ಗೇರುಕುಪ್ಪೆ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟನೆ

KannadaprabhaNewsNetwork |  
Published : May 12, 2026, 01:45 AM IST
11ಎಚ್ಎಸ್ಎನ್9 : ಗೇರುಕುಪ್ಪೆ  ಗ್ರಾಮದಲ್ಲಿ ಹಾಲು  ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆಯನ್ನು  ಶಾಸಕರು ಎ. ಮಂಜು ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ರೈತರುಗಳು ಕೃಷಿ ಬೆಳೆಯ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮನವಿ ಮಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗಿತ್ತು. ಖಾಸಗಿ ಡೈರಿಗಳಿಗೆ ಅವಲಂಬಿತರಾಗದೆ ಮಹಿಳಾ ಸಹಕಾರ ಸಂಘದ ಡೇರಿಗಳಿಗೆ ಹಾಲು ಹಾಕುವ ಮುಖಾಂತರ ಸರ್ಕಾರದ ಸಹಾಯಧನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ರಾಮನಾಥಪುರ: ಹೈನುಗಾರಿಕೆಯಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮ ಮಕ್ಕಳ ವಿದ್ಯಾಭಾಸ ಮಾಡಿಸುವಂತೆ ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಮನವಿ ಮಾಡಿದರು.ಮಲ್ಲಿಪಟ್ಟಣ ಹೋಬಳಿಯ ಗೇರುಕುಪ್ಪೆ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬಿ.ಎಂ.ಸಿ. ಕೇಂದ್ರಗಳನ್ನು ನೀಡುವುದಾಗಿ ಭರವಸೆ ನೀಡಿದ ಅವರು ಗ್ರಾಮೀಣ ಪ್ರದೇಶದ ರೈತರುಗಳು ಕೃಷಿ ಬೆಳೆಯ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಮನವಿ ಮಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಗೂ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗಿತ್ತು. ಖಾಸಗಿ ಡೈರಿಗಳಿಗೆ ಅವಲಂಬಿತರಾಗದೆ ಮಹಿಳಾ ಸಹಕಾರ ಸಂಘದ ಡೇರಿಗಳಿಗೆ ಹಾಲು ಹಾಕುವ ಮುಖಾಂತರ ಸರ್ಕಾರದ ಸಹಾಯಧನ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಜೆಡಿಎಸ್ ಅಧ್ಯಕ್ಷರು ಹೊನ್ನವಳ್ಳಿ ಸತೀಶ್ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ಪುರಸಭೆ ಅಧ್ಯಕ್ಷರಾಗಿ ಅಕ್ರಮ್ ಶರೀಫ್ ಆಯ್ಕೆ
ತಾಲೂಕು ಆಸ್ಪತ್ರೆ ಏಕಪಕ್ಷೀಯ ನೀತಿಗೆ ಶಾಸಕ ರೇವಣ್ಣ ಗರಂ