ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಒಂದು ಅವಕಾಶ ಕೊಡಿ: ಸ್ಟಾರ್ ಚಂದ್ರು

KannadaprabhaNewsNetwork |  
Published : Apr 23, 2024, 12:46 AM IST
22ಕೆಎಂಎನ್ ಡಿ13 | Kannada Prabha

ಸಾರಾಂಶ

ನಾನು ಹೊರಗಿನ ಅಭ್ಯರ್ಥಿಯಲ್ಲ. ನಾನು ರೈತನ ಮಗ. ರೈತ ಕುಟುಂಬದಿಂದ ಬಂದಿರುವ ನನಗೆ ಜಿಲ್ಲೆಯ ರೈತರ ಸಮಸ್ಯೆಗಳ ಅರಿವಿದೆ. ನನ್ನ ಸ್ವಂತ ಪರಿಶ್ರಮದಿಂದ ಉದ್ಯಮಿಯಾಗಿದ್ದೇನೆ. ಹಣ ಮಾಡುವ ಅವಶ್ಯಕತೆ ಇಲ್ಲ. ಜಿಲ್ಲೆಯ ಜನರ ಸೇವೆ ಮಾಡುವ ಇಚ್ಚೆಯಿಂದ ರಾಜಕೀಯಕ್ಕೆ ಬಂದಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಲು ಲೋಕಸಭಾ ಚುನಾವಣೆಯಲ್ಲಿ ಮತದಾರರು ನನಗೆ ಒಂದು ಅವಕಾಶ ಕಲ್ಪಿಸಿಕೊಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮನವಿ ಮಾಡಿದರು.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ, ಭಾರತೀಪುರ ಕ್ರಾಸ್, ಸಂತೇಬಾಚಹಳ್ಳಿ, ಹರಪನಹಳ್ಳಿ ಕ್ರಾಸ್ ಮತ್ತು ಸಾರಂಗಿ ಗ್ರಾಪಂ ಕೇಂದ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ನಾನು ಹೊರಗಿನ ಅಭ್ಯರ್ಥಿಯಲ್ಲ. ನಾನು ರೈತನ ಮಗ. ರೈತ ಕುಟುಂಬದಿಂದ ಬಂದಿರುವ ನನಗೆ ಜಿಲ್ಲೆಯ ರೈತರ ಸಮಸ್ಯೆಗಳ ಅರಿವಿದೆ. ನನ್ನ ಸ್ವಂತ ಪರಿಶ್ರಮದಿಂದ ಉದ್ಯಮಿಯಾಗಿದ್ದೇನೆ. ಹಣ ಮಾಡುವ ಅವಶ್ಯಕತೆ ಇಲ್ಲ. ಜಿಲ್ಲೆಯ ಜನರ ಸೇವೆ ಮಾಡುವ ಇಚ್ಚೆಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ಜಿಲ್ಲೆಯ ಜನ ನನ್ನ ಜನ ಸೇವೆಗೆ ಒಂದು ಅವಕಾಶ ಮಾಡಿಕೊಟ್ಟರೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿ ಮತದಾರರ ಋಣ ತೀರಿಸುತ್ತೇನೆ. ಜಿಲ್ಲೆಯ ಜನರ ಗೌರವಕ್ಕೆ ಧಕ್ಕೆ ಬಾರದ ರೀತಿ ಜಿಲ್ಲೆಯ ಜನರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ಬಿ.ಎಲ್.ದೇವರಾಜು, ವಿಜಯ ರಾಮೇಗೌಡ, ಕೊಡಗಹಳ್ಳಿ ಮಂಜೇಗೌಡ, ಎಂ.ಡಿ.ಕೃಷ್ಣಮೂರ್ತಿ ಪ್ರಚಾರ ಸಭೆಗಳಲ್ಲಿ ಮಾತನಾಡಿ, ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳನ್ನೂ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮತದಾರರು ವಿಪಕ್ಷಗಳ ಅಪಪ್ರಚಾರಕ್ಕೆ ಬಲಿಯಾಗದೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಹಡಿ ಮಂಜಣ್ಣ, ಮಾಳಗೂರು ಎಲ್.ಐ.ಸಿ. ಜಗದೀಶ್, ಅಘಲಯ ಗ್ರಾಪಂ ಅಧ್ಯಕ್ಷೆ ವನಿತಾಶಂಕರೇಗೌಡ, ಹಡವನಹಳ್ಳಿ ಗೋಪಾಲ್, ಅಂಗಡಿ ಕುಮಾರ್, ಊಟಿ ವೆಂಕಟೇಶ್, ಗುರುರಾಜ್, ವಿಜಯ್ ಕುಮಾರ್, ಅಣ್ಣೇಗೌಡ, ಎ.ಸಿ.ಶಂಕರೇಗೌಡ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಬಿ.ಪ್ರತಿಮಾ, ಗೊರವಿ ಕುಮಾರ್, ಹೆತ್ತಗೋನಹಳ್ಳಿ ಸುರೇಶ್, ನಾರಾಯಣಗೌಡ, ಕೃಷ್ಣ, ಅಘಲಯ ಜಗನ್ನಾಥ್, ಪ್ರಭಾಕರ್, ಶಿವರಾಂ, ದಿನೇಶ್, ನಾಗರಘಟ್ಟ ಲವಕುಮಾರ್, ಹಲಗೆಹೊಸಹಳ್ಳಿ ವೆಂಕಟೇಶ್, ಕೃಷ್ಣಸಿಂಗ್, ರಘು ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ