ಬೈರಾಪುರ ಸರ್ಕಾರಿ ಶಾಲೆಗೆ ನೋಟುಬುಕ್,ಐಡಿ ಕಾರ್ಡು ವಿತರಣೆ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಸಹ ನೀಡಬೇಕು ಎಂದು ದಿ.ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಆರ್.ಸುಂದರೇಶ್ ಕರೆ ನೀಡಿದರು.
ಶುಕ್ರವಾರ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಬೈರಾಪುರ ಸರ್ಕಾರಿ ಶಾಲೆಯಲ್ಲಿ ಎನ್.ಆರ್.ಪುರ ಸೀನಿಯರ್ ಛೇಂಬರ್ ನಿಂದ ಮಕ್ಕಳಿಗೆ ನೋಟು ಬುಕ್, ಪೆನ್ ಹಾಗೂ ಐ.ಡಿ. ಕಾರ್ಡು ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸೀನಿಯರ್ ಛೇಂಬರ್ ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಎನ್.ಆರ್.ಪುರದಲ್ಲಿ 1990 ರಲ್ಲಿ ಜೂನಿಯರ್ ಛೇಂಬರ್ ಪ್ರಾರಂಭವಾಯಿತು. 40 ವರ್ಷ ದಾಟಿದ ಪೂರ್ವಾಧ್ಯಕ್ಷರು ಸೇರಿಕೊಂಡು 2018 ರಿಂದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪ್ರಾರಂಭಿಸಿದ್ದೇವೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಘಟಕದ ಅಧ್ಯಕ್ಷ ಕೃಪಾಲ್ ಗೌಡ ಮಾತನಾಡಿ, ನಮ್ಮ ಸೀನಿಯರ್ ಛೇಂಬರ್ ನಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಕಾದ ಶಾಲಾ ಪರಿಕರ ನೀಡುತ್ತಿದ್ದೇವೆ. ಸರ್ಕಾರಿ ಶಾಲೆಗಳು ಉಳಿಯಬೇಕಾಗಿದೆ. ಶಾಲೆ ಎಸ್.ಡಿ.ಎಂ.ಸಿ ಹಾಗೂ ಪೋಷಕರು ಒಟ್ಟಾಗಿ ಶಾಲೆಗೆ ವಾಹನದ ವ್ಯವಸ್ಥೆ ಮಾಡಿದರೆ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ಸಲಹೆ ನೀಡಿದರು.ಸೀನಿಯರ್ ಛೇಂಬರ್ ಕಾರ್ಯದರ್ಶಿ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.