ಪಾರದರ್ಶಕ, ಶಾಂತಿಯುತ ಮತದಾನಕ್ಕೆ ಸಿದ್ಧರಾಗಿ: ಡಿಸಿ

KannadaprabhaNewsNetwork |  
Published : Feb 01, 2024, 02:02 AM IST
ಫೌಜಿಯಾ ತರನ್ನುಮ್‌ | Kannada Prabha

ಸಾರಾಂಶ

ಅಭ್ಯರ್ಥಿಗಳು ಚುನಾವಣೆ ಸಂಬಂಧ ಮಾಡುವ ಪ್ರತಿ ವೆಚ್ಚಗಳನ್ನು ಸಮರ್ಪಕ ಕರಾರುವಕ್ಕಾಗಿ ನಿಯಾಮಳಿ ರೀತಿ ಪರಿಶೀಲಿಸಿದ ಮೇಲೆ ಅಧಿಕಾರಿಗಳು ವರದಿ ಮಾಡಬೇಕೆಂದು ಚುನಾವಣೆ ವೆಚ್ಚದ ತಂಡಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್‌ ಸೂಚನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಕ್ತ ನ್ಯಾಯಸಮ್ಮತ, ಪಾರದರ್ಶಕ ಶಾಂತಿಯುತ ಮತದಾನವನ್ನು ನಡೆಸಲು ಹಣಬಲ, ತೊಳ್ಳಬಲದ ದುರಪಯೋಗವನ್ನು ತಡೆಗಟ್ಟಲು ನಿಗದಿಪಡಿಸಿದ ಮಿತಿಯಲ್ಲಿಯೇ ಚುನಾವಣಾ ಖರ್ಚು ವೆಚ್ಚ ಮಾಡಲು ನಿಜವಾದ ಲೆಕ್ಕಪತ್ರವನ್ನು ನಿರ್ವಹಿಸಲು ಎಲ್ಲರೂ ಪ್ರಮಾಣಿಕತೆ ಮೂಡಿಸಬೇಕೆಂದು ಬಿ. ಫೌಜಿಯಾ ತರನ್ನುಮ್ ಹೇಳಿದರು.

ಪಂಡಿತ ರಂಗಮಂದಿರದಲ್ಲಿ ಭಾರತದ ಚುನಾವಣೆ ಆಯೋಗ ಜಿಲ್ಲಾ ಚುನಾವಣೆ ಅಧಿಕಾರಿಗಳ ಕಲಬುರಗಿ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ವಿವಿಧ ಚುನಾವಣಾ ತಂಡಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಭ್ಯರ್ಥಿಗಳು ಚುನಾವಣೆ ಸಂಬಂಧ ಮಾಡುವ ಪ್ರತಿ ವೆಚ್ಚಗಳನ್ನು ಸಮರ್ಪಕ ಕರಾರುವಕ್ಕಾಗಿ ನಿಯಾಮಳಿ ರೀತಿ ಪರಿಶೀಲಿಸಿದ ಮೇಲೆ ಅಧಿಕಾರಿಗಳು ವರದಿ ಮಾಡಬೇಕೆಂದು ಚುನಾವಣೆ ವೆಚ್ಚದ ತಂಡಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು ಮಾದರಿ ನೀತಿ ಸಂಹಿತೆ ತಂಡಗಳನ್ನು ಈಗಾಗಲೇ ರಚಿಸಲಾಗಿದೆ ತಾವೆಲ್ಲ ಅಧಿಕಾರಿಗಳು ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದರು.

ಇನ್ನೂ ಒಂದೂವರೆ ತಿಂಗಳಲ್ಲಿ ಲೋಕಸಭಾ ಚುನಾವಣೆಯ ನೀತಿ ಫೋಷಣೆಯಾಗಬಹುದು ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಭ್ಯರ್ಥಿಗಳು ಕೈಗೊಳ್ಳುವ ಚುನಾವಣೆಗೆ ಸಂಬಂಧಪಟ್ಟ ವೆಚ್ಚಗಳ ನಿರಂತರವಾಗಿ ನಿಗಾ ಇಡಬೇಕೆಂದರು. ಬಟ್ಟಿಂಗ್ ಬ್ಯಾನೇರ್, ಬೋರ್ಡ್‍ಗಳು ತೆಗದು ಹಾಕಬೇಕು ಚುನಾವಣೆಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಗಳು ಅಧಿಕಾರಿಗಳು ಪಡೆದುಕೊಳ್ಳಬೇಕು. ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಕೆಲಸಗಳನ್ನು ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ನ್ಯಾಷನಲ್ ಲೇವಲ್ ಮಾಸ್ಟರ್ ಟ್ರೇನರ್ ಡಾ. ಶಶಿಧರ ರೆಡ್ಡಿ ಮಾತನಾಡಿ, ಚುನಾವಣೆಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಪಿ.ಪಿ.ಟಿ. ಮೂಲಕ ಅಧಿಕಾರಿಗಳಿಗೆ ತಿಳಿಸಿದರು. ಯಾವುದೇ ಅಭ್ಯರ್ಥಿಗಳು ಲೋಕಸಭಾ ಚುನಾವಣೆ ಖರ್ಚುಮಾಡಬೇಕಾದರೆ 95 ಲಕ್ಷ ಮಿತಿಯೊಳಗೆ ತಮ್ಮ ಖರ್ಚುವೆಚ್ಚಗಳನ್ನು ಮಾಡಬೇಕು. ಚುನಾವಣಾ ಪ್ರಚಾರದ ಖರ್ಚುವೆಚ್ಚಗಳ ನಿಗಾ, ಭಾರತ ಚುನಾವಣಾ ಆಯೋಗ ಚುನಾವಣೆ ವೆಚ್ಚ ವಿವರಗಳ ಸಲ್ಲಿಸುವ ವಿಧಾನ ನೀತಿ ಸಂಹಿತಿ ತಂಡಗಳಿಗೆ ಪ್ರತಿಯೊಂದು ಮಾಹಿತಿ ನೀಡಿದರು.

ಜಿಪಂ ಸಿಇಓ ಭಂವರ್ ಸಿಂಗ್ ಮೀನಾ ಮಾತನಾಡಿ,ಎಲ್ಲಾ ಅಧಿಕಾರಿಗಳು ತಮಗೆ ನೀಡಿದ ಕೆಲಸಕಾರ್ಯಗಳನ್ನು ಸಮಪರ್ಕವಾಗಿ ನಿರ್ವಹಿಸಬೇಕೆಂದರು. ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿಧಿ ಎನ್ ಮಾತನಾಡಿದರು. ಮಹಾನಗರ ಪಾಲಿಕೆ ಅಧಿಕಾರಿ ಪಾಟೀಲ ಭುವನೇಶ್ವರ ದೇವಿದಾಸ ಮಾತನಾಡಿದರು.ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಅಬಕಾರಿ ಇಲಾಖೆ ಜಿಲ್ಲಾಅಧಿಕಾರಿಗಳು ಆಫ್ರೀನ್, ಜಿಲ್ಲಾಧಿಕಾರಿ ಚುನಾವಣಾ ಶಾಖೆಯ ತಹಶೀಲ್ದಾರ ಪಂಪಯ್ಯ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌