ದೊಡ್ಡಣಗುಡ್ಡೆ ಶ್ರೀ ಕ್ಷೇತ್ರದಲ್ಲಿ ಗಾಯತ್ರಿ ದೇವಿ ಪ್ರತಿಷ್ಠಾಪನೆಗೆ ಚಾಲನೆ

KannadaprabhaNewsNetwork |  
Published : May 01, 2025, 12:50 AM IST
30ಗಾಯತ್ರಿ | Kannada Prabha

ಸಾರಾಂಶ

ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಪೂರ್ವಭಾವಿಯಾಗಿ ಬುಧವಾರ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಪೂರ್ವಭಾವಿಯಾಗಿ ಬುಧವಾರ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಋತ್ವಿಜರ ಆಗಮನ, ಸಾಮೂಹಿಕ ದೇವತಾ ಪ್ರಾರ್ಥನೆ, ಅರಣಿ ಮಥನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಆಲಯ ಪ್ರತಿಗ್ರಹ, ಆದ್ಯ ಗಣಪತಿಯಾಗ, ನವಗ್ರಹ ಯಾಗ, ಮೃತ್ಯುಂಜಯ ಯಾಗ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಪಂಚಮೂರ್ತಿ ಆರಾಧನೆ ಸಹಿತ ವಿಪ್ರೋಚ್ಛಿಷ್ಟ, ರತ್ನನ್ಯಾಸ, ಭೂವರಾಹ ಮಂತ್ರ ಹೋಮ, ವಾಸ್ತುರಕ್ಷಾ ಪ್ರಕ್ರಿಯೆ, ಬಿಂಬ ಶುದ್ಧಿ, ಅಷ್ಟಬಂಧ ಅಧಿವಾಸ, ಪೀಠಾಧಿವಾಸ, ಸಪ್ತಾಧಿವಾಸ ಪೂಜೆ, ಅಷ್ಟಾವಧಾನ ಸೇವೆ ನೆರವೇರಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

-----------ಇಂದು ಗಾಯಂತ್ರಿ ದೇವಿ ಪ್ರತಿಷ್ಠೆ

ಇಂದು (ಮೇ 1ರಂದು) ಬೆಳಗ್ಗೆ 8ಕ್ಕೆ ನೂತನ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದಜಿ ರಾಮ್‌ ಜಿ: ಡಾ। ಸುಧಾಕರ್‌
ದೂರು ಕೊಡಲು ಹೋದವರ ಮೇಲೆಯೇ ಪೊಲೀಸರ ದರ್ಪ