ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ದೇಶದಲ್ಲಿ ಹೆಣ್ಣುಮಕ್ಕಳ ಭ್ರೂಣಹತ್ಯೆ ಶಿಕ್ಷಾರ್ಹ ಅಪರಾಧವಾಗಿದ್ದರೂ ಸಹ ಭ್ರೂಣಹತ್ಯೆ ನಿರಂತರವಾಗಿ ನಡೆಯುತ್ತಿರುವ ಕಾರಣ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಿದ್ದು, ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಭಾರಿ ವ್ಯತ್ಯಾಸ ಆಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ. ಧನಶೇಖರ್ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹಿಂದಿನ ವರ್ಷಗಳಲ್ಲಿ ಹೆಣ್ಣು ಅಬಲೆ ಎಂದು ಮನೆಯಿಂದ ಹೊರಗಡೆ ಬಿಡುತ್ತಿರಲಿಲ್ಲ, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಅಬಲೆಯಲ್ಲ, ಸಬಲೆ ಎನ್ನುವುದನ್ನು ಎಲ್ಲಾ ರಂಗದಲ್ಲೂ ಸಾಬೀತು ಪಡಿಸಿದ್ದಾಳೆ ಆದ್ದರಿಂದ ಹೆಣ್ಣು ಮಕ್ಕಳೆಂದು ಉದಾಸೀನ ಮಾಡದೆ ಹೆಣ್ಣು ಸಂತತಿಯನ್ನು ಉಳಿಸಿ ಬೆಳೆಸಿ ಎಂದರು.
ಆರೋಗ್ಯಾಧಿಕಾರಿ ತಬಸಂ ಮಾತನಾಡಿ, ಭ್ರೂಣ ಹತ್ಯೆ ಮಹಾ ಪಾಪ, ಭ್ರೂಣ ಹತ್ಯೆ ಮಾಡಿಸಿಕೊಳ್ಳುವುದು, ಪ್ರೇರೇಪಿಸುವುದು ಹಾಗೂ ಮಾಡುವುದು ಶಿಕ್ಷಾರ್ಹ ಅಪರಾಧ. ಅದೇ ರೀತಿ ಲಿಂಗ ಪತ್ತೆಯನ್ನೂ ಮಡಬಾರದು ಆದ್ದರಿಂದ ತಾಯಂದಿರು ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡದೆ ಉಳಿಸಿ ಬೆಳೆಸಿ ಮತ್ತು ವಿಶ್ವದಲ್ಲಿ ಪುರುಷರಿಗಿಂತ ಹೆಚ್ಚಿನ ಸಾಧನೆಯನ್ನು ಮಹಿಳೆಯರೇ ಮಾಡಿದ್ದಾರೆ. ಇಂದಿನ ಸಮಾಜದಲ್ಲಿ ಮಹಿಳೆ ಪುರು?ರ ಸರಿಸಾಮನವಾಗಿ ದುಡಿಯುತ್ತಿದ್ದಾಳೆ ಜತೆಗೆ ಸಾಧನೆ ಮಾಡುತ್ತಿದ್ದಾಳೆ ಹಾಗೂ ಗಂಡು ಮಕ್ಕಳಿಗಿಂತ ಚೆನ್ನಾಗಿ ತನ್ನ ಕುಂಟುಂಬವನ್ನು ಪ್ರೀತಿಯಿಂದ ನೋಡಿ ಕೊಳ್ಳುತ್ತಿದ್ದಾಳೆ. ಆದ್ದರಿಂದ ನಿಮಗೆ ಹಣ್ಣೆ ಮಕ್ಕಳಾದರೆ ಹೆಚ್ಚು ಸಂತೋಷಪಡಿ. ಹಿಂದೆ ವರದಕ್ಷಿಣೆ ಇತ್ತು, ಈಗ ವಧುದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು.ಡಾ. ರೇಖಾ, ಡಾ. ಸಿಂಚನಾ, ಮಕ್ಕಳ ತಜ್ಞ ಕೋನ್ಸಾಗರ್, ಶುಶ್ರೂಷಕ ಅಧೀಕ್ಷಕಿ ಮೀನಾಕ್ಷಿ, ಮೊಮ್ತಾಜ್, ಆರೋಗ್ಯಾಧಿಕಾರಿ ಸ್ವಾಮಿ, ಶುಶ್ರೂಷಕಿಯರಾದ ತುಳಸಿ, ಜಯಮ್ಮ, ಗೌರಮ್ಮ ಬೀನಾ, ಭಾಗವಹಿಸಿದ್ದರು.