ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಿ

KannadaprabhaNewsNetwork |  
Published : Jun 02, 2026, 03:15 AM IST
1ಐಎನ್‌ಡಿ1,ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರು ಹಕ್ಕೊತ್ತಾಯ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರಕ್ಕೆ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ನಗರದ ಬಸವೇಶ್ವರ ವೃತದಲ್ಲಿ ಹಕ್ಕೊತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರಕ್ಕೆ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ನಗರದ ಬಸವೇಶ್ವರ ವೃತದಲ್ಲಿ ಹಕ್ಕೊತ್ತಾಯಿಸಿ ಪ್ರತಿಭಟನೆ ನಡೆಸಿದರು.

ಇಂಡಿ ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪುರಸಭೆಯ ಮಾಜಿ ಸದಸ್ಯರು, ಯಶವಂತರಾಯಗೌಡ ಪಾಟೀಲ ಅಭಿಮಾನಿ ಬಳಗದ ಸದಸ್ಯರು ಸೇರಿದಂತೆ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಹಕ್ಕೊತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ನಿರ್ಮಲಾ ತಳಕೇರಿ, ಮಾಜಿ ಅಧ್ಯಕ್ಷ ಜಾವೀದ ಮೋಮಿನ, ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ, ಮುಖಂಡ ಹುಚ್ಚಪ್ಪ ತಳವಾರ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಶಾಂತ ಕಾಳೆ, ಬಳ್ಳೊಳ್ಳಿ ಬ್ಲಾಕ್‌ ಅಧ್ಯಕ್ಷ ಬಿ.ಸಿ.ಸಾಹುಕಾರ, ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಮುಖಂಡ ಮುತ್ತಪ್ಪ ಪೊತೆ, ಸ್ವಾತಂತ್ರ್ಯ ನಂತರ ವಿಧಾನಸಭೆ ರಚನೆಯಾದಾಗಿನಿಂದ ಕ್ಷೇತ್ರಕ್ಕೆ ನಿರಂತರ ಅನ್ಯಾಯ ಮಾಡುತ್ತಾ ಬರಲಾಗಿದೆ. ಇದರಿಂದ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ ಶಿಕ್ಷಣ, ನೀರಾವರಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಅಭಿವೃದ್ದಿ ಕಂಡಿದೆ. ಕಾಂಗ್ರೆಸ್‌ ಹೈಕಮಾಂಡ್ ಕ್ಷೇತ್ರದ ಜನರ ಅಭಿಪ್ರಾಯ ಆಧಾರಿಸಿಯಾದರೂ ಶಾಸಕ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಮಲ್ಲನಗೌಡ ಪಾಟೀಲ, ಜಾವೀದ ಮೋಮಿನ, ಅಜೀತ ಧನಶೆಟ್ಟಿ, ನೀಲಕಂಠಗೌಡ ಪಾಟೀಲ, ಸಿದ್ದರಾಮಗೌಡ ಬಿರಾದಾರ, ಎಂ.ಆರ್.ಪಾಟೀಲ ಗೊಳಸಾರ, ಶಿವಾನಂದ ರಾವೂರ, ಚಂದಣ್ಣ ಆಲಮೇಲ, ಹುಚ್ಚಪ್ಪ ತಳವಾರ, ಪ್ರಶಾಂತ ಕಾಳೆ, ಅವಿನಾಶ ಬಗಲಿ, ನಿರ್ಮಲಾ ತಳಕೇರಿ, ಭೀಮಾಶಂಕರ ಮೂರಮನ, ಮಲ್ಲು ಮಡ್ಡಿಮನಿ, ಸಣ್ಣಪ್ಪ ತಳವಾರ, ಶೇಖರ ನಾಯಕ, ರೈಸ್ ಅಸ್ಟೇಕರ, ಬಿ.ಸಿ.ಸಾಹುಕಾರ, ನಾಗೇಂದ್ರ ಮೇತ್ರಿ,ಆಸೀಪ್ ಕಾರಬಾರಿ, ಗಣೇಶ ರಾಠೋಡ, ಸುನೀಲ ರಾಠೋಡ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ರಾಜಶೇಖರ ನಾಟಿಕಾರ, ಭೀಮಣ್ಣ ಕವಲಗಿ, ಚಂದು ಸೊನ್ನ, ಶ್ರೀಕಾಂತ ಕುಡಿಗನೂರ, ಲಕ್ಕಪ್ಪ ಪೂಜಾರಿ, ಜೈನುದ್ದಿನ ಬಾಗವಾನ, ಮುಸ್ತಾಕ ಇಂಡಿಕರ, ಸದಾಶಿವ ಪ್ಯಾಟಿ, ಮುತ್ತಪ್ಪ ಪೊತೆ, ಬಾಬು ಗುಡಮಿ,ಉಮೇಶ ದೇಗಿನಾಳ, ನೀಲಕಂಠ ರೂಗಿ, ಸುಭಾಷ ಬಾಬರ, ಪರಶುರಾಮ ಹತ್ತರಕಿ, ಮಹೇಶ ಹೊನ್ನಬಿಂದಗಿ,ಯಲ್ಲಪ್ಪ ಬಂಡೆನವರ, ಜಹಾಂಗೀರ ಸೌದಾಗರ, ರಾಜು ಕುಲಕರ್ಣಿ, ಮಿಲೀಂದ ಹೊಸಮನಿ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಧಕ್ಕೆ ನಿಂತ ಶಾಪಿಂಗ್‌ ಕಾಂಪ್ಲೆಕ್ಸ್ ಕಾಮಗಾರಿ
ಹಿಂದುತ್ವ ಉಳಿಸಲು ಹೆಚ್ಚಿಗೆ ಮಕ್ಕಳ ಹೊಂದಿ