ಬಯಲು ಶೌಚ ತೊಲಗಿಸಿ ಮನೆಗೊಂದು ಶೌಚಾಲಯ ನಿರ್ಮಿಸಿ: ಎಸ್.ಡಿ.ಬೆನ್ನೂರ

KannadaprabhaNewsNetwork | Published : Nov 24, 2024 1:46 AM

ಸಾರಾಂಶ

ಮಲಮೂತ್ರಗಳಲ್ಲಿರುವ ರೋಗಾಣುಗಳು ಆಕಸ್ಮಿಕವಾಗಿ ಕುಡಿಯುವ ನೀರು, ಆಹಾರ ಪದಾರ್ಥಗಳು, ಮಲಬರಿತ ನೀರಿನಿಂದ ಬೆಳೆಯುವ ತರಕಾರಿಗಳಿಗೆ ಸಾಗಿ ಬಂದು ಅತಿಸಾರ ಬೇದಿ, ಕಾಲರ, ಆಮಶಂಕೆ, ರಕ್ತ ಬೇದಿ, ಪೋಲಿಯೋ, ವಿಷಮ ಶೀತ ಜ್ವರ, ಜಂತು ಹುಳುವಿನ ಕಾಯಿಲೆ, ಚರ್ಮ ರೋಗ, ಕಾಮಣಿ ಮುಂತಾದ ರೋಗ ರುಜಿನಗಳನ್ನು ಉಂಟುಮಾಡುತ್ತವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಉತ್ತಮ ಆರೋಗ್ಯಕ್ಕಾಗಿ ಬಯಲು ಶೌಚ ತೊಲಗಿಸಿ ಮನೆಗೊಂದು ಶೌಚಾಲಯ ನಿರ್ಮಿಸಿ ಬಳಸುವ ಜೊತೆಗೆ ಸ್ವಚ್ಛತೆ ಕಾಪಾಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಕರೆ ನೀಡಿದರು.

ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಮ್ಮ ಶೌಚಾಲಯ, ನಮ್ಮ ಸ್ವಾಭಿಮಾನ ಅಭಿಯಾನದಡಿ ನಡೆದ ವಿಶ್ವ ಶೌಚಾಲಯ ದಿನಾಚರಣೆಯಲ್ಲಿ ಮಾತನಾಡಿ, ಶೌಚಾಲಯ ಬಳಸದೆ ಬಯಲಿನಲ್ಲಿ ಮಲವಿಸರ್ಜನೆಯಿಂದ ಹಲವು ರೋಗಗಳು ಹರಡುತ್ತವೆ ಎಂದು ಎಚ್ಚರಿಸಿದರು.

ಮಲಮೂತ್ರಗಳಲ್ಲಿರುವ ರೋಗಾಣುಗಳು ಆಕಸ್ಮಿಕವಾಗಿ ಕುಡಿಯುವ ನೀರು, ಆಹಾರ ಪದಾರ್ಥಗಳು, ಮಲಬರಿತ ನೀರಿನಿಂದ ಬೆಳೆಯುವ ತರಕಾರಿಗಳಿಗೆ ಸಾಗಿ ಬಂದು ಅತಿಸಾರ ಬೇದಿ, ಕಾಲರ, ಆಮಶಂಕೆ, ರಕ್ತ ಬೇದಿ, ಪೋಲಿಯೋ, ವಿಷಮ ಶೀತ ಜ್ವರ, ಜಂತು ಹುಳುವಿನ ಕಾಯಿಲೆ, ಚರ್ಮ ರೋಗ, ಕಾಮಣಿ ಮುಂತಾದ ರೋಗ ರುಜಿನಗಳನ್ನು ಉಂಟುಮಾಡುತ್ತವೆ ಎಂದರು.

ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ನಿಲ್ಲಿಸಿ ಮನೆಗೊಂದು ಶೌಚಾಲಯ ನಿರ್ಮಿಸಿ ಬಳಸಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಈ ವೇಳೆ ಮುಖ್ಯ ಶಿಕ್ಷಕ ಮದ್ದಾನಪ್ಪ, ಶಿಕ್ಷಕರಾದ ಸುರೇಶ್, ಸಂದ್ಯಾವಳಿ, ಭಾಸ್ಕರ, ರೇಣುಕಾದೇವಿ, ಗೋವಿಂದಯ್ಯ, ಶ್ರೀಕಾಂತ್, ಮಂಜುಳಾ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ರೂಪ ಸೇರಿದಂತೆ ಇತರರು ಇದ್ದರು.

ನ.26 ರಂದು ಎಚ್ಚರಿಕಾ ಪ್ರತಿಭಟನಾ ರ್‍ಯಾಲಿ: ದೇವಿ

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ, ಹಲವು ಬೇಡಕೆ ಈಡೇರಿಸಲು ಆಗ್ರಹಕ್ಕೆ ಒತ್ತಾಯಿಸಿ ನ.26 ರಂದು ಎಚ್ಚರಿಕಾ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ, ಕಾರ್ಮಿಕ, ಮಹಿಳಾ, ದಲಿತ, ಕೂಲಿಕಾರರ ವತಿಯಿಂದ ಸಂಯುಕ್ತ ಹೋರಾಟ- ಕರ್ನಾಟಕ ಸಮನ್ವಯ ಸಮಿತಿಯಿಂದ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಜತೆ ಕೈಗೂಡಿಸಿ ಸಾರ್ವಜನಿಕವಾಗಿ ನೀಡಲಾದ ಹಕ್ಕುಗಳಾದ ನಮ್ಮ ಭೂಮಿ ನಮ್ಮ ಹಕ್ಕು, ಬಗರ್ ಹುಕುಂ ಸಾಗುವಳಿ ಸೇರಿದಂತೆ ಹಲವು ವಿಷಯವಾಗಿ ಬಡವ, ರೈತ, ಕೂಲಿ ಕಾರ್ಮಿಕ, ದಲಿತ ಹಾಗೂ ಮಹಿಳೆಯರಿಗೆ ಅನ್ಯಾಯವೆಸಗಲು ಮುಂದಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಬಗರ್ ಹುಕುಂ, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ಜಮೀನು ಸಕ್ರಮಗೊಳಿಸುವುದು, ನರೇಗಾ ಯೋಜನೆಯಡಿ 200 ದಿನಗಳ ಕೆಲಸ ಹಾಗೂ 600 ರು.ಗಳ ಕೂಲಿ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಗಡುವು ನೀಡಿ ಎಚ್ಚರಿಸಲಾಗುವುದು ಎಂದರು.

ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಯುಕ್ತ ಕಿಸಾನ್ ಮೋರ್ಚಾ, ಜೆಸಿಟಿಯು ಹಾಗೂ ಇತರೆ ದುಡಿಯುವ ವರ್ಗದ ಸಂಘಟನೆಗಳು ದೇಶದ 500 ಜಿಲ್ಲೆಗಳಲ್ಲಿ ಎಚ್ಚರಿಕಾ ರ್‍ಯಾಲಿ ನಡೆಸಲು ಕರೆ ನೀಡಿದ್ದು, ಜಿಲ್ಲೆಯಲ್ಲಿಯೂ ಸಹ ನ.26 ರಂದು ಎಚ್ಚರಿಕಾ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಎ.ಎಲ್.ಕೆಂಪೂಗೌಡ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಭರತ್ ರಾಜ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲ, ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲು, ಜನಶಕ್ತಿಯ ಸಿದ್ದರಾಜು ಇದ್ದರು.

Share this article