ಕೊಪ್ಪಳಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ಭರವಸೆ: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Jan 25, 2025, 01:02 AM IST
ಫೋಟೋ24.2: ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ 2.70 ಕೋಟಿ ವೆಚ್ಚದಲ್ಲಿ ಗಿಣಗೇರಿ -ಗಬ್ಬೂರು ರಸ್ತೆ ಅಭಿವೃದ್ದಿಗೆ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಗಿಣಗೇರಿ -ಗೊಂಡಬಾಳ ಜಿಪಂ ವ್ಯಾಪ್ತಿಯ ಹಳೇಕನಕಾಪುರ, ಕನಕಾಪುರ ತಾಂಡಾ, ಹೊಸ ಕನಕಾಪುರ, ಗಿಣಗೇರಿ, ಬಸಾಪುರ, ಕುಟುಗನಹಳ್ಳಿ, ಕಿಡದಾಳ, ಬೆಳವಿನಾಳ ಹಾಗೂ ಹಾಲವರ್ತಿ ಗ್ರಾಮಗಳಲ್ಲಿ ಅಂದಾಜು ಮೊತ್ತ ₹23.87 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೆರವೇರಿಸಿದರು.

ಕೊಪ್ಪಳ: ತಾಲೂಕಿನ ಗಿಣಗೇರಿ -ಗೊಂಡಬಾಳ ಜಿಪಂ ವ್ಯಾಪ್ತಿಯ ಹಳೇಕನಕಾಪುರ, ಕನಕಾಪುರ ತಾಂಡಾ, ಹೊಸ ಕನಕಾಪುರ, ಗಿಣಗೇರಿ, ಬಸಾಪುರ, ಕುಟುಗನಹಳ್ಳಿ, ಕಿಡದಾಳ, ಬೆಳವಿನಾಳ ಹಾಗೂ ಹಾಲವರ್ತಿ ಗ್ರಾಮಗಳಲ್ಲಿ ಅಂದಾಜು ಮೊತ್ತ ₹23.87 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೆರವೇರಿಸಿದರು.

ನಂತರ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಮೊದಲನೇ ಬಾರಿಗೆ ಮುಖ್ಯಮಂತ್ರಿಯಾದ ವೇಳೆ ನಾನೂ ಮೊದಲನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಿದ್ದೆ. ಆ ಐದು ವರ್ಷ ಆಡಳಿತ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ₹3000 ಕೋಟಿ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದರು. ಈ ಅವಧಿಯಲ್ಲೂ ಮುಖ್ಯಮಂತ್ರಿ ಕ್ಷೇತ್ರದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾಡುತ್ತಿರುವ ಎಲ್ಲ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಹಂತ ಹಂತವಾಗಿ ಅನುದಾನ ನೀಡುತ್ತಿದ್ದಾರೆ. ಕೊಪ್ಪಳಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ. ಮುಂದಿನ ತಿಂಗಳು ಮುಖ್ಯಮಂತ್ರಿ ಕೊಪ್ಪಳಕ್ಕೆ ಆಗಮಿಸಿ ನೂತನವಾಗಿ ನಿರ್ಮಾಣಗೊಂಡಿರುವ 450 ಹಾಸಿಗೆ ಆಸ್ಪತ್ರೆ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

₹14 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಅಡಿಗಲ್ಲು: ₹9.50 ಕೋಟಿ ವೆಚ್ಚದಲ್ಲಿ ಕಲ್ಮಲಾ-ಶಿಗ್ಗಾಂವಿ ರಸ್ತೆ, ₹2.70 ಕೋಟಿ ವೆಚ್ಚದಲ್ಲಿ ಗಿಣಗೇರಿ -ಗಬ್ಬೂರು ರಸ್ತೆ ಹಾಗೂ ₹1.99 ಕೋಟಿ ವೆಚ್ಚದಲ್ಲಿ ಗಿಣಗೇರಿಯ ಮಹಾತ್ಮ ಗಾಂಧಿ ಸರ್ಕಲ್‌ನಿಂದ ಅಗಸಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.

ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗಿಣಗೇರಿ ಗ್ರಾಪಂ ಅಧ್ಯಕ್ಷೆ ರಂಜಿತಾ ಚವ್ಹಾಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಕಲ್ಲನ್ನವರ, ರಾಮಣ್ಣ ಚೌಡ್ಕಿ, ಮೇಟಿ, ನಾಗರಾಜ ಚಳ್ಳೊಳ್ಳಿ, ಸುಬ್ಬಣ್ಣ ಆಚಾರ, ಪಂಪಣ್ಣ ಪೂಜಾರ, ಗ್ಯಾನಪ್ಪ ತಳಕಲ್, ಆನಂದ ಕಿನ್ನಾಳ, ಭರಮಪ್ಪ ಗೊರವರ್, ಹನುಮಂತ ವಾಲ್ಮೀಕಿ, ನಿಂಗಪ್ಪ ಕುಟುಗನಳ್ಳಿ, ಅಮರೇಶ ಕಂಬಳಿ, ಗೋವಿಂದ ಚೌಡ್ಕಿ, ಫಕೀರಪ್ಪ ಬಂಗ್ಲಿ, ತಹಸೀಲ್ದಾರ್ ವಿಠ್ಠಲ ಚೌಗಲೇ, ತಾಪಂ ಇಒ ದುಂಡೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ
ಗ್ರಾಮ ಪಂಚಾಯ್ತಿವಾರು ದೌರ್ಜನ್ಯ ನಿಯಂತ್ರಣ ತಡೆಗೆ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಾನಮ್ಮನವರ