ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಮೆರವಣಿಗೆಗೆ ನಿಡಗುಂದಿ ಸಿಪಿಐ ಶರಣಗೌಡ ಗೌಡರ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಯ ಬಾಲಕಿಯರು ಎರಡನೇ ಬಾರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಸಾಧನೆಯೇ ಎಂದು ಶ್ಲಾಘಿಸಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ದಳವಾಯಿ, ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಕ್ರೀಡಾಪಟುಗಳನ್ನು ಸನ್ಮಾನಿಸಿದರು. ಜಿ.ಸಿ.ಮುತ್ತಲದಿನ್ನಿ, ಮಹೇಶ ಗಾಳಪ್ಪಗೋಳ ಮಾತನಾಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಾಲಕಿಯರು ಗೆದ್ದ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯ ಟ್ರೋಫಿಯನ್ನು ಮುಖ್ಯ ಶಿಕ್ಷಕ ಹನುಮಂತಪ್ಪ ಇಲಾಳ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಿ.ಸಿ.ಮುತ್ತಲದಿನ್ನಿ, ಟಿ.ಎಸ್.ಬಿರಾದಾರ, ಬುಡ್ಡೇಸಾಬ್ ಬಾಗವಾನ, ಬೈಲಪ್ಪ ಬಾಗೇವಾಡಿ, ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಗ್ಯಾನಪ್ಪ ಚಲವಾದಿ, ಬಿ.ಜಿ.ಬನ್ನೂರ, ರಮೇಶ ಆಲಮಟ್ಟಿ, ಮುರಳಿ ಬಡಿಗೇರ, ಶಿವು ಗದಿಗೆಪ್ಪಗೌಡರ, ಆನಂದ ರೇವಡಿ, ಸೀತಾರಾಮ ರಾಠೋಡ, ಎಸ್‌ಡಿಎಂಸಿ ಅಧ್ಯಕ್ಷ ಮುನ್ನಾ ಬೆಣ್ಣಿ ಇತರರು ಇದ್ದರು.
ತಂಡದಲ್ಲಿ ನಾಯಕಿ ಲಕ್ಷ್ಮೀ ವಡಗೇರಿ, ಅಪೇಕ್ಷಾ ತೋಟದ, ರೂಪಾ ಅಕ್ಕೋಜಿ, ಸಿಂಚನಾ ಚಿನಿವಾಲರ, ದಾನೇಶ್ವರಿ ಬಾಗೇವಾಡಿ, ಅಯ್ಯಮ್ಮ ಹಾವರಗಿ, ಪ್ರೀಯಾ ಇಂಗಳೇಶ್ವರ, ಯಲಗೂರು ಶಾಲೆಯ ವಿದ್ಯಾರ್ಥಿನಿಯರಾದ ಯಮುನಾ ಪಾತ್ರದ, ರಂಜಿತಾ ಪಾದನಕಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಎನ್.ಬಿ.ದಾಸರ, ಟೀಂ ಮ್ಯಾನೇಜರ್ ನೀಲಮ್ಮ ತಳವಾರ ಇದ್ದು, ಇದೀಗ ಈ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.