ಕನ್ನಡಪ್ರಭ ವಾರ್ತೆ ಕಲಾದಗಿ
ಒಂದು ಕುರ್ಚಿಗೆ ನಾಲ್ಕು ಕಾಲುಗಳಿರುತ್ತವೆ. ಹಾಗೆಯೇ ಕಾಂಗ್ರೆಸ್ ಪಕ್ಷ ಕುರ್ಚಿ ಹಾಗೇ ಅದರಲ್ಲಿ ಒಂದು ಕಾಲು ಅಲ್ಪಸಂಖ್ಯಾತರು, ಉಳಿದ ಸಮಾಜ ಎಲ್ಲಾ ಕೂಡಿ ಮೂರು ಕಾಲು ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಹೇಳಿದರು.ಕಲಾದಗಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಾದಗಿ ಕಾಂಗ್ರೆಸ್‌ಗೆ ಗಂಡು ಮೆಟ್ಟಿದ ಸ್ಥಳವಾಗಿದೆ. ಜಿಪಂ ನಮಗೆ ಕೈ ಬಿಟ್ಟಿಲ್ಲ. 4500 ಸಾವಿರ ಲೀಡ್ ಶೇ.40 ಶೇರ್ ಅಲ್ಪಸಂಖ್ಯಾತರದೇ, ಎಲ್ಲಾ ಮುಂಚೂಣಿ ಘಟಕಗಳು ಸರಿಯಾಗಿ ಜವಾಬ್ದಾರಿ ನಿರ್ವಹಿಸಿದರೆ ಕಾಂಗ್ರೆಸ್ ಸೋಲಲು ಸಾಧ್ಯವಿಲ್ಲ. ಗ್ರಾಪಂಗೆ ಶಕ್ತಿ ಹೆಚ್ಚು, ಕಾಮಗಾರಿ ಠರಾವೂ ಮಾಡಿಕೊಂಡು ಬನ್ನಿ, ಜಿಪಂ ಸಿಇಒ ಅನುಮೋದನೆ ಕೊಡಿಸುವುದು ನನ್ನ ಕೆಲಸ. ಕಲಾದಗಿ ಡಿಗ್ರಿ ಕಾಲೇಜು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಲಾಗುತ್ತಿದೆ. ಕಾಂಗ್ರೆಸ್ ವಿವಿಧ ಘಟಕಗಳ ಜವಾಬ್ದಾರಿ ತಗೆದುಕೊಂಡವರು ಸರಿಯಾಗಿ ಕೆಲಸ ಮಾಡಿ. ಫೆಬ್ರವರಿ ತಿಂಗಳಲ್ಲಿ ಜಿಪಂ ತಾಪಂ ಚುನಾವಣೆ ಬರುವುದು ನಿಶ್ಚಿತ. ಸರಕಾರ ಅಧಿಸೂಚನೆ ಮತ್ತು ನ್ಯಾಯಾಲಯದ ತೀರ್ಪಿನ ಮೇಲೆ ಕ್ಷೇತ್ರ ಮೀಸಲಾತಿ ಅದರ ಪ್ರಕಾರ ಮಾಡಲು ಸಿದ್ಧ ಸ್ಥಿತಿಯಲ್ಲಿರೋಣ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿಸೌದಾಗರ್ ಮಾತನಾಡಿ, ಸಂಘಟನೆ ವಿಚಾರದಲ್ಲಿ ಸಮಯ ಕೊಡಬೇಕಾಗುತ್ತದೆ. ಭೂತಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಎಲ್ಲರನ್ನು ಸಂಪರ್ಕಿಸಿ ಪಕ್ಷದ ಕಾರ್ಯ ತಿಳಿಸಿ ಹೇಳಬೇಕು. ಕಾಂಗ್ರೆಸ್ ಹೇಳಿಕೊಳ್ಳುವುದು ಕಡಿಮೆ, ಕೆಲಸ ಮಾಡುವುದು ಹೆಚ್ಚು. ಇಂಟರನೆಟ್ ಯುಗದಲ್ಲಿ ಹೇಳಿಕೊಳ್ಳುವ ಕೆಲಸವೂ ನಿತ್ಯ ಆಗಲಿ ಎಂದರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಕಲಾದಗಿ ಬ್ಲಾಕ್ ಅಧ್ಯಕ್ಷ ಡಾ ಬಸವರಾಜ ಸಂಶಿ, ಮಾತನಾಡಿದರು.ಕಲಾದಗಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ.ತೇಲಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಉಪಾಧ್ಯಕ್ಷ ಕುತುಬುದ್ದೀನ ಬಡೇಖಾನ, ಉಪಾಧ್ಯಕ್ಷ ಗದ್ದನಕೇರಿ ಸಾಧಿಕ ಮಹಬೂಬಸಾಬ ಜಾಗಿರದಾರ, ಉಪಾಧ್ಯಕ್ಷ ಅಶೀಪ್ ಯಾಸಿನಸಾಬ ರೋಣ, ಕಾರ್ಯದರ್ಶಿ ಅಹ್ಮದಯ್ಯಬ ಖಲಾಸಿ, ಕಾರ್ಯದರ್ಶಿ ರಿಜ್ವಾನ್ ಮಕ್ತುಮಸಾಬ ಖಾದ್ರಿ, ಅಶ್ಫಕ್ ಬೀಳಗಿ, ಸಾಮಾಜಿಕ ಜಾಲತಾಣದ ಮಹ್ಮದ ಸಮೀವುಲ್ ಹಕ್ಕ ಕಲಂದರ್, ಸೈಯ್ಯದ ಪೀರಸಾಬ ಮಕಾನ್‍ದಾರ, ಶಕೀಲ ಜಮಾದಾರಗೆ ಸನ್ಮಾನಿಸಲಾಯಿತು.
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫೀಕ್ ಬೇಪಾರಿ, ಜಯಪ್ರಕಾಶ್, ಸಲೀಂ ಶೇಕ್, ಗ್ರಾಪಂ ಉಪಾಧ್ಯಕ್ಷ ಫಕೀರಪ್ಪ ಮಾದರ, ಮೋದಿನ ರೋಣ, ರಾಜು ಮನ್ನಿಕೇರಿ ಇತರರಿದ್ದರು.