ಮಕ್ಕಳಿಗೆ ಊಟಕ್ಕಿಂತ ಶಿಕ್ಷಣ ನೀಡಿ

KannadaprabhaNewsNetwork |  
Published : Mar 11, 2025, 12:45 AM IST
ಸಮ್ಮೇಳನ | Kannada Prabha

ಸಾರಾಂಶ

ಇಂದಿನ ಮಕ್ಕಳಿಗೆ ಒಳ್ಳೆಯ ಊಟ, ಬಟ್ಟೆ ಹಾಗೂ ಆಹಾರಕ್ಕಿಂತ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ಅವಶ್ಯವಾಗಿದೆ ಎಂದು ಮಕ್ಕಳ ಸಾಹಿತಿ ಹ.ಮ‌.ಪೂಜಾರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮೇಲ

ಇಂದಿನ ಮಕ್ಕಳಿಗೆ ಒಳ್ಳೆಯ ಊಟ, ಬಟ್ಟೆ ಹಾಗೂ ಆಹಾರಕ್ಕಿಂತ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ಅವಶ್ಯವಾಗಿದೆ ಎಂದು ಮಕ್ಕಳ ಸಾಹಿತಿ ಹ.ಮ‌.ಪೂಜಾರ ಹೇಳಿದರು.

ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಿ ಇಲ್ಲದಿದ್ದರೆ ಭವಿಷ್ಯದಲ್ಲಿ ಹಳ್ಳಿಗಳಲ್ಲಿಯೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ನಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆದರೆ ಸಾಲದು ದೇಶಕ್ಕಾಗಿ ಹೋರಾಡುವ ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ, ವೀರ ಸಾವರ್ಕರ್ ಆಗಬೇಕು. ಇಂದು ಜಗತ್ತು ವಿಜ್ಞಾನ, ತಂತ್ರಜ್ಞಾನದ ಫಲವಾಗಿ ಸಂಕುಚಿತವಾಗುತ್ತಿದೆ. ಸಂಶೋಧನೆ ಮಾಡುವ ಸಲುವಾಗಿ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ವಿನೂತನ ಶಿಕ್ಷಣ ನೀಡುವ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಕಳುಹಿಸಿ ಎಂದು ಕೋರಿದರು.ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ಸಂಸ್ಥೆ ಅಧ್ಯಕ್ಷ ಎಸ್.ಐ.ಜೋಗೂರ, ಕಾರ್ಯದರ್ಶಿ ಪ್ರಶಾಂತ ಬಡದಾಳ, ಪಪಂ ಅಶೋಕ ಕೊಳಾರಿ, ಅರವಿಂದ ಡೋಣೂರ, ಈರಣ್ಣ ಕಲ್ಲೂರ, ಶಿವುಕುಮಾರ ಗುರುಕಾರ,ಪತ್ರಕರ್ತ ಸಿದ್ದು ಎ.ಬಿರಾದಾರ, ಶಿಕ್ಷಣ ಸಂಯೋಜಕರು ಎಂ.ಪಿ.ಬಿಸ್ಸೆ, ಬಿಆರ್‌ಪಿ ಸಾಹೇಬಗೌಡ ಬಿರಾದಾರ, ಆಡಳಿತ ಮಂಡಳಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಶೋಕ ವಾರದ, ಶಿವಾನಂದ ಮಾರ್ಸನಳ್ಳಿ, ಅಲೋಕ ಬಡದಾಳ, ವಿನಾಯಕ ಭಸ್ಮೆ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ಶಿಕ್ಷಕವೃಂದ ಹಾಜರಿದ್ದರು. ಶಿಕ್ಷಕ ಚಂದ್ರಕಾಂತ ದೇವರಮನಿ ಸ್ವಾಗಿತಿಸಿ, ಲಕ್ಷ್ಮೀಪುತ್ರ ಕಿರನಳ್ಳಿ ನಿರೂಪಿಸಿದರು. ಈ ವೇಳೆ ಸಾಧಕರಾದ ಅನಿಲ ಪೂಜಾರಿ, ರುದ್ರೇಶ ಕಲ್ಲೂರಮಠ, ಕಾವೇರಿ ಕಲ್ಲೂರಮಠ, ಸುನೀಲ ನಾಯಕ, ಮಂಜುನಾಥ ವಾಲಿಕಾರ, ಜಿನೇಶ ಶೆಟ್ಟಿ ಯನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''