ಕನ್ನಡಪ್ರಭ ವಾರ್ತೆ ಕಾರವಾರ
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರಾವಳಿ ಉತ್ಸವದ ಆಮಂತ್ರಣ ಪತ್ರಿಕೆ ಶಿಷ್ಠಾಚಾರದಂತೆ ಅಂತಿಮವಾಗಿದ್ದರೆ, ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡುವಂತೆ ತಿಳಿಸಿದ ಅವರು, ಸಮಯಾವಕಾಶ ಕಡಿಮೆ ಇರುವುದರಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ತಾನೇ ಖುದ್ದು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಗುವುದು ಎಂದರು.ಶಿಷ್ಠಾಚಾರದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೂ ಆಮಂತ್ರಣ ಪತ್ರಿಕೆ ನೀಡಲು ಕ್ರಮವಹಿಸುವಂತೆ ತಿಳಿಸಿದ ಅವರು, ಯಾವುದೇ ಗೊಂದಲಗಳಿಗೆ ಅವಕಾಶ ಕಲ್ಪಿಸದಂತೆ ಎಲ್ಲಾ ಸಮಿತಿಯ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಇವೆಂಟ್ ಮ್ಯಾನೇಜಮೆಂಟ್ ಅವರು ಕಾರ್ಯಕ್ರಮದ ಸಂಗೀತ ಪ್ರದರ್ಶನ ನೀಡಲು ಕಲಾವಿದರನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡಿದ್ದು, ಅದರಂತೆ ಡಿ.22ರಂದು ಶಂಕರ ಮಹಾದೇವನ್, ಡಿ.23ರಂದು ಮಿಕಾ ಸಿಂಗ್, ಡಿ.24 ರಂದು ಸೋನು ನಿಗಮ್, ಡಿ.25ರಂದು ರಫ್ತಾರ್, ಡಿ.27 ರಂದು ಮಹಮ್ಮದ್ ದಾನೀಶ್, ಡಿ.28ರಂದು ದಲೇರ್ ಮೆಹಂದಿ ತಂಡದವರು ಕಾರ್ಯಕ್ರಮ ನಡೆಸಿಕೊಡಲಿದ್ದು, ಡಿ.26ರ ಕಾರ್ಯಕ್ರಮದ ಕಲಾವಿದರು ಅಂತಿಮವಾಗಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಿವಿಧ ಸ್ಪರ್ಧೆಗಳು ಮತ್ತು ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಡಿ.22ರಂದು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವ ಗಣ್ಯರಿಗೆ ವೇದಿಕೆಗೆ ಸ್ವಾಗತಿಸಲು ಜಿಲ್ಲಾ ಮತ್ತು ರಾಜ್ಯ ಮಟ್ಟದ 15ರಿಂದ 20 ಕಲಾ ತಂಡಗಳಿoದ ಮೆರವಣಿಗೆ, ಮೀನುಗಾರರ ದೀಪ ಮೆರವಣಿಗೆ, ಡಿ.23ರಂದು ಛಾಯಾಗ್ರಹಣ ಮತ್ತು ರೀಲ್ಸ್ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಆಯ್ಕೆಯಾದ ಛಾಯಾಗ್ರಹಣ ಮತ್ತು ರೀಲ್ಸ್‌ಗಳನ್ನು ಕಾರ್ಯಕ್ರಮದ ಅಂತಿಮ ದಿನದವರೆಗೂ ಪ್ರದರ್ಶನ ಮಾಡಲಾಗುವುದು ಡಿ.24ರಂದು ರಂಗೋಲಿ ಮತ್ತು ಅಡುಗೆ ಸ್ಪರ್ಧೆ, 25ರಂದು ಮ್ಯಾರಥಾನ್ ಮತ್ತು ಕರಾವಳಿ ರನ್ ಸ್ಪರ್ಧೆಯು 3, 5 ಮತ್ತು 10 ಕಿಮೀ ವಿಭಾಗದಲ್ಲಿ ನಡೆಯಲಿದೆ. ಡಿ.26ರಂದು ಹಗ್ಗ ಜಗ್ಗಾಟ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಗೋಡೆಗಳ ಮೇಲೆ ಚಿತ್ರಕಲಾ ಸ್ಪರ್ಧೆ ಮತ್ತು ಡಿ.27ರಂದು ಶ್ವಾನ ಪ್ರದರ್ಶನ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.