ಮಹಿಳಾ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಗೀತಾ ಸುರತ್ಕಲ್

KannadaprabhaNewsNetwork |  
Published : Jul 01, 2025, 01:48 AM IST
ಗೀತಾ ಸುರತ್ಕಲ್‌ | Kannada Prabha

ಸಾರಾಂಶ

ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನ ಜು.27ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಚಿತ್ರನಟಿ, ರಂಗನಟಿ, ಸ್ತ್ರೀವಾದಿ ಚಿಂತಕಿ ಗೀತಾ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನ ಜು.27ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಚಿತ್ರನಟಿ, ರಂಗನಟಿ, ಸ್ತ್ರೀವಾದಿ ಚಿಂತಕಿ ಗೀತಾ ಸುರತ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಗೀತಾ ಸುರತ್ಕಲ್ ಅವರು ಸ್ತ್ರೀವಾದಿ ಚಿಂತನೆಯ ಪ್ರಗತಿಪರ ಸಾಹಿತಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ- 2018ರ ಉದ್ಘಾಟಕರಾಗಿದ್ದರು. ನಾಟಕ ರಂಗ ಗೀತಾ ಸುರತ್ಕಲ್ ಅವರ ಆಸಕ್ತಿಯ ಕ್ಷೇತ್ರ. ನಾಟಕದಲ್ಲಿ ಇವರ ಪಾತ್ರಗಳು ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿದ್ದವು.ಸಿನಿಮಾದಲ್ಲೂ ಗುರುತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬೋಳುವಾರು ಮಹಮ್ಮ್ಮದ್ ಕುಂಞಿ ಅವರ ಪ್ರಸಿದ್ಧ ಕತೆಯನ್ನು ಅನನ್ಯ ಕಾಸರವಳ್ಳಿ ಅವರು ‘ಕಪ್ಪು ಕಲ್ಲಿನ ಶೈತಾನ’ ಎಂಬ ಸಿನಿಮಾ ನಿರ್ದೇಶಿಸಿದ್ದು, ಕಲಾವಿದೆ ಗೀತಾ ಸುರತ್ಕಲ್ ಪ್ರಧಾನ ಭೂಮಿಕೆ ನಿರ್ವಹಿಸಿದ್ದಾರೆ. ಇದಲ್ಲದೆ ‘ಇತ್ತಿಚ್ಚಿನ ಅಮ್ಮಚ್ಚಿ’ ಎಂಬ ನೆನಪು, ತುರ್ತು ನಿರ್ಗಮನ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ.ಸ್ವಾಗತ ಸಮಿತಿಯ ಅದ್ಯಕ್ಷರಾಗಿ ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತಿ ಬಿ. ಶೆಟ್ಟಿ, ಖಜಾಂಚಿ ಅಸುಂತ ಡಿಸೋಜ ಆಯ್ಕೆಗೊಂಡಿದ್ದಾರೆ. ಇತರ ಪದಾಧಿಕಾರಿಗಳಾಗಿ ಚಂದ್ರಕಲಾ ನಂದಾವರ, ಬಿ.ಎಂ. ರೋಹಿಣಿ, ಮಂಜುಳಾ ನಾಯಕ್, ಸ್ವರ್ಣ ಭಟ್, ಸುಮತಿ ಹೆಗ್ಡೆ, ಶರೀಲ್ ಅರುಣ್ ಬಂಗೇರ, ಗ್ರೆಟ್ಟಾ ಟೀಚರ್, ಧನವಂತಿ ಪೂಜಾರಿ, ವಿದ್ಯಾ ಶೆಣೈ, ಬದ್ರುನ್ನೀಸಾ, ಉಮೈನಾ, ಶಾಲಿನಿ, ಅರ್ಚನಾ ರಾಮಚಂದ್ರ, ದೇವಿಕಾ ರೈ, ಡಾ.ಹರಿಣಾಕ್ಷಿ ಕುಂಪಲ, ಡಾ.ಸವಿತಾ ಸುವರ್ಣ, ಕಾರ್ಮಿಲಿಟಾ ಡಿಸೋಜ, ಚಂದ್ರಕಲಾ, ಚಿತ್ರಲೇಖಾ, ಆಶಾ ಸಂಜೀವನಾ, ದಿಷಾ ರೀಟಾ ಪುರ್ತಾಡೋ, ಗುಣವತಿ ಕಿನ್ಯಾ ಸೇರಿದಂತೆ ಸುಮಾರು 100 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ