ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮರಾಠಾ ಸಾಮ್ರಾಟ ಶಿವಾಜಿ ಮಹಾರಾಜರ ದೊಡ್ಡ ಸೈನ್ಯದ ವಿರುದ್ಧ ಹೋರಾಡಲು ಎರಡು ಸಾವಿರ ಮಹಿಳೆಯರ ಬಲಿಷ್ಠ ಸೈನ್ಯ ಕಟ್ಟಿ ಹೋರಾಡಿ ನಾಡ ರಕ್ಷಣೆ ಮಾಡಿದ್ದಷ್ಠೇ ಅಲ್ಲ, ಮರಾಠಿಗರು ಮತ್ತು ಕನ್ನಡ ನಾಡ ಜನರ ನಡುವೆ ಸಹೋದರತ್ವ ಬಾಂಧವ್ಯದ ಕೊಂಡಿಯಾಗಿ ಉತ್ತಮ ಆಡಳಿತ ನಡೆಸಿ ದಿಟ್ಟತನ ಮೆರೆದ ವೀರರಾಣಿ ಮಲ್ಲಮ್ಮಳ ಶೌರ್ಯ ಸಾಹಸಗಳು ಎಂದಿಗೂ ಅವಿಸ್ಮರಣೀಯ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಬೆಳವಡಿ ಮಲ್ಲಮ್ಮನ ಉತ್ಸವ-2026 ಉದ್ಘಾಟಿಸಿ ಅವರು ಮಾತನಾಡಿದರು. ಶೌರ್ಯ ಸಾಹಸ ಮೆರೆಯಲು ಲಿಂಗಬೇಧಗಳಿಲ್ಲ. ಇಂದಿನ ಸಮಾಜದಲ್ಲಿ ಮಹಿಳೆಯರು ಸಾಕಷ್ಟು ಶೋಷಣೆ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಮಹಿಳೆಯರು ರಾಣಿ ಮಲ್ಲಮ್ಮಳ ಶೂರತ್ವ, ಛಲ ಮತ್ತು ಧೈರ್ಯಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ರಾಣಿ ಮಲ್ಲಮ್ಮನವರ ಶೌರ್ಯ ಸಾಹಸದ ಇತಿಹಾಸವನ್ನು ಇಂದಿನ ಮಕ್ಕಳಿಗೆ, ಯುವ ಪೀಳಿಗೆಗೆ ತಿಳಿಸಿ ನಾಡು ನುಡಿ ರಕ್ಷಣೆಗಾಗಿ ಪ್ರೇರಪಿಸಬೇಕಾಗಿದೆ ಎಂದರು.ಬೆಳವಡಿಯ ಸಂಸ್ಥಾನ ರಾಜಗುರು ಶಿವಮಹಾಂತ ಶಿವಚಾರ್ಯ ಸ್ವಾಮಿಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನನಾನಂದ ಸ್ವಾಮಿಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬೆಳವಡಿ ನಾಡ ಜನರ ಬಹುದಿನಗಳ ಬೇಡಿಕೆ ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಬೆಳವಡಿ ನಾಡಿನ ಅಭಿವೃದ್ಧಿ ಶಖೆ ಆರಂಭವಾಗಲಿ ಎಂದು ಆಶಿಸಿದರು.ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ ಅವರಿಗೆ ಈ ಬಾರಿಯ ಬೆಳವಡಿ ಮಲ್ಲಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಹಿತಿ ಯ.ರು,ಪಾಟೀಲ ರಚಿಸಿರುವ ಧೀರ ಕನ್ನಡತಿ ಬೆಳವಡಿ ಮಲ್ಲಮ್ಮ ಕೃತಿ ಬಿಡುಗಡೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಡಿವೈಎಸ್ಪಿ ವೀರೇಶ ಹಿರೇಮಠ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ.ಭಾನುಪ್ರಕಾಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಎಸಿ ಪ್ರವೀಣ ಜೈನ್, ಕಿತ್ತೂರು ತಹಸೀಲ್ದಾರ್‌ ಕಲಗೌಡ ಪಾಟೀಲ, ತಾಪಂ ಇಒ ಸಂಜೀವ ಜುನ್ನೂರ, ಜಿಪಂ ಮಾಜಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಬೈಲಹೊಂಗಲ ತಹಸೀಲ್ದಾರ್‌ ಹನಮಂತ ಶಿರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ,ವಂದಿಸಿದರು. ಎಂ.ಪಿ.ಉಪ್ಪಿನ ನಿರೂಪಿಸಿದರು.ಸಚಿವ, ಜನಪ್ರತಿನಿಧಿಗಳು ಗೈರು

ಉತ್ಸವ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿದ್ದ ಬಹುತೇಕ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಪ್ರತಿ ವರ್ಷವೂ ಜನಪ್ರತಿನಧಿಗಳು ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಗೈರಾಗಿ ಐತಿಹಾಸಿಕ ಬೆಳವಡಿ ನಾಡಿನ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಗ್ರಾಮಸ್ಥರರು ಬೇಸರ ವ್ಯಕ್ತಪಡಿಸಿದರು.

------ಕೋಟ್‌ಪ್ರತಿವರ್ಷ ಉತ್ಸವ ಆಚರಿಸಲು ಶಾಶ್ವತ ಜಾಗ ಖರೀದಿಗೆ ಸ್ಥಳ ಒದಗಿಸಿಕೊಟ್ಟ ಬೆಳವಡಿ ಗ್ರಾಮದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಬೆಳವಡಿ ಭಾಗದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ.ಮಹಾಂತೇಶ ಕೌಜಲಗಿ, ಬೈಲಹೊಂಗಲ ಶಾಸಕಫೊಟೋ ಶೀರ್ಷಿಕೆ : (28 ಡಿ ಡಬ್ಲೂ ಡಿ ಪಿ 14)ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವವದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬೆಳವಡಿಯ ಸಂಸ್ಥಾನ ರಾಜಗುರು ಶ್ರೀ ಶಿವಮಹಾಂತ ಶಿವಚಾರ್ಯ ಸ್ವಾಮಿಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನನಾನಂದ ಸ್ವಾಮಿಜಿ ಹಾಗೂ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು.