ಕನ್ನಡಪ್ರಭ ವಾರ್ತೆ ಮೈಸೂರುಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ ಡಿಜಿಟಲ್ ಮ್ಯಾಪಿಂಗ್ ಟೆಕ್ ನಿಕ್ಸ್ ಇನ್ ಜಿಯೋಗ್ರಾಫಿಕಲ್ ಇನ್ ಫಾರ್ ಮೇಷನ್ ಸಿಸ್ಟಂ ಎಂಬ ವಿಷಯ ಕುರಿತು ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿದ್ದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ಶೆಲ್ವರಾಜು ಮಾತನಾಡಿ, ಆಧುನಿಕ ಜಗತ್ತಿಗೆ ಜಿಐಎಸ್ ಬಹಳ ಮುಖ್ಯವಾಗಿದೆ. ಇದನ್ನು ವಿದ್ಯಾರ್ಥಿಗಳು ಕಲಿಯುವುದು ತುಂಬಾ ಕಷ್ಟ ಎಂದು ಭಾವಿಸಿದ್ದಾರೆ. ಆದರೆ ಇದನ್ನು ಕಲಿಯುವುದು ಅತ್ಯಂತ ಸರಳ ವಿಧಾನವಾಗಿದೆ. ನೀವುಗಳು ದಿನನಿತ್ಯ ಮೊಬೈಲ್ ಅಪ್ಲಿಕೇಷನ್ ಗಳನ್ನು ಬಳಸುವ ರೀತಿಯಲ್ಲಿ ಇದನ್ನು ಅಭ್ಯಾಸ ಮಾಡಿ ಕಲಿಯಬಹುದಾಗಿದೆ ಎಂದರು.ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿಯ ಡಿವಿಜನ್ ಆಫ್ ಜಿಯೋ ಇನ್‌ಫಾರ್ಮೆಟಿಕ್ಸ್ ಸ್ಕೂಲ್ ಆಫ್ ಲೈಫ್‌ಸೈನ್ಸ್ಸಂಶೋಧಕ ಡಾ.ಜಿ. ಭುವನೇಶ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಜಿಐಎಸ್ ಹಾಗೂ ದೂರಸಂವೇದಿ ವಿಷಯಗಳಿಗಿರುವ ಬೇಡಿಕೆಯನ್ನು ವಿವರಿಸಿದರು. ಕಾಲೇಜಿನ ಇಒ ಡಾ.ಎಸ್.ಆರ್. ರಮೇಶ್ ಮಾತನಾಡಿ, ಭೂಮಿ ಎಲ್ಲರಿಗೂ ಅತ್ಯಾವಶ್ಯಕವಾಗಿದೆ. ಭೂಗೋಳಶಾಸ್ತ್ರವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆ ವಿಷಯವಾಗಿದೆ. ಆಧುನಿಕ ಜಗತ್ತಿನಲ್ಲಿ ಜಿಐಎಸ್ ಮತ್ತು ದೂರಸಂವೇದಿ ಭೂಗೋಳಶಾಸ್ತ್ರಕ್ಕೆ ಹೊಸ ಸ್ಪರ್ಶವನ್ನು ನೀಡಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಆರ್. ಜಯಕುಮಾರಿ ಮಾತನಾಡಿ, ಭೂಗೋಳಶಾಸ್ತ್ರದ ವಿದ್ಯಾರ್ಥಿಗಳು ಭೂಮಿಯನ್ನೇಆಳುವವರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯವಿಷಯಕ್ಕೆ ಸೀಮಿತವಾಗದೆ ಈ ರೀತಿಯ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಲ್ಲಿಕೌಶಲ್ಯವನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಕೆ. ಸೋಮಶೇಖರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಜಿ. ದೊಡ್ಡರಸಯ್ಯ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಸಿ.ಎಸ್. ಸಿದ್ದರಾಜು, ಸಂಧ್ಯಾರಾಣಿ ಇದ್ದರು. ಅಂಕಿತಾ ಪ್ರಾರ್ಥಿಸಿ, ನಿರೂಪಿಸಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಇದ್ದರು.