* ಚಾಲಕರಿಗೆ ಸನ್ಮಾನ, ಸಮವಸ್ತ್ರ ವಿತರಣೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಬಸವರಾಜ ದೇವರು ವಿಶ್ವಾಸ
2024ರ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಂಬಳಿ ಬೀಸುವ ಮೂಲಕ ಈ ಕ್ಷೇತ್ರವನ್ನು ಇನ್ ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸ್ಥಾಪಕ ಜಿ.ಬಿ.ವಿನಯಕುಮಾರ ಪ್ರತಿನಿಧಿಸುವುದು ನಿಶ್ಚಿತ ಎಂದು ಧಾರವಾಡದ ಶ್ರೀ ರೇವಣಸಿದ್ದೇಶ್ವರ ಮಠದ ಡಾ.ಬಸವರಾಜ ದೇವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಇನ್ ಸೈಟ್ಸ್ ಐಎಎಸ್ ಸಂಸ್ಥೆ, ವಿನಯ ಮಾರ್ಗ ಟ್ರಸ್ಟ್, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಟೋ, ಲಾರಿ, ಗೂಡ್ಸ್, ಟ್ಯಾಕ್ಸಿ ಚಾಲಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚಾಲಕರಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ ಅತೀ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿನಯ್ ತಮ್ಮ ವಿದ್ಯೆ, ಜ್ಞಾನದಿಂದಲೇ ದೇಶಾದ್ಯಂತ ಭಾವಿ ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ, ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಜ್ಞಾನದಾಸೋಹ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು.ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ವಿನಯಕುಮಾರ್ ಗೆ ಕ್ಷೇತ್ರದ ಮತದಾರರು ಮಡಿಲಿನ ಮಗುವಂತೆ ಸಲಹಿ ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿ ಆಶೀರ್ವದಿಸಿ ಬೆನ್ನೆಲುಬಾಗಿ ನಿಲ್ಲಬೇಕು. ವರ್ಷದ ಹಿಂದೆ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕಂಬಳಿ ಬೀಸುವರೆಂದಿದ್ದೆ. ಅದೇ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮತಾಭಾವ, ಸಮಷ್ಠಿ ಪ್ರಜ್ಞೆ, ಸಾಧಿಸುವ ಗುರಿ, ಛಲ, ಲೋಕಕ್ಕೆ ಉಪಕಾರ ಮಾಡುವ ಮನಸ್ಸಿರುವವರೇ ನಿಜವಾದ ನಾಯಕರು. ಅಂತಹ ನಾಯಕತ್ವದ ಎಲ್ಲಾ ಗುಣಗಳೂ ವಿನಯಕುಮಾರಲ್ಲಿ ಕಂಡು ಬರುತ್ತಿವೆ ಎಂದರು.
ಕೋಟ್..ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಐಎಎಸ್, ಐಪಿಎಸ್, ಕೆಎಎಸ್ ತರಬೇತಿ ಕೇಂದ್ರದ ಗುರಿ ಹೊಂದಿರುವ ವಿನಯಕುಮಾರ ಆಸೆಯಂತೆ ಅದು ಕಾರ್ಯರೂಪಕ್ಕೆ ಬಂದರೆ ಮನೆಗೊಬ್ಬ ಸರ್ಕಾರಿ ಅಧಿಕಾರಿಗಳು ಬರುತ್ತಾರೆ. ವಿದ್ಯಾರ್ಥಿ, ಯುವ ಜನಾಂಗವನ್ನು ಗಮನದಲ್ಲಿಟ್ಟು ವಿನಯಕುಮಾರ ಶಿಕ್ಷಣದ ಮಹತ್ವ, ವ್ಯಕ್ತಿತ್ವ ವಿಕಸನ ಶಿಬಿರ, ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಿ. ಶ್ರೀ ಓಂಕಾರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠ.............
ದಾವಣಗೆರೆಯಲ್ಲಿ ಇನ್ ಸೈಟ್ಸ್, ವಿನಯ ಮಾರ್ಗ ಟ್ರಸ್ಟ್, ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಆಟೋ, ಲಾರಿ, ಗೂಡ್ಸ್, ಟ್ಯಾಕ್ಸಿ ಚಾಲಕರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಚಾಲಕರಿಗೆ ಸಮವಸ್ತ್ರ ವಿತರಣೆ ಸಮಾರಂಭ ಉದ್ಘಾಟನೆಯ ಗಣ್ಯರು ನೆರವೇರಿಸಿದರು. ..............ಪ್ಯಾನಲ್ ಫೋಟೊ///