ಬೆಸ್ಕಾಂ ಎನ್‌ಆರ್‌ಎಸ್‌ 220/66/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ತ್ರೈಮಾಸಿಕ ಕಾಮಗಾರಿ ಹಿನ್ನೆಲೆಯಲ್ಲಿ ನ.18 ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ರಾಜಾಜಿನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.

 ಬೆಂಗಳೂರು: ಬೆಸ್ಕಾಂ ಎನ್‌ಆರ್‌ಎಸ್‌ 220/66/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ತ್ರೈಮಾಸಿಕ ಕಾಮಗಾರಿ ಹಿನ್ನೆಲೆಯಲ್ಲಿ ನ.18 ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ರಾಜಾಜಿನಗರ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.

ರಾಜಾಜಿನಗರ 1ರಿಂದ 6ನೇ ಬ್ಲಾಕ್ ವರೆಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗುಬ್ಬಣ್ಣ ಇಂಡಸ್ಟ್ರೀಯಲ್ ಏರಿಯಾ, ಡಾ.ಮೋದಿ ಹಾಸ್ಪಿಟಲ್ ರೋಡ್. ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ 1 ರಿಂದ 5ನೇ ಕ್ರಾಸ್‌ವರೆಗೆ, ಮಹಾಗಣಪತಿನಗರ, ಕೆ.ಎಚ್.ಬಿ.ಕಾಲೋನಿ 2ನೇ ಹಂತ. ಲಿಂಕ್ ರೋಡ್.

ಸಾರ್ವಜನಿಕರು ಸಹಕರಿಸಬೆಕೆಂದು ಮನವಿ

ದೇವಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಶನಿಮಹಾತ್ಮ ಟೆಂಪಲ್, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ಎಲ್.ಎನ್.ಪುರ, ರಾಜ್‌ ಕುಮಾರ್ ರಸ್ತೆ, ದಯಾನಂದ ನಗರ, ಸಾಯಿಮಂದಿರ. ಹರಿಶ್ಚಂದ್ರ ಮಾರುತಿ ಎಕ್ಸ್‌ಟನ್ನನ್, ರಾಜಾಜಿನಗರ, ಬ್ರಿಗೇಡ್ ಗೇಟ್ ವೇ ಅಪಾರ್ಟ್‌ ಮೆಂಟ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಮಲ್ಲೇಶ್ವರಂ ಈಜುಕೊಳ, ಪೈಪ್‌ಲೈನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೆಕೆಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಶಂಕರಮಠ ಸುತ್ತಮುತ್ತ ಇಂದು ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಬೆಸ್ಕಾಂ ಮಹಾಲಕ್ಷ್ಮಿ ಲೇಔಟ್‌ 66/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತುರ್ತು ತ್ರೈಮಾಸಿಕ ಕಾಮಗಾರಿ ಹಿನ್ನೆಲೆಯಲ್ಲಿ ನ.17 (ಮಂಗಳವಾರ) ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಶಂಕರಮಠ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.

ಮಂಜುನಾಥ ನಗರ, ಮಹಾಗಣಪತಿ ನಗರ, ಶಿವನಹಳ್ಳಿ, ಕಮಲಾನಗರ, ಗೃಹಲಕ್ಷ್ಮಿಲೇಔಟ್‌, ಮಹಾಲಕ್ಷ್ಮಿಪುರಂ, ಮೋದಿ ಆಸ್ಪತ್ರೆ ರಸ್ತೆ, ಶಂಕರಮಠ, ಜೆ.ಸಿ.ನಗರ, ಕುರುಬರಹಳ್ಳಿ, ಮೈಕೋಲೇಔಟ್‌, ಯಶವಂತಪುರ ಕೈಗಾರಿಕಾ ಪ್ರದೇಶ, ನಾಗಪುರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಕಿರ್ಲೋಸ್ಕರ್‌ ಕಾಲೋನಿ, ಆದರ್ಶ ನಗರ ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೆಕೆಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.