ಲಕ್ಷ್ಮೇಶ್ವರ: ಕೋವಿಡ್ ನಂತರವಂತೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಬಂದಿದ್ದು, ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ, ಮಧುಮೇಹ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ತಪ್ಪದೇ ಮಾಡಿಸಿಕೊಳ್ಳಬೇಕು ಎಂದು ಭಾರತಿಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎಂ.ಡಿ. ಸಮುದ್ರಿ ಹೇಳಿದರು.
ಸ್ತ್ರೀರೋಗ ತಜ್ಞ ಬಸವರಾಜ ನರೇಗಲ್ಲ ಮಾತನಾಡಿ, ಮಹಿಳೆಯರು ತಮ್ಮ ಆರೋಗ್ಯಕ್ಕೆ ಪೂರಕವಾಗುವಂತ ಕಬ್ಬಿಣ ಅಂಶವುಳ್ಳ, ಪ್ರೋಟಿನ್, ಕ್ಯಾಲ್ಸಿಯಂವುಳ್ಳ ಆಹಾರ ಸೇರಿದಂತೆ ನಾರು ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವ ಮೂಲಕ ಆರೋಗ್ಯ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ. ದೇಹದಲ್ಲಿ ಏನಾದರೂ ವ್ಯತ್ಯಾಸವಾದರೇ ತಜ್ಞ ವೈದ್ಯರ ಹತ್ತಿರ ತಪ್ಪದೇ ತಪಾಸಣೆ ಮಾಡಿಕೊಳ್ಳಲೇ ಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಂದ್ರಶೇಖರಪ್ಪ ಅಂಗಡಿ, ಬಸವಣ್ಣೆಪ್ಪ ಅಂಗಡಿ, ಮಹಾಂತಗೌಡ ಪಾಟೀಲ, ನಾಗಪ್ಪ ಅಕ್ಕೂರ, ಗುರುಸಿದ್ದಯ್ಯ ಹಿರೇಮಠ, ಚನವೀರಯ್ಯ ಹಿರೇಮಠ, ಹಾಲಪ್ಪ ಅಂಗಡಿ, ಬಸವರಾಜ ನಿಂ.ಪ್ಯಾಟಿ, ಷಣ್ಮುಕಪ್ಪ ಪ್ಯಾಟಿ, ಗುಳಪ್ಪ ಅಕ್ಕೂರ, ತಿರಕಪ್ಪ ಅಕ್ಕೂರ, ಗೋವಿಂದಪ್ಪ ಬಾರಕೇರ, ಸೋಮಣ್ಣ ಅಕ್ಕೂರ, ನಿಂಗಪ್ಪ ಕಂಬಳಿ, ಸೋಮಲಪ್ಪ ಲಮಾಣಿ ಸೇರಿದಂತೆ ಗ್ರಾಮದ ಗಣ್ಯ ಮುಖಂಡರು ಉಪಸ್ಥಿತರಿದ್ದರು.ಸೊಳ್ಳೆಬತ್ತಿ, ತಾಡಪಲ್, ಊರುಗೋಲು ವಿತರಣೆ:ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಬಡವರಿಗೆ ಸೊಳ್ಳೆಪರದೆ, ತಾಡಪಲ್ ಸೇರಿದಂತೆ ಸೊಳ್ಳೆಬತ್ತಿಗಳನ್ನು ವಿತರಿಸಲಾಯಿತು. ಮೊಣಕಾಲು ನೋವಿನಿಂದ ಬಳಲುವವರಿಗೆ ಊರುಗೋಲುಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಡಾ.ಮಲ್ಲಿಕಾರ್ಜುನ ಕನಕಗಿರಿ, ಡಾ.ಮಹೇಶ ಪ್ಯಾಟಿ ಸೇರಿದಂತೆ ಗದಗಿನ ಡಿಜಿಎಂ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿಗಳು ಸುಮಾರು 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡುವ ಮೂಲಕ ವಿಶೇಷ ಕಾಳಜಿ, ಅಗತ್ಯ ಸಲಹೆ ಹಾಗೂ ಔಷಧಿಗಳನ್ನು ನೀಡಿದರು.