ನಶಾ ಮುಕ್ತ ಭಾರತ ಅಭಿಯಾನ ಶೀರ್ಷಿಕೆಯಡಿ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿದ ಶಾಸಕ
ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳು ದೀರ್ಘಕಾಲೀನವಾಗಿದ್ದು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ನಶಾ ಮುಕ್ತ ಭಾರತ ನಿರ್ಮಾಣದಲ್ಲಿ ಯುವಕರು ಮತ್ತು ಎನ್.ಎಸ್.ಎಸ್ ಸ್ವಯಂಸೇವಕರ ಪಾತ್ರ ಮುಖ್ಯ. ಶಿಬಿರದಿಂದ ಉತ್ತಮ ನಾಯಕತ್ವ ಗುಣಗಳನ್ನು ಪಡೆದು ಸದೃಢ ದೇಶ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ದಿವಗಿಯ ಹಾಲಕ್ಕಿ ಸಭಾಭವನದಲ್ಲಿ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ನಶಾ ಮುಕ್ತ ಭಾರತ ಅಭಿಯಾನ ಶೀರ್ಷಿಕೆಯಡಿ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕ ಮತ್ತು ಪ್ರಾಚಾರ್ಯ ಸತೀಶ ಬಿ. ನಾಯ್ಕ ಮಾತನಾಡಿದರು. ದಿವಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ವಿಷ್ಣು ಗೌಡ, ಸದಸ್ಯರಾದ ರಾಮಚಂದ್ರ ಈಶ್ವರ ದೇಸಾಯಿ, ಮಂಗಲಾ ರಮೇಶ ಭಟ್, ಸಿಲ್ವಿನ್ ಎಂ.ರೊಡ್ರಿಗೀಸ್, ದೊಡ್ಮನೆ ಜಾನಕಿ ವೆಂಕಟರಮಣ ಶೆಟ್ಟಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ಜಿ. ಭಟ್, ವಕೀಲ ವಿ.ಆರ್. ಭಂಡಾರಿ, ಬೆಣ್ಣೆ ಪಿಯು ಕಾಲೇಜಿನ ಉಪನ್ಯಾಸಕ ಆರ್.ಎಚ್. ನಾಯ್ಕ, ಆನಂದ್ ವಾಯ್. ನಾಯ್ಕ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ರಾಘವೇಂದ್ರ ಮಡಿವಾಳ, ಎನ್ಎಸ್ಎಸ್ ಸ್ವಯಂಸೇವಕರ ಪ್ರತಿನಿಧಿಗಳಾದ ಬಂಗಾರೇಶ್ವರ ಬಸ್ತಿಕರ್ ಮತ್ತು ವಂದನಾ ಅಂಬಿಗ ವೇದಿಕೆಯಲ್ಲಿದ್ದರು.
ಎನ್ಎಸ್ಎಸ್ ಸಹ ಶಿಬಿರಾಧಿಕಾರಿ ರಾಮಕೃಷ್ಣ ಆಗೇರ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ವನಿತಾ ಆರ್. ಶೆಟ್ಟಿ ವಂದಿಸಿದರು. ಉಪನ್ಯಾಸಕಿ ರೇಣುಕಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.