ಉನ್ನತ ಮಟ್ಟದ ಪದವಿ ಪಡೆದು ದೊಡ್ಡ ಹುದ್ದೆಗೇರಿ: ಶಾಸಕ ಶಾಂತನಗೌಡ

KannadaprabhaNewsNetwork |  
Published : Jun 16, 2025, 02:45 AM IST
ನ್ಯಾಮತಿ ಎಪಿಎಂಸಿ.ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1-2, ಯುವ ರೆಡ್‌ಕ್ರಾಸ್‌, ರೋವರ್ಸ್ ಮತ್ತು ರೇಜಂರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಅವಳಿ ತಾಲೂಕಿನ ಶಾಸಕ ಡಿ.ಜಿ.ಶಾಂತನಗೌಡರು ಉದ್ಘಾಟಿಸಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಓದಿ ಉನ್ನತಮಟ್ಟದ ಪದವಿ ಪಡೆದುಕೊಂಡು ದೊಡ್ಡದೊಡ್ಡ ಹುದ್ದೆಗಳಿಗೆ ಹೋಗಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ನ್ಯಾಮತಿ

ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಓದಿ ಉನ್ನತಮಟ್ಟದ ಪದವಿ ಪಡೆದುಕೊಂಡು ದೊಡ್ಡದೊಡ್ಡ ಹುದ್ದೆಗಳಿಗೆ ಹೋಗಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ನ್ಯಾಮತಿ ಎಪಿಎಂಸಿ.ಆವರಣದಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1-2, ಯುವ ರೆಡ್‌ಕ್ರಾಸ್‌, ರೋವರ್ಸ್ ಮತ್ತು ರೇಜಂರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನೀವೆಲ್ಲಾ ಒಂದನೇ, ಎರಡನೇ ತರಗತಿ ವಿದ್ಯಾರ್ಥಿಗಳಲ್ಲ ನೀವು ಚೆನ್ನಾಗಿ ಓದಿ ಪದವಿ ಪಡೆಯುವುದು ಹುಡುಗಾಟವಲ್ಲ, ನೀವು ಓದುವುದಕ್ಕೆ ಎಲ್ಲಾ ಸೌಲಭ್ಯಗಳಿವೆ. ನ್ಯಾಮತಿ ಪ್ರಥಮ ದರ್ಜೆ ಕಾಲೇಜಿನ ಸುತ್ತಳತೆ ಸುಮಾರು 7ಎಕರೆ ಭೂಮಿ ಇದೆ. ಗುಣಮಟ್ಟದ ಕಾಲೇಜಿನಲ್ಲಿ ಕೊಠಡಿಗಳಿವೆ, ನಿಮಗೆ ಉಪನ್ಯಾಸಕರ ಕೊರತೆಯಿಲ್ಲ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟಲ್‌ ಸೌಲಭ್ಯಗಳಿವೆ ಹಾಗೂ ಉತ್ತಮವಾದ ಗ್ರಂಥಾಲಯ ಇದೆ. ಅತಿಥಿ ಉಪನ್ಯಾಸಕರು ಸಹ ಇದ್ದಾರೆ ಇಷ್ಟೆಲ್ಲಾ ಸೌಕರ್ಯಗಳಿರುವ ಕಾಲೇಜಿನಲ್ಲಿ ಓದುವುದು ಒಂದು ಭಾಗ್ಯವಾಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉನ್ನತ ಪದವಿ ಪಡೆದು ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ನ್ಯಾಮತಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳು ಇಲ್ಲದ ಕಡೆ ರಸ್ತೆಗಳನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದಷ್ಟು ಬೇಗ ರಸ್ತೆಗಳು ನಿರ್ಮಾಣವಾಗುತ್ತದೆ ಎಂದು ಭರವಸೆ ನೀಡಿದರು.

ಪಿಐ. ಎನ್‌.ಎಸ್‌.ರವಿ, ಹೊಸಮನೆ ಮಲ್ಲಿಕಾರ್ಜುನ ಕುಂಬಾರ, ಜನಪದ ಕಲಾವಿದ ಬಿ.ಎಂ.ಜಯಣ್ಣ, ಶ್ರೀಮತಿ ಎನ್‌.ಜ್ಯೋತಿ, ಎಂ.ಎಸ್‌.ಗಿರಿಜಾ, ರಾಘವೇಂದ್ರ, ಚಂದ್ರಪ್ಪ, ಡಾ.ರಾಜಶೇಖರ್‌, ಶಿವಕುಮಾರ್‌ ಮಾತನಾಡಿದರು.

ಇದೇ ವೇಳೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರ.ದ.ಕಾ.ಪ್ರಾಚಾರ್ಯ ಡಾ.ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಬಿ.ಸೋಮಶೇಖರ, ಎಸ್‌.ಆರ್‌.ನಿತಿನ್‌, ಎಚ್‌.ಬುಡ್ಯಪ್ಪ, ಕೆ.ಬಿ.ಯತೀಶ್‌, ಎನ್‌.ಜೆ.ಚಂದ್ರಪ್ಪ, ಎನ್‌.ಜೆ.ಸುರೇಶ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ