ಕನ್ನಡ ಸಂಸ್ಕೃತಿ ಇಲಾಖೆಗೆ 4000 ಕೋಟಿ ನೀಡಿ

KannadaprabhaNewsNetwork |  
Published : Apr 25, 2026, 01:15 AM IST
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಹರಳಕಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಗುರುವಾರ  ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ವತಿಯಿಂದ  ಜನಪದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಲಾವಿದರ ಸಂಘದ ರಾಜ್ಯಧ್ಯಕ ವಿರೇಶ್ ಪ್ರಸಾದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಸಂಸ್ಕೃತಿ ಇಲಾಖೆಗೆ ಪ್ರತಿ ವರ್ಷ 300 ಕೋಟಿ ಸರ್ಕಾರ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಬಜೆಟ್ ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ 4000 ಕೋಟಿ ಕೊಡಬೇಕು.

ಗುಬ್ಬಿ: ಕಲಾವಿದರು ಒಗ್ಗಟಿನ ಬಲವನ್ನು ಪ್ರದರ್ಶಿದರೆ ಮಾತ್ರ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿರೇಶ್ ಪ್ರಸಾದ್ ತಿಳಿಸಿದರು. ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಹರಳಕಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ವತಿಯಿಂದ ಜನಪದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಂಸ್ಕೃತಿ ಇಲಾಖೆಗೆ ಪ್ರತಿ ವರ್ಷ 300 ಕೋಟಿ ಸರ್ಕಾರ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಬಜೆಟ್ ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ 4000 ಕೋಟಿ ಕೊಡಬೇಕು. ಇಲ್ಲದಿದ್ದಾರೆ ಮುಂದಿನ ದಿನಗಳಲ್ಲಿ ಕಲಾವುದರೊಂದಿಗೆ ಬೃಹತ್ ಹೋರಾಟ ಮಾಡುತ್ತೇವೆ. ಕಲಾವಿದರ ಸಂಘ ಸಂಸ್ಥೆಗಳಿಗೆ ಧನ ಸಹಾಯ ಕಡಿಮೆಯಾಗಿದೆ. ಸರ್ಕಾರ ಕ್ರಿಯಾ ಯೋಜನೆಯಲ್ಲಿ ಒಂದು ಜಿಲ್ಲೆಗೆ 100 ಕೋಟಿಯನ್ನು ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಿದರು. ವಾದ್ಯ ಪರಿಕರಗಳು ವೇಷಭೂಷಣ ಖರೀದಿಗೆ ಅನುದಾನವನ್ನು ಹೆಚ್ಚಳ ಮಾಡಬೇಕು. ಕಲಾ ತಂಡಗಳ ಪ್ರಾಯೋಜಿಕ ಹಣ ಬಾಕಿ ಇದೆ. ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಕಲಾವಿದರ ಮಾಸಶಾನವನ್ನು ಮುಖ್ಯಮಂತ್ರಿಗಳು 3000 ಪ್ರತಿ ತಿಂಗಳು ಕೊಡುತ್ತೇವೆ ಅಂಥ ಹೇಳಿದ್ದಾರಷ್ಟೇ. ಇದುವರೆಗೂ ಕೊಟ್ಟಿಲ್ಲ ಕಲಾವಿದರ ಭರವಸೆ ಹುಸಿಯಾಗಿದೆ. ಕಲಾವಿದರುವ ಸಂಘಟಿತರಾಗಬೇಕು. ಹೋರಾಟದಲ್ಲಿ ಭಾಗವಹಿಸಿದರೆ ಮಾತ್ರ ಸರ್ಕಾರದಿಂದ ಬರುವ ಪ್ರೋತ್ಸಾಹ ಧನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜನಪದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೊಬನ ಪದ, ಭಜನಾ ತಂಡ ನಾಸಿಕ್ ಡೋಲ್ ಹಾಗೂ ಕೋಳಾಟ ತಂಡಗಳಲ್ಲಿ ವಿಜೇತರಾದ ಕಲಾವಿದರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತ್ತು. ಇದೇ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ,ಸಣ್ಣಿರಪ್ಪ ಚಂದ್ರಯ್ಯ , ಶಿವಣ್ಣ , ಅಜ್ಜಯ್ಯ ,ಹರೀಅಸದ ,ಶೇಖರಪ್ಪ , ರಮೇಶ್ ,ಯೋಗೀಶ್ ಹಾಗೂ ಕಲಾವಿದರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಾಂಸ್ಕೃತಿಕ ಲೋಕದ ಧೃವತಾರೆ ಡಾ.ರಾಜ್‌
ಒಕ್ಕಲಿಗ, ವೀರಶೈವ ಲಿಂಗಾಯತರಿಗೆ ಅನ್ಯಾಯವಾದರೆ ಸಹಿಸಲ್ಲ