ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಡಲು ತಯಾರಾಗಿ : ಶಿವಾನಂದಸ್ವಾಮಿ

KannadaprabhaNewsNetwork |  
Published : Jul 09, 2025, 12:18 AM IST
ಚಿಕ್ಕಮಗಳೂರಿನಲ್ಲಿ ನಡೆದ ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾದ ಚಿಕ್ಕಮಗಳೂರು - ಹಾಸನ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಡಲು ದುಡಿಯುವ ವರ್ಗ ಜುಲೈ 9ರ ಚಳುವಳಿಗೆ ಸನ್ನದ್ಧರಾಗಬೇಕು ಎಂದು ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಕರೆ ನೀಡಿದರು.

- ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾ, ಚಿಕ್ಕಮಗಳೂರು-ಹಾಸನ ಘಟಕದ 45ನೇ ಸರ್ವ ಸದಸ್ಯರ ಸಭೆ

ಕನ್ನಡಪ್ರಭವಾರ್ತೆ, ಚಿಕ್ಕಮಗಳೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಹೋರಾಡಲು ದುಡಿಯುವ ವರ್ಗ ಜುಲೈ 9ರ ಚಳುವಳಿಗೆ ಸನ್ನದ್ಧರಾಗಬೇಕು ಎಂದು ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಕರೆ ನೀಡಿದರು.

ನಗರದಲ್ಲಿ ನಡೆದ ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾದ ಚಿಕ್ಕಮಗಳೂರು - ಹಾಸನ ಘಟಕದ 45ನೇ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಕೈಗಾರಿಕಾ ವಿವಾದ ಕಾಯ್ದೆ ಸೇರಿದಂತೆ 61ಕ್ಕೂ ಹೆಚ್ಚು ಕಾರ್ಮಿಕ ಮತ್ತು ಕೈಗಾರಿಕೆ ಸಂಘದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕು ಮತ್ತು ಬಾದ್ಯತೆಗಳನ್ನು ಕಸಿದು ಕೊಳ್ಳುತ್ತಿದೆ. ರಾಜ್ಯ ಸರ್ಕಾರ ಈ ಕಾಯ್ದೆಯಡಿ ನಿಯಮ ಮಾಡಬೇಕಾದ ಸ್ಥಿತಿಗೆ ಬಂದಿದೆ ಎಂದರು.

ರಾಜ್ಯ ಕೇಂದ್ರದ ಕೈಗೊಂಬೆಯಂತೆ ಎಂಟು ಗಂಟೆ ಕೆಲಸದ ಅವಧಿ ಹೆಚ್ಚಿಸುವುದು, ರಾತ್ರಿ ಪಾಳಯಲ್ಲಿ ಮಹಿಳೆಯರು ದುಡಿ ಯಲು ಅವಕಾಶ, ಕೆಲವು ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರಿಗೆ ಭದ್ರತೆ ಇಲ್ಲದಂತೆ ಮಾಡಲು ಹೊರಟಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಭೆ ಉದ್ಘಾಟಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಗುಮ್ಮನ ಖಾನ್ ಎಸ್ಟೇಟ್ ನೌಕರ ರಘು ಅವರು, ನಮ್ಮೆಲ್ಲರ ಒಗ್ಗಟ್ಟು ಮತ್ತು ಸಂಘದ ಮುಖಂಡರ ಒಳ್ಳೆಯ ಕೆಲಸಗಳಿಂದಾಗಿ ನಾವಿಂದು ಒಪ್ಪಂದ ವೇತನ ತಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲೂ ನಮ್ಮೆಲ್ಲರ ಒಗ್ಗಟ್ಟು ಮುಂದುವರಿಯಬೇಕು ಎಂದು ಹೇಳಿದರು.ಪ್ಲಾಂಟೇಷನ್ ಎಂಪ್ಲಾಯಿಸ್ ಡೆವಲಪ್‌ಮೆಂಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಂ.ಎನ್. ರಂಗನಾಥನ್ ಮಾತನಾಡಿ, ಸಂಘಕ್ಕೆ ಸದಸ್ಯರು ಭದ್ರ ಬುನಾದಿಯಂತೆ. ಗಟ್ಟಿಯಾಗಿ ನಿಂತಷ್ಟು ಸಂಘ ಬಲವಾಗಲಿದೆ. ಪ್ಲಾಂಟೇಷನ್ ನೌಕರರ ಸಂಘ ದಕ್ಷಿಣ ಭಾರತದ ಸಂಘಟನೆ ಶ್ರೇಯಸ್ಸಿಗಾಗಿ ದುಡಿಯಲಿದೆ ಎಂದು ಆಶಿಸಿದರು.ನೂತನ ಪದಾಧಿಕಾರಿಗಳು:

ಮೇರ್ತಿ ಸುಬ್ಬನಗುಡಿಗೆ ಎಸ್ಟೇಟ್‌ನ ಟಿ.ಪೊನ್ನಪ್ಪ (ಅಧ್ಯಕ್ಷ), ಕಾಡುಮನೆ ಎಸ್ಟೇಟ್‌ನ ರಾಜು ದೊರೈ, ದೇವಾನ್ ಪ್ಲಾಂಟೇಷನ್‌ನ ಸತೀಶ್, ಕೆಳಗೂರು ಎಸ್ಟೇಟ್‌ನ ಮಹಾಂತೇಶ್ (ಉಪಾಧ್ಯಕ್ಷರು), ಗುಮ್ಮನಖಾನ್ ಎಸ್ಟೇಟ್‌ನ ರವಿಚಂದ್ರ (ಕಾರ್ಯದರ್ಶಿ), ಚಂದ್ರಹಾಸ್, ಕರಡಿಖಾನ್ ಎಸ್ಟೇಟ್‌ನ ಶೈಲೇಶ್, ಸಂಸೆ ಎಸ್ಟೇಟ್‌ನ ರಘುರಾಮ್ (ಸಹ ಕಾರ್ಯದರ್ಶಿಗಳು).ಇದೇ ವೇಳೆ ಸಂಘದ ಚಟುವಟಿಕೆ ಆಗಬೇಕಾಗಿರುವ ವೇತನ ಒಪ್ಪಂದ, ಪ್ಲಾಂಟೇಷನ್ ಕೈಗಾರಿಕೆಗಳಿಂದ ದುಡಿಯುವ ಜನತೆಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. 7 ಕೆಸಿಕೆಎಂ 3ಚಿಕ್ಕಮಗಳೂರಿನಲ್ಲಿ ನಡೆದ ದಿ ಎಸ್ಟೇಟ್ ಸ್ಟಾಫ್ಸ್ ಯೂನಿಯನ್ ಸೌತ್ ಇಂಡಿಯಾದ ಚಿಕ್ಕಮಗಳೂರು - ಹಾಸನ ಘಟಕದ ಸರ್ವ ಸದಸ್ಯರ ಸಭೆಯಲ್ಲಿ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ