ಉಡುಪಿ ಎಲ್‌ವಿಟಿಯಲ್ಲಿ ಜೇಷ್ಠಮಾಸ ಗಾಯತ್ರಿ ಹವನ ಸಂಪನ್ನ

KannadaprabhaNewsNetwork |  
Published : Jun 09, 2026, 02:45 AM IST
ಉಡುಪಿ ಎಲ್‌ವಿಟಿಯಲ್ಲಿ ಜೇಷ್ಠಮಾಸ ಪ್ರಯುಕ್ತ ಗಾಯತ್ರಿ ಹವನ ಸಂಪನ್ನಗೊಂಡಿತು | Kannada Prabha

ಸಾರಾಂಶ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಭಾನುವಾರದಂದು “ಗಾಯತ್ರಿ ಹವನ” ನಡೆಯಿತು. ಸೇವಾದಾರರಾಗಿ ಉಡುಪಿ ಚಿನ್ನಾಭರಣ ಉದ್ಯಮಿ ಸಂಧ್ಯಾ -ಸುಭಾಸ್ ಕಾಮತ್ ದಂಪತಿಗಳು ಪೂಜಾ ಕಾರ್ಯದ ಯಜಮಾನತ್ವ ವಹಿಸಿದ್ದರು.

ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಭಾನುವಾರದಂದು “ಗಾಯತ್ರಿ ಹವನ” ನಡೆಯಿತು. ಸೇವಾದಾರರಾಗಿ ಉಡುಪಿ ಚಿನ್ನಾಭರಣ ಉದ್ಯಮಿ ಸಂಧ್ಯಾ -ಸುಭಾಸ್ ಕಾಮತ್ ದಂಪತಿಗಳು ಪೂಜಾ ಕಾರ್ಯದ ಯಜಮಾನತ್ವ ವಹಿಸಿದ್ದರು.

ದೇವಳದ ಪ್ರಧಾನ ಅರ್ಚಕರಾದ ದಯಾಘನ ಭಟ್ ನೇತೃತ್ವದಲ್ಲಿ ವಿನಾಯಕ ಭಟ್, ದೀಪಕ್ ಭಟ್, ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ನಂತರ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಯಾಗದ ಪೂರ್ಣಾಹುತಿ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನಡೆಯಿತು. ದೇವಳದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು, ಸ್ವಯಂಸೇವಕರು, ಸೇವಾದಾರರು, ಜಿ.ಎಸ್.ಬಿ. ಯುವಕ / ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗೂರು ಪ್ರೌಢಶಾಲೆ: ಕಿಚನ್‌ ಗಾರ್ಡನ್‌ಗೆ ಚಾಲನೆ
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್‌ಗೆ ಸನ್ಮಾನ