ಮೀಸಲಾತಿ ಜಾರಿಗೊಳಿಸುವಂತೆ ಐತಿಹಾಸಿಕ ಹೋರಾಟಕ್ಕೆ ಸಜ್ಜು

KannadaprabhaNewsNetwork |  
Published : Oct 28, 2024, 01:08 AM IST
ಫೋಟೋ 27ಪಿವಿಡಿ2ಪಾವಗಡ,ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಳಮೀಸಲಾತಿ ಜಾರಿ ವಿಚಾರ ಕುರಿತು ತಾಲೂಕು ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪೂರ್ವಭೆಯಲ್ಲಿ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆಯ ವಿಚಾರದ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡರು. | Kannada Prabha

ಸಾರಾಂಶ

ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಸರ್ಕಾರಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಈ ಸಂಬಂಧ ದಲಿತ ಪರ ಸಂಘಟನೆ ಹಾಗೂ ಮೀಸಲಾತಿ ಹೋರಾಟ ಸಮಿತಿಯಿಂದ ಗಟ್ಟಿಯಾದ ಧ್ವನಿ ಎತ್ತುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸವಾಗಬೇಕು.

ಕನ್ನಡಪ್ರಭ ವಾರ್ತೆ ಪಾವಗಡ

ಸಾಮಾಜಿಕ ಸಬಲೀಕರಣಕ್ಕಾಗಿ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಮೀಸಲಾತಿ ಜಾರಿಗೆ ಒತ್ತಾಯಿಸಿ ಪಾವಗಡದಲ್ಲಿ ಐತಿಹಾಸಿಕ ಪ್ರತಿಭಟನೆಗೆ ಸಜ್ಜಾಗುವ ಅನಿರ್ವಾಯತೆಯಿದೆ ಎಂದು ತಾಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ತೀರ್ಮಾನಿಸಿದರು.

ತಾಲೂಕಿನ ದಲಿತ ಮುಖಂಡರಿಂದ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಒಳಮೀಸಲಾತಿ ವಿಚಾರದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಒಳಮೀಸಲಾತಿ ಜಾರಿ ಕುರಿತು ಪ್ರತಿಭಟನೆಯ ರೂಪರೇಷೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ದಲಿತ ಮುಖಂಡ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿಯ ಪಳವಳ್ಳಿ ಸುಬ್ಬರಾಜ್‌ ಮಾತನಾಡಿ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣದ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು. ಕಳೆದ ಮೂವತ್ತು ವರ್ಷಗಳಿಂದ ವಿಭಿನ್ನ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ, ಇದರ ಪರಿಣಾಮ ಮಾದರ ಹಾಗೂ ತಾಲೂಕು ಛಲವಾದಿ ಸೇರಿ ಶೋಷಿತ ಸಮುದಾಯಗಳು ಪ್ರಗತಿ ಕಾಣುವಲ್ಲಿ ವಿಫಲವಾಗುತ್ತಿವೆ. ಸ್ವಾರ್ಥ ಹಾಗೂ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ಒಳಮೀಸಲಾತಿ ಜಾರಿ ವಿಳಂಬವಾಗುತ್ತಿದ್ದು, ಸರ್ಕಾರದ ಕಣ್ಣು ತೆರೆಸುವ ಕೆಲಸವಾಗಬೇಕು. ಈ ಹಿನ್ನೆಲೆಯಲ್ಲಿ ಉಗ್ರ ಸ್ಪರೂಪದ ಹೋರಾಟಕ್ಕೆ ನಾವೆಲ್ಲಾ ಅಣಿಯಾಗಬೇಕಿದೆ. ಸಮುದಾಯದ ರಾಜಕೀಯ ವ್ಯಕ್ತಿಗಳ ಬೆಂಬಲ ಹಾಗೂ ಸಹಕಾರ ಇದ್ದರೆ ಸಾಕು. ಮುಂದಿನ ವಾರದಲ್ಲಿ ಮತ್ತೊಮ್ಮೆ ದಲಿತ ಮುಖಂಡರಿಂದ ಸಭೆ ನಡೆಸಿ ಪ್ರತಿಭಟನೆಗಾಗಿ ಗಡವು ನಿಗದಿಪಡಿಸಲಿದ್ದು, ತಾಲೂಕಿನ ದಲಿತ ಪರ ಸಂಘಟನೆ ಹಾಗೂ ಒಳಮೀಸಲಾತಿ ಹೋರಾಟ ಸಮಿತಿಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.

ಡಿಎಸ್‌ಎಸ್‌ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿಯ ಯುವ ಮುಖಂಡ ಟಿ.ಎನ್‌,ಪೇಟೆ ರಮೇಶ್‌ ಮಾತನಾಡಿ, ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಸರ್ಕಾರಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಈ ಸಂಬಂಧ ದಲಿತ ಪರ ಸಂಘಟನೆ ಹಾಗೂ ಮೀಸಲಾತಿ ಹೋರಾಟ ಸಮಿತಿಯಿಂದ ಗಟ್ಟಿಯಾದ ಧ್ವನಿ ಎತ್ತುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸವಾಗಬೇಕು. ಮೀಸಲಾತಿ ಜಾರಿಯಾಗುವವರೆಗೂ ಹೋರಾಟ ಮುಂದುವರೆಸಲು ಸಜ್ಜಾಗುವಂತೆ ಅವರು ಕರೆ ನೀಡಿದರು. ಹಿರಿಯ ದಲಿತ ಮುಖಂಡರಾದ ಎಸ್‌.ಹನುಮಂತರಾಯಪ್ಪ, ವೆಟನರಿ ಉಗ್ರಪ್ಪ, ಕಡಮಲಕುಂಟೆ ತಮಟೆ ಸುಬ್ಬರಾಯಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ರವೀಂದ್ರಕುಮಾರ್‌, ಸಿ.ಕೆ.ಪುರ ಹನುಮಂತರಾಯಪ್ಪ, ತಾಲೂಕು ಡಿಎಸ್‌ಎಸ್‌ ಸಂಚಾಲಕ ಮೀನಗುಂಟನಹಳ್ಳಿ ನರಸಿಂಹಪ್ಪ, ಹೋರಾಟಗಾರ ಕಿರ್ಲಾಲಹಳ್ಳಿಯ ಈರಣ್ಣ, ವಕೀಲರಾದ ಬೊಮ್ಮತನಹಳ್ಳಿ ನರಸಿಂಹಪ್ಪ, ಅಂಬರೀಶ್‌, ಕೆ.ಟಿ.ದಲಿತ್‌ ಕುಮಾರ್‌, ಪಳವಳ್ಳಿ ಸುಬ್ಬರಾಯಪ್ಪ, ದವಡಬೆಟ್ಟ ಮದ್ಲೇಟಪ್ಪ, ಪಾವಗಡ ಅಂಜನ್‌ಬಾಬು, ಅಗ್ನಿ ಶಿವಪ್ಪ, ಓಬಳೇಶ್‌ ಗೋಪಾಲ್‌ ಸೇರಿ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!