ಮೊಬೈಲ್ ಸೋಶಿಯಲ್ ಮಿಡಿಯಾದಿಂದ ಮಕ್ಕಳು ಹೊರಬನ್ನಿ: ಎಸ್ ಪಿ. ಹನುಮಂತರಾಯ

KannadaprabhaNewsNetwork | Published : Nov 10, 2024 1:38 AM

ಸಾರಾಂಶ

ಇಂದಿನ ಮಕ್ಕಳು ಮೋಬೈಲ್‌ನಲ್ಲಿ ಮಗ್ನನಾಗಿದ್ದಾರೆ. ಮೊಬೈಲ್ ಸೋಶಿಯಲ್ ಮಿಡಿಯಾದಿಂದ ಹೊರಬನ್ನಿ ಎಂದು ಬೆಳಗಾವಿ ಲೋಕಾಯುಕ್ತ ಎಸ್ ಪಿ. ಹನಮಂತರಾಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಇಂದಿನ ಮಕ್ಕಳು ಮೋಬೈಲ್‌ನಲ್ಲಿ ಮಗ್ನನಾಗಿದ್ದಾರೆ. ಮೊಬೈಲ್ ಸೋಶಿಯಲ್ ಮಿಡಿಯಾದಿಂದ ಹೊರಬನ್ನಿ ಎಂದು ಬೆಳಗಾವಿ ಲೋಕಾಯುಕ್ತ ಎಸ್ ಪಿ. ಹನಮಂತರಾಯ ಹೇಳಿದರು.

ಶನಿವಾರ ಇಲ್ಲಿನ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗಾವಿ ಲೋಕಾಯುಕ್ತರ ಸಹಯೋಗದಲ್ಲಿ ಜಾಗೃತಿ ಅರಿವು ಸಪ್ತಾಹ, ಜಾಗೃತಿ ದಿನಾಚರಣೆ ಉದ್ದೇಶಿಸಿ ಮಾತನಾಡಿ, ಇಂದು ಆನ್‌ಲೈನ್ ಫ್ರಾಡ್‌ ಮತ್ತು ಸೈಬರ್ ಕ್ರೈಂ ದೊಡ್ಡ ಆತಂಕ ಮೂಡಿಸಿದೆ. ತಂತ್ರಜ್ಞಾನ ಬೆಳೆದಂತೆ ಸೈಬರ್‌ ಕ್ರೈಂ ಹೆಚ್ಚಾಗಿದೆ. ತಂತ್ರಜ್ಞಾನ ಒಳ್ಳೆಯದು, ಆದರೆ ಅದನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ. ನಮ್ಮ ದೇಶದಲ್ಲಿ ಪ್ರತಿಭಾವಂತರಿದ್ದಾರೆ. ಐಐಟಿಗಳಂಥ ಒಳ್ಳೆಯ ಸಂಸ್ಥೆಗಳಿವೆ, ವೇದಗಳಿವೆ. ಎಲ್ಲ ಭಾಷೆಗಳ ತಾಯಿ ಸಂಸ್ಕೃತ ಭಾಷೆ ಇದೆ. ಆದ್ದರಿಂದ ಐತಿಹಾಸಿವಾಗಿ ನಮ್ಮ ದೇಶ ಶ್ರೇಷ್ಠವಾಗಿದೆ. ನಮ್ಮಲ್ಲಿ ಎಲ್ಲ ಸಂಪನ್ಮೂಲಗಳಿವೆ. ಇಲ್ಲಿನ ಮಣ್ಣು ಫಲವತ್ತಾಗಿದೆ ಎಂದು ಹೇಳಿದರು.

ಇಂದು ನಾವು ವೈಯಕ್ತಿಕವಾಗಿ ಮೂಲಜ್ಞಾನ ಹೆಚ್ಚಿಸಿಕೊಂಡು, 4 ವರ್ಷದ ಅವಧಿ ಬಳಸಿಕೊಂಡು ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಿ. ನಮ್ಮ ದೇಶದ ಜನರು ಟ್ರಾಫಿಕ್ ನಿಮಯ ಪಾಲಿಸುವುದಿಲ್ಲ. ಆದರೆ, ದುಬೈಗೆ ಹೋದರೆ ಪಾಲಿಸುತ್ತಾರೆ. ಇಂದು ನಮ್ಮ ಮನೋಭಾವ, ಸ್ವಭಾವ ಬದಲಿಸಿಕೊಳ್ಳಬೇಕಾಗಿದೆ. ನಿಯಮ ಸರ್ಕಾರ ಏಕೆ ಹೇಳಬೇಕು, ನಾವೇ ಜವಾಬ್ದಾರಿಯುತವಾಗಿ ಪಾಲಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ ಮಾತನಾಡಿ, ನಿಮ್ಮ ಕಾರ್ಯ ಸರಿಯಾಗಿ ನಿರ್ವಹಿಸದಿದ್ದರೆ ಅದುವೇ ಭ್ರಷ್ಟಾಚಾರ. ವಿದ್ಯಾರ್ಥಿಗಳು ಸರಿಯಾಗಿ ಆಭ್ಯಸಿಸಿ, ಶಿಕ್ಷಕರು ಸರಿಯಾಗಿ ಪಾಠ ಮಾಡಿ ಎಂದ ಅವರು, ಇಲ್ಲಿ ಬಂದಿರುವ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು. ಅನ್ವಿ ಕಲಕೇರಿ, ರೂಪಾ ಮಾತನಾಡಿದರು. ಶೈಕ್ಷಣಿಕ ಸಂಯೋಜಕ ಕುಮಾರ ಚೌಗಲಾ, ಪರೀಕ್ಷಾ ಸಂಯೋಜಕ ಸುನೀಲ ಹೆಬ್ಬಾಳೆ, ವಿಭಾಗ ಮುಖ್ಯಸ್ಥ ಡಾ. ಸಂಜಯ ಅಂಕಲಿ, ಡಾ. ಜಗನ್ನಾಥ ಜಾಧವ, ಡಾ.ಸಂಜಯ ಹನಗಂಡಿ, ಸಂಗೀತಾ ವಾಟೆಗಾಂವಕರ, ಡಾ.ಮಹಾಂತಯ್ಯ ಮಠಪತಿ, ಸುನೀಲ ಶಿಂದೆ, ಪ್ರದೀಪ ಹೊದ್ಲೂರ ಹಾಗೂ ಸಿಬ್ಬಂದಿ ಇದ್ದರು.

ಜಾಗೃತಿ ಅರಿವು ಸಪ್ತಾಹ 2024 ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಜವಾಬ್ದಾರಿಯುತ ನಾಗರಿಕರ ಪಾತ್ರ ಕುರಿತು ನಿಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿನುತಾ ಮಹಾಂತೇಶ ಪಾಟೀಲ ಪ್ರಥಮ, ಸಂಧ್ಯಾ ಕಾರತಗೆ ದ್ವೀತಿಯ ಹಾಗೂ ಸಾಕ್ಷಿ ಅಂಗಡಿ ತೃತೀಯ ಸ್ಥಾನ, ವೇದಿಕಾ ಬಾಳಿಕಾಯಿ ಸಮಾಧಾನಕರ ಬಹುಮಾನ ಪಡೆದರು. ಸಾಕ್ಷಿ ಅಂಗಡಿ ಮತ್ತು ಸಾನಿಕಾ ಕಾಮೇರಿ ಪ್ರಾರ್ಥಿಸಿದರು. ಸಂಯೋಜಕ ಡಾ. ಸಚೀನ ಮೆಕ್ಕಳಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಬಿರಾಜ ಅತಿಥಿ ಪರಿಚಯಿಸಿದರು. ತೆಜಸ್ವಿನಿ ಜಮಖಂಡಿ, ಶ್ರೀರಕ್ಷಾ ತೆಲಸಿಂಗೆ ನಿರೂಪಿಸಿದರು. ಶಿವಾನಂದ ಬೆಂಡವಾಡೆ ವಂದಿಸಿದರು.

Share this article