ಕಡಿಮೆ ಖರ್ಚಿನ ಹೋಮಿಯೋಪತಿ ಚಿಕಿತ್ಸೆ ಪಡೆಯಿರಿ

KannadaprabhaNewsNetwork | Published : Feb 18, 2025 12:30 AM

ಸಾರಾಂಶ

ಹೋಮಿಯೋಪತಿ ವೈದ್ಯ ಪದ್ಧತಿಯು ಪ್ರಾರಂಭಗೊಂಡು ಸುಮಾರು 265 ವರ್ಷಗಳು ಕಳೆದಿವೆ. ಇಂದು ಆಧುನಿಕ ವೈದ್ಯ ಪದ್ಧತಿಗಳಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿಗೆ ಪ್ರಮುಖ ಸ್ಥಾನವಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಆರತಿ ಸುಂದರೇಶ ಹೇಳಿದ್ದಾರೆ.

- ಉಚಿತ ಆರೋಗ್ಯ ಶಿಬಿರದ 50 ವಾರದ ಸಂಭ್ರಮಾಚರಣೆಯಲ್ಲಿ ಡಾ.ಆರತಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಹೋಮಿಯೋಪತಿ ವೈದ್ಯ ಪದ್ಧತಿಯು ಪ್ರಾರಂಭಗೊಂಡು ಸುಮಾರು 265 ವರ್ಷಗಳು ಕಳೆದಿವೆ. ಇಂದು ಆಧುನಿಕ ವೈದ್ಯ ಪದ್ಧತಿಗಳಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿಗೆ ಪ್ರಮುಖ ಸ್ಥಾನವಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಆರತಿ ಸುಂದರೇಶ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಭಾಂಗಣದಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘ ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿ ತಿಂಗಳು ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ 50 ವಾರದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.

ಹೋಮಿಯೋಪತಿ ವೈದ್ಯ ಪದ್ಧತಿಯು ಸಂಪೂರ್ಣ ಅಡ್ಡಪರಿಣಾಮಗಳಿಲ್ಲದ, ಕಡಿಮೆ ವೆಚ್ಚದ ವೈದ್ಯ ಪದ್ಧತಿ. ಈ ಪದ್ಧತಿಯಲ್ಲಿ ಕಾಯಿಲೆಗಳು ಸಂಪೂರ್ಣವಾಗಿ ಗುಣಪಡುತ್ತವೆ. ಆದ್ದರಿಂದ ದಯವಿಟ್ಟು ಬಡವರು ಹೆಚ್ಚಿನ ಪ್ರಮಾಣದಲ್ಲಿ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕರುಣಾ ಟ್ರಸ್ಟ್‌ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ತಮ್ಮ ಅನಾರೋಗ್ಯಗಳು ಅಲೋಪತಿಯಿಂದ ಗುಣವಾಗದಿದ್ದಾಗ ಹೋಮಿಯೋಪತಿಯಿಂದಾಗಿ ಗುಣಪಡಿಸಿಕೊಂಡಿರುವುದನ್ನು ಹಂಚಿಕೊಂಡರು.

ಉಚಿತವಾಗಿ ನಡೆಯುವ ಆರೋಗ್ಯ ತಪಾಸಣಾ ಶಿಬಿರಕ್ಕೆ ಕಾರಣೀಭೂತರಾದ ಡಾ.ಮಾವಿಶೆಟ್ಟರ್, ಡಾ. ಕೆ.ಆರ್. ಶರತ್‌ರಾಜ್, ಡಾ. ಸಿ.ಎನ್. ಕೋಟಿಹಾಳ್, ಡಾ. ಎ.ಎನ್. ಸುಂದರೇಶ್, ಡಾ.ಆರತಿ ಸುಂದರೇಶ್, ಡಾ. ಜಿ.ಎಸ್. ಗಿರೀಶ್, ಡಾ. ಎಸ್.ರಂಗರಾಜನ್. ಶ್ರೀಧರ್ ಮತ್ತು ನಾರಾಯಣ್ ಭಟ್‌ ಅವರ ಸೇವಾ ಕಾರ್ಯಕ್ಕೆ ಡಾ.ಹಾನಿಮನ್ ಆರೋಗ್ಯ ಸೇವಾ ಪ್ರಶಸ್ತಿ ನೀಡುವುದರ ಮೂಲಕ ಕೃತಜ್ಞತೆ ಸಲ್ಲಿಸಿದರು.

ಡಾ. ಎಚ್.ಎನ್. ಮಲ್ಲಿಕಾರ್ಜುನ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಡಾ. ಸಿ.ಎನ್. ಕೋಟಿಹಾಳ್, ಟ್ರಸ್ಟಿನ ನಿರ್ದೇಶಕಿ ಮಂಜುಳಾ ಬಸವಲಿಂಗಪ್ಪ, ನಿರ್ದೆಶಕರಾದ ಪ್ರೊ. ಎಂ.ಬಸವರಾಜ್, ಡಾ. ಎಚ್.ವಿ. ವಾಮದೇವಪ್ಪ, ಸಿ.ಜಿ.ದಿನೇಶ್, ಎಚ್.ಆರ್. ಉದಯ್ ಕುಮಾರ್, ಮಧುಸೂದನ್ ಇತರರು ಇದ್ದರು.

- - - -17ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿ ಹೋಮಿಯೋಪಥಿ ವೈದ್ಯಕೀಯ ಸಂಘ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ 50 ವಾರದ ಸಂಭ್ರಮಾಚರಣೆ ಆಚರಿಸಲಾಯಿತು.

Share this article