿಪ್ಪು ನೇರಳೆ ಬೆಳೆದು ಲಕ್ಷಾಂತರ ಹಣ ಸಂಪಾದನೆ ಮಾಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ರೈತರು ಹಿಪ್ಪು ನೇರಳೆ ಬೆಳೆದು ರೇಷ್ಮೆ ಕೃಷಿ ಮಾಡಿ ಲಕ್ಷಾಂತರ ರುಪಾಯಿ ಲಾಭಗಳಿಸಬಹುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಹೋಬಳಿ ಕೇಂದ್ರದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ವಿಶ್ವ ರೈತ ದಿನಾಚರಣೆಯ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದರು. 1 ಎಕರೆ ಭೂಮಿಯಲ್ಲಿ ಹಿಪ್ಪು ನೇರಳೆ ಬೆಳೆದುಕೊಂಡರೆ 75 ದಿನಕ್ಕೆ ಒಂದು ರೇಷ್ಮೆ ಬೆಳೆ ಬರುತ್ತದೆ. ವರ್ಷಕ್ಕೆ 5 ಬೆಳೆ ಬೆಳೆಯಬಹುದು. ರೇಷ್ಮೆ ಆರ್ಥಿಕ ಬೆಳೆಯಾಗಿದೆ. ಕೆಜಿಗೆ 500 ರು. ಕನಿಷ್ಠ ಬೆಲೆ ಇರುತ್ತದೆ. ಕೋಲಾರದ ರೈತರು ಸಾವಿರ ಅಡಿ ಕೊಳವೆ ಬಾವಿಯಿಂದ ನೀರು ತೆಗೆದು ಹಿಪ್ಪು ನೇರಳೆ ಬೆಳೆದು ಲಕ್ಷಾಂತರ ಹಣ ಸಂಪಾದನೆ ಮಾಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಾರೆ. ತಾಲೂಕಿನ ರೈತರಿಗೆ ಅಂತರ್ಜಲದ ಸಮಸ್ಯೆ ಇಲ್ಲ ಹಿಪ್ಪು ನೇರಳೆ ಬೆಳೆ ಮಾಡಲು ಸರ್ಕಾರ 90% ರಿಯಾಯಿತಿ ಸಬ್ಸಿಡಿ ನೀಡುತ್ತಿದೆ. ತಾಲೂಕಿನ ರೈತರು ಇದರ ಅನುಕೂಲ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಸ್ಪಿಂಕ್ಲರ್ ಸೆಟ್ ಗಳು, ಟಾರ್ಪಲ್‌ಗಳು, ಹೆಚ್ಚು ಬೇಡಿಕೆ ಇದೆ ರೈತರಿಗೆ ಸಕಾಲದಲ್ಲಿ ಕೊಡಿಸುವಂತೆ ಜಿಲ್ಲಾ ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ್ದೇನೆ. ಕೃಷಿ ಅಧಿಕಾರಿಗಳು ಹಳ್ಳಿಗಳಲ್ಲಿ ಒಳ್ಳೆಯ ಬೆಳೆ ಬೆಳೆದ ರೈತರ ಅನುಭವ ತಿಳಿಸುವ ಕ್ಷೇತ್ರೋತ್ಸವ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್, ಸಹಾಯಕ ಕೃಷಿ ನಿರ್ದೇಶಕ ಮೋಹನ್, ಕೃಷಿ ಅಧಿಕಾರಿ ಜೀ.ವಿ. ದಿನೇಶ್, ರೈತ ಸಂಘದ ಅಧ್ಯಕ್ಷ ಎಸ್. ಎಸ್. ರಾಮಚಂದ್ರು, ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆ ಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಎಸ್. ಲಕ್ಷ್ಮಣ್, ಸಂಪತ್ ಕುಮಾರ್, ತಾಂಡವೇಶ್, ಮಂಜುಳಾ, ಶಿವಣ್ಣ, ಸೋಮಶೇಖರಯ್ಯ, ಬೋರೇಗೌಡ, ಶಿವಕುಮಾರ್, ಮಂಜುನಾಥ ಸ್ವಾಮಿ, ಮೈಸೂರು ಕುಮಾರ್, ಮೀಸೆ ಮಂಜಣ್ಣ, ಬಡಕನಹಳ್ಳಿ ಲಕ್ಷ್ಮಣ್, ಗೋವಿಂದ್ರಾಜ್, ಪ್ರಮೋದ್, ಇತರರು ಹಾಜರಿದ್ದರು.
======ಫೋಟೋ: ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ರೈತ ಸಂಘ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆಯ ಬೃಹತ್ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು. ರಾಮಚಂದ್ರು, ನಟರಾಜ್, ಮೋಹನ್, ದೊರೆಸ್ವಾಮಿ, ದಿನೇಶ್, ಎನ್ಎಸ್. ಲಕ್ಷ್ಮಣ್, ನಾಗರತ್ನಮ್ಮ, ಮೀಸೆ ಮಂಜಣ್ಣ, ಇದ್ದರು.