ಮಕ್ಕಳನ್ನು ಅಪರಾಧ ಮನಸ್ಥಿತಿಯಿಂದ ಹೊರತನ್ನಿ

KannadaprabhaNewsNetwork |  
Published : Jul 29, 2024, 12:55 AM IST
೨೮ಕೆಎಲ್‌ಆರ್-೨ಶಿಕ್ಷಕ ಗೆಳೆಯರ ಬಳಗದಿಂದ ಕೋಲಾರ ನಗರದ ಕನ್ನಡ ಭವನದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗುರುಶ್ರೇಷ್ಟ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾಯಕ್ರಮದಲ್ಲಿ ಸಾಧಕರನ್ನು  ಡಿಸಿಪಿ ದೇವರಾಜ್ ಸನ್ಮಾನಿಸಿದರು. | Kannada Prabha

ಸಾರಾಂಶ

‘ಅರಳುವ ಮಗುವಿಗೆ ಭರವಸೆ ನಾವಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ಶಿಕ್ಷಕ ಗೆಳೆಯರ ಬಳಗ ಖಾಸಗಿ ಶಾಲೆಗಳ ಪೈಪೋಟಿಗೆ ಅನುಗುಣವಾಗಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಬಲವರ್ಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ

ಕನ್ನಡಪ್ರಭ ವಾರ್ತೆ ಕೋಲಾರಕೋವಿಡ್ ಸಂದರ್ಭದಲ್ಲಿ ಶಾಲೆಯಿಂದ ದೂರ ಉಳಿದ ಕೆಲವು ಮಕ್ಕಳು ಪೋಷಕರ ಕೆಲಸದ ಒತ್ತಡದಿಂದಾಗಿ ದಾರಿ ತಪ್ಪಿದ್ದಾರೆ, ಬಾಲಾಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಪ್ಪಿಸಲು ಅವರನ್ನು ಅಪರಾಧ ಮುಕ್ತ ಮನಸ್ಥಿತಿಯೊಂದಿಗೆ ಸರಿದಾರಿಗೆ ತರುವ ಕಾರ್ಯದಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ಹಾಕಬೇಕು ಎಂದು ಡಿಸಿಪಿ ದೇವರಾಜ್ ಸಲಹೆ ನೀಡಿದರು. ಶಿಕ್ಷಕ ಗೆಳೆಯರ ಬಳಗದಿಂದ ನಗರದ ಕನ್ನಡ ಭವನದಿಂದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗುರುಶ್ರೇಷ್ಠ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದಾರಿತಪ್ಪಿದ ಮಕ್ಕಳನ್ನು ದುಶ್ಚಟಗಳಿಂದ ದೂರಮಾಡಿ ಸರಿದಾರಿಗೆ ಕರೆತರಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು ಎಂದರು. ಗೆಳೆಯ ಬಳಗಕ್ಕೆ ಬೆಂಬಲ

ಗೆಳೆಯರ ಬಳಗಕ್ಕೆ ನಾನೂ ಬೆನ್ನಲುಬಾಗಿ ನಿಲ್ಲುತ್ತೇನೆ, ನಿಮ್ಮ ಪ್ರಾಮಾಣಿಕ ಸೇವೆಗೆ ಜನರೂ ಪ್ರೋತ್ಸಾಹ ನೀಡುತ್ತಿದ್ದಾರೆ, ಇನ್ನಷ್ಟು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಯತ್ನ ನಡೆಸೋಣ ಎಂದರು.ಸಮಾಜಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಅರಳುವ ಮಗುವಿಗೆ ಭರವಸೆ ನಾವಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ಶಿಕ್ಷಕ ಗೆಳೆಯರ ಬಳಗ ಖಾಸಗಿ ಶಾಲೆಗಳ ಪೈಪೋಟಿಗೆ ಅನುಗುಣವಾಗಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಬಲವರ್ಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿ ಅಭಿನಂದಿಸಿದರು.ದೇಶದ ಆಸ್ತಿ ಆಗಬೇಕು

ಬೆಂಗಳೂರು ವಿವಿ ಸೆನೆಟ್ ಸದಸ್ಯ ಸಹ್ಯಾದ್ರಿ ಉದಯಕುಮಾರ್ ಮಾತನಾಡಿ, ದಾನಿಗಳ ನೆರವು ದುರುಪಯೋಗವಾಗದೇ ನೇರ ಮಕ್ಕಳಿಗೆ ತಲುಪಿಸುವ ಬದ್ದತೆ ಮೆಚ್ಚುವಂತದ್ದು, ಸೌಲಭ್ಯ ಪಡೆದ ಮಕ್ಕಳು ದೇಶದ ಆಸ್ತಿಯಾಗಬೇಕು ಎಂದರು.ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮತ್ತು ಹಾಲಿ ಗೌರವಾಧ್ಯಕ್ಷ ರವಿಚಂದ್ರ, ವಿಎಂ ಲೋಟಸ್ ಸಿಟಿ ವೆಂಕಟಾಚಲಪತಿ ಗೌಡ, ಎಸ್ಸಿಎಸ್ಟಿ ಸಮನ್ವಯಸಮಿತಿ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ ಮಾತನಾಡಿದರು.

ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ದೇವರಾಜ್, ಮಂಜುನಾಥರೆಡ್ಡಿ, ನಾಗೇಶ್‌ಗೌಡ ಮತ್ತಿತರರನ್ನು ಸನ್ಮಾನಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ