ದೂರು ಕೊಡಲು ಬಂದವರ ಮೇಲೆಯೇ ಪೊಲೀಸರು ಹಲ್ಲೆ ಮಾಡಿದ್ದಲ್ಲದೆ ಮಧ್ಯರಾತ್ರಿ ಎರಡು ಗಂಟೆವರೆಗೆ ಮಹಿಳೆಯರನ್ನು ಠಾಣೆಯಲ್ಲೇ ಕೂರಿಸಿ ನಂತರ ಯಾವುದೇ ರಕ್ಷಣೆ ನೀಡದೇ ಮನೆಗೆ ಕಳಿಸಿರುವ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗುತ್ತದೆ ಎಂದು ದೀಪು ಮಂಜುನಾಥ್ ಮತ್ತು ಮಂಜುನಾಥ್ ಹೇಳಿದರು. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರುದೂರು ಕೊಡಲು ಬಂದವರ ಮೇಲೆಯೇ ಪೊಲೀಸರು ಹಲ್ಲೆ ಮಾಡಿದ್ದಲ್ಲದೆ ಮಧ್ಯರಾತ್ರಿ ಎರಡು ಗಂಟೆವರೆಗೆ ಮಹಿಳೆಯರನ್ನು ಠಾಣೆಯಲ್ಲೇ ಕೂರಿಸಿ ನಂತರ ಯಾವುದೇ ರಕ್ಷಣೆ ನೀಡದೇ ಮನೆಗೆ ಕಳಿಸಿರುವ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗುತ್ತದೆ ಎಂದು ದೀಪು ಮಂಜುನಾಥ್ ಮತ್ತು ಮಂಜುನಾಥ್ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ನಮ್ಮ ಮನೆ ಮುಂದೆ ಸುಮಾರು 120ಕ್ಕೂ ಮೆಣಸಿನ ಬಳ್ಳಿ ಹಾಕಿದ್ದೆವು. ಅದನ್ನು ಅಲ್ಲಿನ ನಿಂಗರಾಜ್ ಎಂಬುವರು ಕದ್ದಿದ್ದರು. ಕದ್ದಿರುವ ಮಾಹಿತಿ ತಿಳಿದು ಅರೇಹಳ್ಳಿ ಪೊಲೀಸ್ ಠಾಣೆಗೆ ಅವರ ಮೇಲೆ ದೂರು ನೀಡಲಾಗಿತ್ತು. ಆದರೆ ನಿಂಗರಾಜ್ ಅವರು ನನ್ನ ಮನೆ ಹತ್ತಿರ ಬಂದು ಕೆಟ್ಟದಾಗಿ ಮಾತನಾಡಿದ್ದಲ್ಲದೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿ ನನ್ನ ಹೆಂಡತಿಗೂ ಕೆಟ್ಟ ಪದ ಬಳಸಿರುತ್ತಾರೆ. ನಮಗೆ ಭಯವಾಗಿ ಮತ್ತೆ ಪೊಲೀಸ್ ಠಾಣೆಗೆ ನಾನು ನನ್ನ ಹೆಂಡತಿ ಸ್ನೇಹಿತ ಶ್ರೀನಿವಾಸ್, ಬಸವರಾಜ್ ಜೊತೆ ದೂರು ನೀಡಲು ಹೋದಾಗ ನಮ್ಮನ್ನು ಒಂದು ಕೋಣೆಯಲ್ಲಿ ಕೂರಿಸಿ ನಿಂಗರಾಜ್ ಜೊತೆ ಮಾತನಾಡಿಕೊಂಡು ಅವರನ್ನು ಕಳಿಸಿ ನಮ್ಮನ್ನು ತಡರಾತ್ರಿ ತನಕ ಕೂರಿಸಿದ್ದರು. ಠಾಣೆಯಲ್ಲಿ ಮಹಿಳಾ ಪೇದೆ ಇಲ್ಲದಿದ್ದರೂ ಮಹಿಳೆಯರನ್ನು ರಾತ್ರಿ ಕೂರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೊಲೀಸ್ ಠಾಣೆಯಲ್ಲಿ ಪೇದೆಗಳಾದ ಗುರುಮೂರ್ತಿ, ಶ್ರೀನಿವಾಸ್, ಸುಪ್ರೀತ್ ಎಂಬುವರು ನಮಗೆ ಬೈಯ್ಯತೊಡಗಿದರು. ನಾವು ಪ್ರಶ್ನಿಸಲು ಹೋಗಿದ್ದಕ್ಕೆ ಗುರುಮೂರ್ತಿ ಎಂಬುವರು ಬೆಲ್ಟ್ ಬಿಚ್ಚಿಕೊಂಡು ನನಗೆ ಹಾಗೂ ನನ್ನ ಜೊತೆ ಬಂದಿದ್ದ ಬಸವರಾಜ್ ಹಾಗೂ ಅಂಗವಿಕಲ ಶ್ರೀನಿವಾಸ್ ಮೇಲೆ ಮನ ಬಂದಂತೆ ಥಳಿಸಿದ್ದಾರೆ. ಹೆಂಡತಿ ಮತ್ತು ಸ್ನೇಹಿತರು ಈ ಬಗ್ಗೆ ಕೇಳಿದಾಗ ನಿಮ್ಮ ಮೇಲೆ ಜಾತಿ ನಿಂದನೆ ದೂರು ದಾಖಲಾಗುತ್ತದೆ. ರಾಜಿ ಮಾಡಿಕೊಳ್ಳಿ ಎಂದು ಹೆದರಿಸಿದರು, ಠಾಣೆಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಇವರ ಈ ರೀತಿಯ ವರ್ತನೆಗೆ ಮದ್ಯ ಸೇವನೆ ಕಾರಣವಾಗಿದೆ. ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಗುರುಮೂರ್ತಿ ತಾಳ್ಮೆ ಕಳೆದುಕೊಂಡಿದ್ದರು. ಮದ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ನಮ್ಮನ್ನು ಮನೆಗೆ ಕಳಿಸಿದ್ದಾರೆ. ಇಷ್ಟೊತ್ತಲ್ಲಿ ಆನೆಗಳ ಕಾಟ, ಮನೆಗೆ ಹೇಗೆ ಹೋಗುವುದು ಎಂದು ಪ್ರಶ್ನಿಸಿದ್ದಕ್ಕೆ ಶರ್ಟಿನ ಪಟ್ಟಿ ಹಿಡಿದು ಹೊರಹಾಕಿದ್ದಾರೆ. ಈ ರೀತಿಯ ವರ್ತನೆ ಮಾಡುವ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬೆಳ್ಳಾವರದ ಶ್ರೀನಿವಾಸ್, ಕವಿತಾ , ಭಾಗ್ಯ ಇದ್ದರು.