ಜೇವರ್ಗಿ: ತಾಲೂಕಿನ ಮದಬಾಳ ಕೆ. ಗ್ರಾಮದ ಬಾಲಕಿಯೋರ್ವಳು ಮಳೆಗಾಳಿ ರಭಸಕ್ಕೆ ಆಯತಪ್ಪಿ ಮೇಲ್ಚಾವಣಿಯಿಂದ ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ 8ರಂದು ಮಳೆ ಹಾಗೂ ಗಾಳಿ ರಭಸ ಹೆಚ್ಚಾಗಿದ್ದರಿಂದ ಮನೆಯ ಮೇಲ್ಚಾವಣಿ ಮೇಲಿದ್ದ 8ವರ್ಷದ ಬಾಲಕಿ ಪ್ರಿಯದರ್ಶಿನಿ ತಂದೆ ನಿಂಗಪ್ಪ ಗಾಳಿಯ ರಭಸಕ್ಕೆ ಆಯತಪ್ಪಿ ಮೇಲ್ಛಾವಣಿಯಿಂದ ಕುಸಿದು ಬಿದ್ದಿದಾಳೆ. ಪ್ರಜ್ಞಾಹೀನ ಸ್ಥಿತಿಯಲಿದ್ದ ಬಾಲಕಿಯನ್ನು ಕಲಬುರಗಿಯ ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳೆದ 11ರಂದು ನಸುಕಿನ ಜಾವ ಮೃತಪಟ್ಟಿದ್ದಾಳೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.