ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ ಶ್ರೀರಾಮಸೇನೆ

KannadaprabhaNewsNetwork |  
Published : Jun 02, 2026, 03:15 AM IST
(ಫೋಟೊಬಿಕೆಟಿ3,(1) ಶ್ರೀರಾಮಸೇನೆ ಸಂಘಟನೆಯಿಂದ  ನೀಡಿದ ಕೇಸರಿ ಶಾಲುಗಳನ್ನು  ಧರಿಸಿ ಕಾಲೇಜ್ ಗಳಿಗೆ ವಿದ್ಯಾರ್ಥಿಗಳು ತೆರಳುತ್ತಿರೋದು ಕಂಡು ಬಂದಿತು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಶ್ರೀರಾಮಸೇನೆ ಸಂಘಟನೆಯಿಂದ ಬಾಗಲಕೋಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ಮೂಲಕ ಹಿಜಾಬ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ಸಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶ್ರೀರಾಮಸೇನೆ ಸಂಘಟನೆಯಿಂದ ಬಾಗಲಕೋಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ಮೂಲಕ ಹಿಜಾಬ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶ ಸಾರಿದ್ದಾರೆ.

ನವನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಪ್ರಥಮ ದರ್ಜೆ ಕಾಲೇಜ್ ಎದುರು ಸೋಮವಾರ ಕೇಸರಿ ಶಾಲು ವಿತರಿಸಿದ ಶ್ರೀರಾಮಸೇನೆಯ ಕಾರ್ಯಕರ್ತರು, ಹಿಜಾಬ್ ವಿರುದ್ಧ ಕೇಸರಿ ಶಾಲು ವಿತರಣೆ ಕಾರ್ಯಕ್ರಮ ಇದಾಗಿದೆ ಎಂದಿದ್ದಾರೆ.

ಶ್ರೀರಾಮಸೇನೆ ಸಂಘಟನೆಯಿಂದ ನೀಡಿದ ಕೇಸರಿ ಶಾಲುಗಳನ್ನು ಧರಿಸಿ ಕಾಲೇಜ್ ಗಳಿಗೆ ವಿದ್ಯಾರ್ಥಿಗಳು ತೆರಳುತ್ತಿರೋದು ಕಂಡು ಬಂದಿತು.

ಬಾಗಲಕೋಟೆ ನಗರದಾದ್ಯಂತ ಶ್ರೀರಾಮಸೇನೆ ಕಾರ್ಯಕರ್ತರು ಸಂಚರಿಸಿ ಕೇಸರಿ ಶಾಲು ವಿತರಣೆ ಮಾಡುತ್ತಿರುವುದರಿಂದ ಕಾಲೇಜ್ ಎದುರು ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ.

ಕಾಲೇಜು ಮುಂಭಾಗ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ವಿತರಿಸಿದ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸೋಕೆ ಹೇಗೆ ಅವಕಾಶ ಕೊಟ್ಟಿದ್ದಾರೆ. ಅದೇ ರೀತಿ ನಮಗೂ ಕೇಸರಿ ಶಾಲು ಧರಿಸೋಕೆ ಅವಕಾಶ ಕೊಡಬೇಕು. ಅವರಿಗೆ ಹೇಗೆ ಅವರ ಧರ್ಮ ಮುಖ್ಯವೋ. ನಮಗೂ ಕೂಡ ನಮ್ಮ ಹಿಂದೂ ಧರ್ಮ ಮುಖ್ಯ. ನಾವು ಕೇಸರಿ ಶಾಲು ಧರಿಸಿಕೊಂಡೆ ಕಾಲೇಜುಗಳಿಗೆ ಹೋಗುತ್ತೇವೆ. ಕಾಲೇಜು ಸಿಬ್ಬಂದಿ ಕೇಳಿದರೆ ಅವರಿಗೆ ಏಕೆ ಅವಕಾಶ ಕೊಟ್ಟಿದ್ದೀರಿ. ನಮಗೂ ಕೊಡಿ ಎಂದು ಪ್ರಶ್ನೆ ಮಾಡುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದರು.

ಈ ರೀತಿ ತಾರತಮ್ಯ ಮಾಡೋದು ಸರಿಯಲ್ಲ ಎಂದು ವಿದ್ಯಾರ್ಥಿನಿಯರ ಬೇಸರ ವ್ಯಕ್ತಪಡಿಸಿದರು. ಕಾಲೇಜ್ ಸ್ಥಳಗಳಲ್ಲಿ ಬಾಗಲಕೋಟೆ ನವನಗರ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಧಕ್ಕೆ ನಿಂತ ಶಾಪಿಂಗ್‌ ಕಾಂಪ್ಲೆಕ್ಸ್ ಕಾಮಗಾರಿ
ಹಿಂದುತ್ವ ಉಳಿಸಲು ಹೆಚ್ಚಿಗೆ ಮಕ್ಕಳ ಹೊಂದಿ