ಕನ್ನಡಪ್ರಭ ವಾರ್ತೆ, ಯಳಂದೂರು
ನರೇಗಾ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಮುಖ್ಯವಾಗಿದೆ. ನರೇಗಾ ಯೋಜನೆಯಿಂದ ಜನರು ತಮ್ಮ ಗ್ರಾಮದಲ್ಲಿ ಉದ್ಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಯರಗಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ತಿಳಿಸಿದರು.ಅವರು ತಾಲೂಕಿನ ಯರಗಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ 2024- 25 ನೇ ಸಾಲಿನ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಹಾಗೂ ಜಮಾಬಂದಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಗ್ರಾಮದ ಕೂಲಿ ಕಾರ್ಮಿಕರು ಕೂಲಿಗೋಸ್ಕರ ವಲಸೆ ಹೋಗಬಾರದು ಎಂದು 2005ರಲ್ಲಿ ನರೇಗಾ ಯೋಜನೆಯನ್ನು ಜಾರಿಗೆ ತಂದಿದೆ .ಇದನ್ನು ಗ್ರಾಮದ ಕೂಲಿ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಇದರಿಂದ ಗ್ರಾಮಗಳು ಕೂಡ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ತಿಳಿಸಿದರು.ಯರಗಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 96 ಕಾಮಗಾರಿಗಳು ನಡೆದಿದ್ದು ಅದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 83 ,ತೋಟಗಾರಿಕೆ ಇಲಾಖೆ ವತಿಯಿಂದ 11 ,ಅರಣ್ಯ ಇಲಾಖೆ ವತಿಯಿಂದ ಎರಡು ಕಾಮಗಾರಿಗಳು ನಡೆದಿದೆ. ಗ್ರಾಮ ಪಂಚಾಯಿತಿ ಸೇರಿದಂತೆ ಕೂಲಿ ಮತ್ತು ಸಾಮಗ್ರಿ ಮೊತ್ತ ಒಟ್ಟು 51,21,000 ರುಪಾಯಿಗಳಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ತಿಳಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇಕಡ 25 ಅನುದಾನವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ 43 ಮಂದಿಗೆ ಒಟ್ಟು 1.3 ಲಕ್ಷ ರುಪಾಯಿಯನ್ನು ಶವಸಂಸ್ಕಾರಕ್ಕೆ ನೀಡಲಾಗಿದೆ 13 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಾಗೂ ಶೇಕಡ ಐದು ಅನುದಾನದಲ್ಲಿ ವಿಶೇಷಚೇತನರಿಗೆ ಪ್ರೋತ್ಸಾಹ ಧನ ಶೇಕಡ 2 ಎರಡು ಕ್ರೀಡಾ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಶಾಂತಮ್ಮ ನೋಡಲ್ ಅಧಿಕಾರಿ ಹಿಂದುಳಿದ ವರ್ಗಗಳ ಇಲಾಖೆಯ ಕುಮಾರ್ ನರೇಗಾ ಲೆಕ್ಕಾಧಿಕಾರಿ ಪ್ರಸನ್ನ ಕುಮಾರ್ ಸದಸ್ಯರಾದ ಮಹೇಶ್ ,ಸಿದ್ದರಾಜು, ಸವಿತಾ, ಶೀಲಾ, ಸಿದ್ದರಾಜು, ಡಿಸಿ ಬಾಬು, ಭಾಗ್ಯಮ್ಮ, ಮಲ್ಲಿಕಾರ್ಜುನ ಸ್ವಾಮಿ, ಶಿವಕುಮಾರ್, ನಾಗರಾಜು, ಮಹದೇವಮ್ಮ ಹಾಗೂ ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದು.