ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್ ಹೆಚ್ಚು ಮಾರಕ. ಇದು ಲೈಂಗಿಕ ಸಂಪರ್ಕದಿಂದ ಬರುವ ಎಚ್‌ಪಿವಿ ವೈರಸ್‌ನಿಂದ ಕ್ಯಾನ್ಸರ್ ಉಂಟಾಗುತ್ತದೆ. ಇದಕ್ಕೆ 20 ವರ್ಷದ ಸತತ ಸಂಶೋಧನೆಯಿಂದ ಲಸಿಕೆ ಕಂಡು ಹಿಡಿಯಲಾಗಿದೆ. ನಮ್ಮ ದೇಶದಲ್ಲಿ ಒಂದು ಡೋಸ್‌ಗೆ 15 ಸಾವಿರ ರು. ದರವಿತ್ತು.
ಶ್ರೀರಂಗಪಟ್ಟಣ:
ಮಹಿಳೆಯರನ್ನು ಭಾದಿಸುತ್ತಿರುವ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ ಪಡೆಯುವ ಮೂಲಕ ಸುರಕ್ಷಿತವಾಗಿರಬೇಕು ಎಂದು ಮಿಮ್ಸ್‌ನ ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್ ತಿಳಿಸಿದರು.
ತಾಲೂಕಿನ ನೇರಲೆಕೆರೆಯ ವಿಶ್ವಮೈತ್ರಿ ಬೌದ್ಧ ವಿಹಾರದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಿಮ್ಸ್, ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಬಿಳಿ ಸೆರಗು, ಬಂಜೆತನ, ಅನಿಯಮಿತ ಋತುಸ್ರಾವ, ಗರ್ಭಕಂಠ ಕ್ಯಾನ್ಸರ್ ವಿಶ್ವದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗಳಾಗಿವೆ ಎಂದರು.
ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠ ಕ್ಯಾನ್ಸರ್ ಹೆಚ್ಚು ಮಾರಕ. ಇದು ಲೈಂಗಿಕ ಸಂಪರ್ಕದಿಂದ ಬರುವ ಎಚ್‌ಪಿವಿ ವೈರಸ್‌ನಿಂದ ಕ್ಯಾನ್ಸರ್ ಉಂಟಾಗುತ್ತದೆ. ಇದಕ್ಕೆ 20 ವರ್ಷದ ಸತತ ಸಂಶೋಧನೆಯಿಂದ ಲಸಿಕೆ ಕಂಡು ಹಿಡಿಯಲಾಗಿದೆ. ನಮ್ಮ ದೇಶದಲ್ಲಿ ಒಂದು ಡೋಸ್‌ಗೆ 15 ಸಾವಿರ ರು ದರವಿತ್ತು. ಇಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಹೆಣ್ಣುಮಕ್ಕಳಿಗೂ ಉಚಿತವಾಗಿ ಈ ಲಸಿಕೆ ಹಾಕುವ ಕಾರ್ಯಕ್ರಮ ತಂದಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 9-14 ವರ್ಷದ ಹುಡುಗಿಯರಿಗೆ 2 ಡೋಸ್, ಹಾಗೂ 15 ರಿಂದ 45 ವರ್ಷದ ಮಹಿಳೆಯರಿಗೆ 3 ಡೋಸ್ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಯಾರೇ ಆಗಲಿ ಸಮಸ್ಯೆ ಉಂಟಾದಲ್ಲಿ ನಿರ್ಲಕ್ಷ್ಯ ಮಾಡದೇ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಆರಂಭಿಕ ಹಂತದಲ್ಲಿ ಪರೀಕ್ಷೆ ಮೂಲಕ ಪತ್ತೆ ಹಚ್ಚಿ ಕ್ಯಾನ್ಸರನ್ನು ಗುಣಪಡಿಸಬಹುದು. ಉಲ್ಬಣಿಸಿದ ಬಳಿಕ ಚಿಕಿತ್ಸೆ ನೀಡಿ ರೋಗಿಯನ್ನು ಉಳಿಸುವುದು ಕಷ್ಟಕರ. ಆದ್ದರಿಂದ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ಶಿಬಿರದಲ್ಲಿ ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ, ವಕೀಲ ಜೆ.ರಾಮಯ್ಯ ಮಾತನಾಡಿದರು. ಶಿಬಿರದಲ್ಲಿ ಡಾ.ರೋಹಿತ್, ಡಾ.ಶಿಲ್ಪ, ಡಾ.ಪ್ರದೀಪ್, ಡಾ.ವೈಭವ್, ಡಾ.ಸುನಿಲ್ ಅವರುಗಳು ಆರೋಗ್ಯ ಸಂಬಂದಿ ಜಾಗೃತಿ ಮೂಡಿಸಿ ರೋಗಿಗಳ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಿದರು. ಈ ವೇಳೆ ವಕೀಲ ಮಹೇಶ್, ಮೋಹನ್ ಪ್ರಬುದ್ಧಿ, ಸುಭಾಷ್‌ಚಂದ್ರಬೋಸ್ ಮತ್ತಿತರರಿದ್ದರು.ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇ- ಕೆವೈಸಿ ಅವಶ್ಯಕತೆ ಇಲ್ಲ: ಸಿ.ಇ.ನಂಜಮಣಿ
ಮಳವಳ್ಳಿ: ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಣಿಯಾಗಿರುವ ಫಲಾನುಭವಿಗಳು ಯಾವುದೇ ತರಹದ ಇ-ಕೆವೈಸಿ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಮಣಿ ತಿಳಿಸಿದ್ದಾರೆ.ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಫಲಾನುಭವಿಗಳು ನೋಂದಣಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ತಿಂಗಳ ಗೃಹಲಕ್ಷ್ಮಿ ಹಣ ಪಡೆಯಲು ಇ-ಕೆವೈಸಿ ಮಾಡಿಸಬೇಕೆಂಬ ಸುಳ್ಳು ವದಂತಿಗಳು ಹರಿದಾಡುತ್ತಿರುವುದರಿಂದ ಈ ಕುರಿತು ಹಲವಾರು ಫಲಾನುಭವಿಗಳು ಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯುತ್ತಿರುವ ಯಾವ ಫಲಾನುಭವಿಗಳು ಇ-ಕೆವೈಸಿ ಮಾಡಿಸುವ ಅವಶ್ಯಕತೆ ಇಲ್ಲ ಹಾಗೂ ಕೆವೈಸಿ ಮಾಡಿಸುವ ಸಂಬಂಧ ಸೈಬರ್/ಕಂಪ್ಯೂಟರ್ ಸೆಂಟರ್‌ಗಳಿಗೆ ಹೋಗಿ ತಮ್ಮ ಹಣ ಕಳೆದುಕೊಳ್ಳಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.