ಕನ್ನಡಪ್ರಭ ವಾರ್ತೆ ಕಮತಗಿ
ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಶ್ರೀಗಂಧ, ಹೆಬ್ಬೇವು, ಮಹಾಗನಿ ಸೇರಿದಂತೆ ಬಲು ಬೇಡಿಕೆಯ ಹಾಗೂ ಆರ್ಥಿಕವಾಗಿ ಲಾಭ ತಂದುಕೊಡುವ ಗಿಡಗಳನ್ನು ಪಡೆದು ಬೆಳೆಯಬಹುದು. ಸಾಂಪ್ರದಾಯಿಕ ಕೃಷಿಯ ಹೊರತಾಗಿ ಅರಣ್ಯ ಕೃಷಿಯಿಂದಲೂ ರೈತರು ಆದಾಯ ಗಳಿಸಲು ಈ ಯೋಜನೆ ಸಹಕಾರಿಯಾಗಿದೆ. ರೈತರು ಮರಗಳಿಂದ ಸಿಗುವ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು,ಇತ್ಯಾದಿ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಜಮೀನಿನ ಬದುವಿನಲ್ಲಿ ಹಚ್ಚಿ ಬೆಳೆಸಿದ ಗಿಡಮರಗಳನ್ನು ಸಂರಕ್ಷಣೆ ಮಾಡುವುದು ಬಹುದೊಡ್ಡ ಜವಾಬ್ದಾರಿಯಾಗಿದ್ದು, ಬೇಸಿಗೆ ಸಮಯದಲ್ಲಿ ಗಿಡಮರಗಳ ನೆರಳು ಪ್ರತಿಯೊಬ್ಬ ಮನುಷ್ಯ ಹಾಗೂ ಜಾನುವಾರುಗಳ ಆಶ್ರಯ ಪಡೆಯಲು ಬಹಳಷ್ಟು ಅನಕೂಲವಾಗಿದೆ.ಗಿಡಮರಗಳಿಂದ ಊದುರಿದ ಎಲೆಗಳು ಜಮೀನಿನಲ್ಲೇ ಬಿಟ್ಟರೆ ಅವು ಗೊಬ್ಬರವಾಗಿ ಬೆಳೆಗೆ ಬಹಳಷ್ಟು ಸಹಕಾರಿಯಾಗಲಿದ್ದು, ರೈತರು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿ ಗಿಡಿಮರಗಳ, ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳುವುದು ಅತ್ಯವಶ್ಯವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿ ಎಚ್ ಚವಾಣ್, ಸಿಬ್ಬಂದಿ ಮಂಜುನಾಥ ಚಳಗೇರಿ, ಸಂತೋಷ ಮರೋಳ ಹಾಗೂ ಪ್ರಗತಿಪರ ರೈತರಾದ ಎಂ.ಪಿ. ನಾಡಗೌಡ, ಹುನಗುಂದ, ಇಳಕಲ್ ತಾಲೂಕಿನ ರೈತರು ಭಾಗವಹಿಸಿದ್ದರು.