ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ನಗರಸಭೆ ಸದಸ್ಯ ಹಾಗೂ ಬಿಜೆಪಿ ನಗರ ಅಧ್ಯಕ್ಷ ಮಾರ್ಕೆಟ್ ಮೋಹನ್ ತಿಳಿಸಿದರು ನಗರದ ಬಜಾರ್ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬಾವಿಕಟ್ಟೆ ಮಿತ್ರ ಬಳಗ, ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜಮುಖಿ ಸೇವೆ
ಶ್ರೀ ಬಾವಿಕಟ್ಟೆ ಮಿತ್ರ ಬಳಗ ಮತ್ತು ಸಮೃದ್ಧಿ ಟ್ರಸ್ಟ್‌ನ ವತಿಯಿಂದ 10ವರ್ಷಗಳಿಂದ ಕೂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ. ಸಮಾಜವು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಬೇಕಾದರೆ ನಾವು ಮಾಡುವ ಸಮಾಜಮುಖೀ ಕೆಲಸಗಳಿಂದ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಮಾಡಿ ಉನ್ನತಹುದ್ದೆಗಳನ್ನು ಪಡೆದು ಸಮಾಜದ ಸೇವೆಗಾಗಿ ಮುಡಿಪಾಗಿಡಬೇಕೆಂದು ಸಲಹೆ ನೀಡಿದರು. ಆಚಾರ್ಯ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ರವರು ಮಾತನಾಡಿ, ಮಾರ್ಕೆಟ್ ಮೋಹನ್ ರವರು ಪ್ರತಿವರ್ಷವೂ ಕೂಡ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿಕೊಂಡು ಬರುತ್ತಿರೋದು ಶ್ಲಾಘನೀಯ. ಯಾರು ಕಷ್ಟಪಟ್ಟು ಆಸಕ್ತಿಯಿಂದ ಶ್ರಮಿಸುತ್ತಾರೋ ಅವರು ಸಾಧನೆ ಮಾಡಲು ಸಾಧ್ಯ ಅದಕ್ಕೆ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳೇ ನಿದರ್ಶನ ಎಂದರು.ಕಠಿಣ ಪರಿಶ್ರಮ ಅಗತ್ಯಮುದಲೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು , ಅದಕ್ಕಾಗಿ ತಾಳ್ಮೆ ಆಸಕ್ತಿಗಳಂಥ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಆಸ್ತಿಗಳಾಗಿ ಸೇವೆ ಮಾಡಬೇಕೆಂದು ಸಲಹೆ ನೀಡಿದರು. ಕೋಟೆ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿಯಾದ ಶಬ್ರಿನ್ ತಾಜ್ ಮಾತನಾಡಿ, ಉತ್ತಮ ಶಿಕ್ಷಣದಿಂದ ಮಾತ್ರ ಉತ್ತಮ ವ್ಯಕ್ತಿತ್ವದ ನಿರ್ಮಾಣ ಆಗುತ್ತದೆ ಎಂದ ಅವರು, ನಮ್ಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮೊಟ್ಟ ಮೊದಲ ಬಾರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜನೆ ಮಾಡಿದ್ದು ಮಾರ್ಕೆಟ್ ಮೋಹನ್ ರವರು. ಅವರ ನಿಸ್ವಾರ್ಥ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಂಜುನಾಥ್ ರಾವ್, ಮಣಿಕಂಠ,ಈಶ್ವರ್, ಉದ್ಯಮಿ ಅಶ್ರಫ್ ಅಲಿ ಖಾನ್, ಸಿ.ವೆಂಕಟೇಶ್, ವೆಂಕಟಾದ್ರಿ, ತಿಮ್ಮಪ್ಪ, ಅನಿಲ್, ಅರಿತುಕೊಂಡು, ದ್ವಾರಕೀಶ್,ಗಣೇಶ್, ಮಾರುತಿ, ಭಾರತ್, ಕಿರಿಕೆರೆ ಮಾರುತಿ ಸ್ವಾಮಿಜಿ, ಸುಧಾಕೃಷ್ಣಮೂರ್ತಿ, ಅರುಣಮ್ಮ, ಅನೀತಮೋಹನ್, ಶೀಲಾ,ಸಂಗೀತ, ವಿಜಯಲಕ್ಷ್ಮೀ ಈಶ್ವರ್, ಜಯಂತಿ ,ರೂಪ,ಮಧುಸೇಟ್ ಮುಂತಾದವರು ಉಪಸ್ಥಿತರಿದ್ದರು,