ಕುಷ್ಟಗಿ ಪಟ್ಟಣದ ತಾಲೂಕು ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಆಯುಷ್ಮಾನ್ ಭಾರತ ಯೋಜನೆಯ ಸದುಪಯೋಗ ಮತ್ತು ಎಚ್‌ಐವಿ-ಏಡ್ಸ್ ಹಾಗೂ ಟಿ.ಬಿ. ಹರಡುವ ಬಗ್ಗೆ ಹಾಗೂ ನಿಯಂತ್ರಣದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಕುಷ್ಟಗಿ: ಪಟ್ಟಣದ ತಾಲೂಕು ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಆಯುಷ್ಮಾನ್ ಭಾರತ ಯೋಜನೆಯ ಸದುಪಯೋಗ ಮತ್ತು ಎಚ್‌ಐವಿ-ಏಡ್ಸ್ ಹಾಗೂ ಟಿ.ಬಿ. ಹರಡುವ ಬಗ್ಗೆ ಹಾಗೂ ನಿಯಂತ್ರಣದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರಕ್ಕೆ ಆರೋಗ್ಯ ಮಿತ್ರ ಹುಚ್ಚೀರಪ್ಪ ಚಾಲನೆ ನೀಡಿ ಮಾತನಾಡಿದರು. ಆಯುಷ್ಮಾನ್ ಭಾರತ್ ಯೋಜನೆಯು ಹಿಂದುಳಿದವರ ಯೋಗಕ್ಷೇಮವನ್ನು ಬೆಂಬಲಿಸಲು ಭಾರತ ಸರ್ಕಾರವು ಪ್ರಾರಂಭಿಸಿದ ಆರೋಗ್ಯ ಉಪಕ್ರಮವಾಗಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ಆರೋಗ್ಯ ವಿಮಾ ರಕ್ಷಣೆಯಲ್ಲಿ 5 ಲಕ್ಷದ ವರೆಗೆ ಇರುತ್ತದೆ. ಪಿಎಂಜೆಎವೈ ನೋಂದಣಿ ಮಾನ್ಯತೆ ಪಡೆದ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಗದುರಹಿತ ಆರೈಕೆಯ ಭರವಸೆ ನೀಡುತ್ತದೆ. ಹೆಚ್ಚುವರಿಯಾಗಿ, ಪರಿಧಮನಿಯ ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಮೊಣಕಾಲು ಬದಲಿಗಳಂತಹ ದುಬಾರಿ ಕಾರ್ಯವಿಧಾನಗಳನ್ನು ಸಹ ಒಳಗೊಂಡಿದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯಾಗಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆಯಬೇಕು. ಮೊಬೈಲಿನಲ್ಲಿ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ನೊಂದಣಿಯನ್ನು ಮಾಡಿಸಬಹುದು ಎಂದರು.
ಆಪ್ತ ಸಮಾಲೋಚಕ ಚನ್ನಬಸಪ್ಪ ಹನುಮನಾಳ ಅವರು, ಎಚ್ಐವಿ ಹಾಗೂ ಟಿಬಿ ಹರಡುವಿಕೆ ಮತ್ತು ನಿಯಂತ್ರಣದ ಕ್ರಮಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.
ಗೃಹರಕ್ಷಕ ದಳದ ಸೀನಿಯರ್ ಪ್ಲಟೂನ್ ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿ, ಗೃಹರಕ್ಷಕರು ತಮ್ಮ ಕರ್ತವ್ಯದ ಜತೆಗೆ ನಿಮ್ಮ ಆರೋಗ್ಯದ ಕುರಿತು ಜಾಗೃತಿ ಹೊಂದಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ತಾಲೂಕು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಖಾಂತರ ಆಯುಷ್ಮಾನ್ ಭಾರತ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ನಾಗರಾಜ ಬಡಿಗೇರ, ಗೃಹರಕ್ಷಕ ದಳದ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.