ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡಿ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಒಂದು ಸರ್ಕಾರ ಮಾಡಬೇಕಾದ ಕೆಲಸ ಅವರು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಸಾವಿರಾರು ಮಹಿಳೆಯರೇ ಸಾಕ್ಷಿಯಾಗಿದ್ದಾರೆ

ಮಹಿಳಾ ವಿಚಾರಗೋಷ್ಠಿ, ಸಮಾವೇಶ ಉದ್ಘಾಟನೆಯಲ್ಲಿ ಎಸಿ ದೇವರಾಜ್‌ಶಿರಸಿ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕೆಂದು ಸಹಾಯಕ ಆಯುಕ್ತ ದೇವರಾಜ್ ಆರ್ ತಿಳಿಸಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಭಿವೃದ್ಧಿ ಯೋಜನೆಯಿಂದ ಅಂಬೇಡ್ಕರ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶವನ್ನು ಶನಿವಾರ ಉದ್ಘಾಟಸಿ ಮಾತನಾಡಿದರು.

ಶಿಕ್ಷಣ ನಮಗೆ ಭವಿಷ್ಯ ರೂಪಿಸಿದರೆ ಸಂಸ್ಕಾರ ನಮ್ಮ ನಡೆತೆ ಘನತೆ ಗೌರವ ತಂದು ಕೊಡುತ್ತದೆ. ಸಾವಿರಾರು ವರ್ಷದ ಇತಿಹಾಸ ಹೊಂದಿರುವ ನಮ್ಮ ದೇಶ ನಿಂತಿರುವುದೇ ನಮ್ಮ ಸನಾತನವಾದ ಸಂಸ್ಕ್ರತಿಯ ಸಂಸ್ಕಾರದ ಮೇಲೆ ಎಂದರು.

ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಸಾಮರ್ಥ್ಯವಂತರೆಂದು ಹೇಳಲು ನಮಗೆ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ಗಗನಯಾತ್ರಿ ದಿ. ಕಲ್ಪನಾ ಚಾವ್ಲಾ, ರಾಷ್ಟಪತಿ ದ್ರೌಪತಿ ಮುರ್ಮು ಸೇರಿದಂತೆ ಅನೇಕರು ಸಾಕ್ಷಿಯಿದ್ದಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಮೂಢನಂಬಿಕೆಗೆ ಒಳಗಾಗುತ್ತಾರೆ. ಹಳೆಯ ಪದ್ಧತಿಗಳನ್ನು ನಂಬುತ್ತಾರೆ.ಮಹಿಳೆಯರು ಮೊದಲು ಹೇರಿಕೆಯ ಪದ್ಧತಿ ಬಿಟ್ಟು ವಿಜ್ಞಾನ ಹೇಳಿಕೊಡುವ ಸತ್ಯದ ಕಡಗೆ ಬರಬೇಕೆಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ. ಒಂದು ಸರ್ಕಾರ ಮಾಡಬೇಕಾದ ಕೆಲಸ ಅವರು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಸಾವಿರಾರು ಮಹಿಳೆಯರೇ ಸಾಕ್ಷಿಯಾಗಿದ್ದಾರೆಂದು ಹೇಳಿದರು.

ಪಿಎಸ್ಐ ಮಾಲಿನಿ ಹಂಸಬಾವಿ ಮಾತನಾಡಿ, ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಹಲವಾರು ಸೆಕ್ಷನ್ ಜಾರಿಗೆ ತರಲಾಗಿದೆ. ಮಹಿಳೆಯರು ಕಾನೂನಿನ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು. ಮಹಿಳೆಯರು ಹಿಂಜರಿಕೆ ಮತ್ತು ಕೀಳರಿಮೆ ಪಟ್ಟುಕೊಳ್ಳುವದನ್ನು ನೋಡುತ್ತೇವೆ. ಸಮಾಜಕ್ಕೆ ಮಾರಕವಾಗುವ ಎಷ್ಟೋ ವಿಷಯಗಳು ಅವರಿಗೆ ತಿಳಿದಿದ್ದರೂ ಅವರು ಹೆದರಿ ತಮ್ಮಲ್ಲಿಯೇ ಬಚ್ವಿಟ್ಟುಕೊಳ್ಳುತ್ತಾರೆ. ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಇರುವುದರಿಂದ ಯಾರೂ ಹೆದರಿಕೊಳ್ಳುವ ಅವಶ್ಯಕತೆಯಿಲ್ಲವೆಂದರು.

ಮುಖ್ಯವಾಗಿ ಮಹಿಳೆಯರು ತಮ್ಮ ಮಕ್ಖಳನ್ನು ಜಾಗರೂಕತೆಯಿಂದ ಬೆಳಸಬೇಕು.ದಿನನಿತ್ಯ ಕಾಲೇಜಿಗೆ ಹೋಗಿ ಬರುವರೇ ಎನ್ನುವುದರ ಬಗ್ಗೆ ಒಂದು ಕಣ್ಣಿಡಬೇಕು. ಈ ವಯಸ್ಸಿನಲ್ಲಿ ಮಕ್ಕಳು ಕೆಟ್ಟ ಚಟಕ್ಕೆ ಬಲಿಯಾದರೆ ಮುಂದೆ ಅವರನ್ನು ತಿದ್ದುವುದು ಬಹಳಷ್ಟು ಕಷ್ಠವೆಂದು ಹೇಳಿದರು.

ಕಿತ್ತೂರ್ ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಜ್ಯೋತಿ ಭಟ್ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಸಬಲರಾಗಿದ್ದಾರೆ. ಆದರೆ ಹಿಂಜರಿಕೆ ಕೀಳರಿಮೆ ಅವರನ್ನು ಕಂದಕಕ್ಕೆ ದೂಡುತ್ತಿದೆ. ಮಹಿಳೆಯರಿಗೆ ಯಾವುದೇ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಬೇಕು. ಮಹಿಳೆಯರಿಗೆ ಶೈರ್ಯವೇ ಪ್ರಮುಖ ಅಸ್ತ್ರ ಎಂದರು. ಇಂದಿನ ಮಕ್ಕಳು ವೇಗವಾಗಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಬಹು ದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ರಾಘವೆಂದ್ರ ನಾಯ್ಕ, ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷ ವಿಜಯಾ ಗಣಪತಿ ಶೆಟ್ಟಿ, ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಗೌರಿ ನಾಯ್ಕ ಉಪಸ್ಥಿತರಿದ್ದರು.

Share this article