ಎಲ್ಲಾ ಪತ್ರಕರ್ತರಿಗೂ ಬಸ್ ಪಾಸ್‌ ನೀಡಲಿ

KannadaprabhaNewsNetwork |  
Published : Oct 01, 2024, 01:15 AM IST
ಸೂಲಿಬೆಲೆ ಯಲ್ಲಿ ನೆಡೆದ ಪತ್ರಕರ್ತರ ಸಭೆಯನ್ನು ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಉದ್ಘಾಟಿಸಿದರು, ತಾ.ಅಧ್ಯಕ್ಷ ಡಿ.ನಾಗರಾಜ್, ಮಾಜಿ ಅಧ್ಯಕ್ಷ ಬೆಟ್ಟಹಳ್ಳಿಗೋಪಿನಾಥ್, ಪ್ರಧಾನ ಕಾರ್ಯಧರ್ಶಿ ಶಿವಕುಮಾರ್ ಸ್ವರೂಪ್ ಇತರರು ಇದ್ದರು | Kannada Prabha

ಸಾರಾಂಶ

ಪತ್ರಕರ್ತರಿಗೆ ಉಚಿತ ಬಸ್‌ ಪಾಸ್ ನೀಡುವ ವಿಷಯದಲ್ಲಿ ಕೆಲವು ಷರತ್ತು ವಿಧಿಸಿರುವುದು ಗ್ರಾಮೀಣ ವರದಿಗಾರರಿಗೆ ಬೇಸರ ಉಂಟು ಮಾಡಿದೆ ಎಂದು ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.

ಸೂಲಿಬೆಲೆ: ಪತ್ರಕರ್ತರಿಗೆ ಉಚಿತ ಬಸ್‌ ಪಾಸ್ ನೀಡುವ ವಿಷಯದಲ್ಲಿ ಕೆಲವು ಷರತ್ತು ವಿಧಿಸಿರುವುದು ಗ್ರಾಮೀಣ ವರದಿಗಾರರಿಗೆ ಬೇಸರ ಉಂಟು ಮಾಡಿದೆ ಎಂದು ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಸಂಘವು ಗುರುತಿನ ಚೀಟಿ ನೀಡಿದೆ. ದಿನ ಪತ್ರಿಕೆಯ ಸಂಸ್ಥೆಗಳು ಕೇವಲ ಬಿಡಿಸುದ್ದಿಗಾರರು ಎಂಬ ಪತ್ರ ನೀಡಿದ್ದು, ಇದರಿಂದ ಅವರು ವರದಿಗಾರರು ಎಂದು ಹೇಳಲು ಸಾಧ್ಯವಿಲ್ಲ. ಮಾಧ್ಯಮ ಪಟ್ಟಿಯಲ್ಲಿ ಇರಬೇಕು ಎಂಬ ಷರತ್ತಿದೆ. ಈ ವಿಚಾರವಾಗಿ ರಾಜ್ಯ ಸಂಘವು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಗ್ರಾಮೀಣ ಭಾಗದ ಪತ್ರಕರ್ತರಿಗೂ ಸಂಘದ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಡಿ.ನಾಗರಾಜ್ ಮಾತನಾಡಿ, ಪತ್ರಕರ್ತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಪ್ರಯತ್ನ ಮಾಡುತ್ತೇವೆ. ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಇ-ಶ್ರಮ್ ಕಾರ್ಡ್‌ ಮಾಡಿಸಿಕೊಳ್ಳಿ ಇದರಿಂದ ಉಚಿತ ವಿಮೆ ಸೌಲಭ್ಯ ಪಡೆಯಬಹುದು ಎಂದರು.ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಸ್ವರೂಪ್ ಮಾತನಾಡಿ, ಸ್ಥಳೀಯವಾಗಿ ಪತ್ರಕರ್ತರಿಗೆ ಭದ್ರತೆ ಅಗತ್ಯತೆ ಇದೆ. ಆನಾರೋಗ್ಯಕ್ಕೆ ತುತ್ತಾದ ಸಮಯದಲ್ಲಿ ಸಂಘ ಸಹಾಯಕ್ಕೆ ನಿಲ್ಲುವ ಸ್ಥಿತಿಯಲ್ಲಿಲ್ಲ. ಉಳಿತಾಯ ಖಾತೆ ಮೂಲಕ ನಿಧಿ ಸಂಗ್ರಹ ಮಾಡಿ ಬಡ ಪತ್ರಕರ್ತರಿಗೆ ಸಹಾಯ ಮಾಡಬೇಕು ಎಂದರು.ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ತಾಲ್ಲೂಕು ಸಂಘದ ಮಾಜಿ ಅಧ್ಯಕ್ಷ ಬೆಟ್ಟಹಳ್ಳಿಗೋಪಿನಾಥ್, ಸದಸ್ಯರಾಧ ರವಿಕುಮಾರ್, ನಂದುಗುಡಿ ನಾಗರಾಜ್, ಮಾಕನಹಳ್ಳಿ ಮಂಜುನಾಥ್, ತರಬಹಳ್ಳಿಹರೀಶ್, ಸ್ಟುಡಿಯೋ ಆನಂದ್, ಮುನಿರಾಜು, ರಾಮಚಂದ್ರ, ಮಾಕನಹಳ್ಳಿ ಮುನಿರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ